“ಅಸಹಾಯಕನಿಗೆ ಬೇಕಿದೆ ಸಹಾಯ” 11 ವರ್ಷದಿಂದ ಹಾಸಿಗೆ ಮೇಲೆ ಮಲಗಿರುವ ಬೋಗಯ್ಯನಿಗೆ ಬೇಕಿದೆ ಸಹಾಯದ ಕೈಗಳು

ಸರಗೂರು:1 ಡಿಸೆಂಬರ್ 2021

*ಸ್ಟೋರಿ ಬೈ:ನಂದಿನಿ*

                ಕಿತ್ತು ತಿನ್ನೋ ಬಡತನ,ಒಪ್ಪತ್ತಿನ ಊಟಕ್ಕೂ ಕೂಲಿ ನಾಲಿ ಮಾಡಿ ಹೆಂಡತಿ ಮಕ್ಕಳನ್ನ ಸಾಕುತ್ತಿದ್ದವ ಈಗಾ ಹಾಸಿಗೆ ಮೇಲೆ ಮಲಗುವ ಸ್ಥಿತಿ ಬಂದುಬಿಟ್ಟಿದೇ.ದುಡಿಯುವ ಕೈಗಳು ಮನೆಯಲ್ಲಿಯೇ ಮಲಗಿದ್ರೇ ಜೀವನವಾದ್ರೂ ಸಾಗಿಸೋದು ಹೇಗೆ ಹೇಳಿ.ಏಳೋಕಾಗಲ್ಲ ಕೂರೋಕಾಗಲ್ಲ ಬರೋ ಬರಿ 11 ವರ್ಷದಿಂದ ಎದ್ದು ನಡೆಯೋದಕ್ಕೂ ಆಗದೇ ಮಲಗಿದ್ದಲ್ಲೇ ಮಲಗಿದ್ದಾನೆ ಆತನ ಕಷ್ಟ ಕೇಳಿದ್ರೇ ಕಣ್ಣು ಒದ್ದೆಯಾಗಲಿದೆ.

 

             ಹೌದು,ಹಾಸಿಗೆ ಮೇಲೆ ಮಲಗಿ ಕೈ ಮುಗಿದು ಸಹಾಯ ಬೇಡುತ್ತಿರುವ ಈತನ ಹೆಸರು ಬೋಗಯ್ಯ.ಸರಗೂರು ತಾಲೂಕಿನ ಬೀರಂಬಳ್ಳಿ ಗ್ರಾಮದ ನಿವಾಸಿ ಬೋಗಯ್ಯ ಅವರು 11ವರ್ಷ ದಿಂದಲೂ ಹಾಸಿಗೆ ಹಿಡಿದಿದ್ದಾರೆ. 2010 ರಲ್ಲಿ ಕೆಲಸದ ವೇಳೆ ಮನೆ ಮೇಲಿಂದ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ಸೇರಿದ್ರು.ವೈದ್ಯರು ತಪಾಸಣೆ ನಡೆಸಿ ಸ್ಪೈನಲ್ ಕಾರ್ಡ್ ಹೋಗಿದೆ ಎಂದು ತಿಳಿಸಿದ್ರು.ಆಗ ತಾನೇ ಮದುವೆಯಾಗಿದ್ದ ಬೋಗಯ್ಯರವರಿಗೆ ವೈದ್ಯರ ಮಾತು ಕೇಳಿ ಕಂಗಾಲಾಗಿದ್ದರು.ತಾಯಿ ಎಷ್ಟು ಮುಖ್ಯವಾಗಿರುತ್ತಾಳೋ ಹಾಗೇಯೇ ಬೋಗಯ್ಯರವರ ಪತ್ನಿ ಜಯಲಕ್ಷ್ಮಿ ನಿಮ್ಮ ಜೊತೆ ನಾನಿದ್ದೇನೆ ಎಂದು ತಾಯಿಯ ರೀತಿ ನೋಡಿಕೊಳ್ಳುತ್ತಿದ್ದಾರೆ.ಬೋಗಯ್ಯ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು ಒಬ್ಬ 10 ನೇ ತರಗತಿಯಲ್ಲಿ ಹಾಸ್ಟೇಲ್ ನಲ್ಲಿ ಓದುತ್ತಿದ್ದರೇ ಮತ್ತೊಬ್ಬ ಮಗ 8 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

                    ಮಲಗಿದ್ದಲೇ ಮಲಗಿದ್ದ ಬೋಗಯ್ಯ ಅವರಿಗೆ ವಾಟರ್ ಬೆಡ್ ಅವಶ್ಯಕತೆ ಇದೆ ಯಾರಾದ್ರೂ ಸಹಾಯಕ್ಕೆ ಮುಂದಾಗಿ ಎಂದು ಕುಟುಂಬ ಮನವಿ ಮಾಡಿದ್ರೂ.

ವಿಷಯ ತಿಳಿದ ರಕ್ಷಣ ಸೇವಾ ಟ್ರಸ್ಟ್ ಚಂದ್ರಿಕಾ ದೊರೆಸ್ವಾಮಿ ಹಾಗೂ ಎ ಎಸ್ ಐ ದೊರೆಸ್ವಾಮಿ ರವರು ಬೋಗಯ್ಯ ಮನೆಗೆ ತೆರಳಿ ವಾಟರ್ ಬೆಡ್ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.ಮನವಿಗೆ ಸ್ಪಂದಿಸಿದ ದೊರೆಸ್ವಾಮಿ ಚಂದ್ರಿಕಾ ದಂಪತಿಗೆ ಬೋಗಯ್ಯ ಕುಟುಂಬ ಧನ್ಯವಾದ ತಿಳಿಸಿದ್ದಾರೆ.

ಸರ್ಕಾರದಿಂದ ಬರುವ 1400 ಪಿಂಚಿಣೆಯಲ್ಲಿ ಹೆಂಡತಿ ಇಬ್ಬರು ಮಕ್ಕಳನ್ನ ಸಾಕುತ್ತಿದ್ದಾರೆ.ಇನ್ನೂ
ವೈದ್ಯರು ಬೋಗಯ್ಯರವರಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದು ಪ್ರತಿ ತಿಂಗಳು ಅಗತ್ಯ ಔಷಧಿ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ.ಚಿಕಿತ್ಸೆ ಹಾಗೂ ಔಷಧಿ ತೆಗೆದುಕೊಳ್ಳಲು ತೊಂದರೆ ಆಗುತ್ತಿದ್ದು ಬೋಗಯ್ಯ ಪತ್ನಿ ದಾನಿಗಳು ಸಹಾಯ ಮಾಡುವಂತೆ ಅಂಗಲಾಚಿದ್ದಾರೆ.

ಜಯಲಕ್ಷ್ಮಿ ಬೋಗಯ್ಯ ಪತ್ನಿ

ದುಡಿದು ಹೆಂಡತಿ ಮಕ್ಕಳನ್ನ ಸಾಕಿ ಸಲೂಹಬೇಕಿದ್ದ ಬೋಗಯ್ಯ ಸಂಕಷ್ಟದಲ್ಲಿದ್ದಾನೆ. ಸೂರಿಲ್ಲದೇ,ಔಷಧಿ ಕೊಳ್ಳಲಾಗದೇ ಕಣ್ಣೀರಾಕಿದ್ದಾನೆ.ಸರ್ಕಾರ ಸೂರು ಕಲ್ಪಿಸಿಕೊಳಡಲಿ ಎಂದು ಮನವಿ ಮಾಡುವುದಲ್ಲದೇ ದಾನಿಗಳು ಕುಟುಂಬಕ್ಕೆ ಸಹಾಯ ಮಾಡಲು ಮುಂದಾಗುವಂತೆ ನೆರವು ಕೇಳುತ್ತಿದ್ದದ್ದು ಕರಳು ಹಿಂಡುವಂತಿತ್ತು.

*Www.bharathnewstv.in ಅಭಿಯಾನ*                                *ಸಹಾಯದ ಕೈಗಳು*

ಸಹಾಯ ಮಾಡುವವರು
ಕೆನರಾ ಬ್ಯಾಂಕ್
ಚೇತನ್ .ಬಿ
A/c no:4343101001760
Ifsc code: cnrb0004343
ಎಚ್.ಡಿ.ಕೋಟೆ ಸರಗೂರು
ಮೊಬೈಲ್ ಸಂಖ್ಯೆ
7676099851 ಬೋಗಯ್ಯ

ನಂದಿನಿ ಮೈಸೂರು

Leave a Reply

Your email address will not be published. Required fields are marked *