ಒಕ್ಕಲಿಗರ ಸಮುದಾಯದ ಸೇವೆಗಾಗಿ ನನ್ನನ್ನು ಗೆಲ್ಲಿಸಿ: ಕೆ ಮಹದೇವ್

ಸಾಲಿಗ್ರಾಮ:30 ನವೆಂಬರ್ 2021

 

ಒಕ್ಕಲಿಗರ ಸಮುದಾಯದ ಪರವಾದ ಧ್ವನಿ ಆಗಿ ಕೆಲಸ ಮಾಡಲು ನಮ್ಮನ್ನು ಜಯಶೀಲರಾಗಿ ಮಾಡಬೇಕೆಂದು ಕೆ ಮಹದೇವ್ ತಿಳಿಸಿದರು. 

ಅವರು ಪಟ್ಟಣದ ಶಾಧಿಮಹಲ್ ಅಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಒಕ್ಕಲಿಗರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು ಹಲವಾರು ವರ್ಷಗಳಿಂದ ಸಮುದಾಯದ ಪರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮುದಾಯದ ಒಗ್ಗಟ್ಟಿನ ಕೆಲಸ ಮಾಡುತ್ತಾ ಬಂದ್ದಿದ್ದೇನೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮಧುಚಂದ್ರ ಮಾತನಾಡಿ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿಣಿ ಸಮಿತಿಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಿಂದ 3 ಪ್ರತಿನಿಧಿಗಳ ಆಯ್ಕೆ ಆಗ ಬೇಕಾಗಿದ್ದು ಡಾ ಕೆ ಮಹದೇವ್ ಎಂ ಬಿ ಮಂಜೇಗೌಡ ಹಾಗೂ ಕೆ ವಿ ಶ್ರೀದರ ಇವರುಗಳಿಗೆ ಮತವನ್ನು ಕೊಡುವುದರ ಮೂಲಕ ಸಂಘದಲ್ಲಿ ಮುಂದಿನ ದಿನಗಳಲ್ಲಿ ಸಮುದಾಯದ ಬಡ ಜನರ ಹಾಗೂ ಇತರೆ ಕಾರ್ಯಗಳನ್ನು ಮಾಡಲು ಸಹಕಾರಿ ಆಗಲಿ ಎಂದರು. 

ಸಭೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಎಂ ಬಿ ಮಂಜೇಗೌಡ ಕೆ ವಿ ಶ್ರೀಧರ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ ಜೆಡಿಎಸ್ ವಕ್ತಾರರಾದ ಕೆ ಎಲ್ ರಮೇಶ್ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸೋಮಣ್ಣ  ವಿಎಸ್ ಎಸ್ ಎನ್ ಅಧ್ಯಕ್ಷ ನಾಗೇಂದ್ರ ಎಸ್ ಆರ್ ದಿನೇಶ್ ಹೆಚ್ ಡಿ ರಾಘವೇಂದ್ರ ಮೂಲೆಪೆಟ್ಲು ಮಹದೇವ್ ಹೆಬ್ಬಾಳ್ ಶಿವಣ್ಣ ರಾಜು ವೈನ್ಸ್ ಮಾಲೀಕರಾದ ರಾಜು ಗ್ರಾಂಪಂ ಸದಸ್ಯರಾದ ಎಸ್ ಆರ್ ಪ್ರಕಾಶ್ ಹರೀಶ್ ಮುಖಂಡರಾದ ಬೊಮ್ಮರಾಯಿಗೌಡರು ಜಯರಾಮೇಗೌಡ ಚಂದ್ರಣ್ಣ ಅನಂತು ಇತರರು ಇದ್ದರು. 

Leave a Reply

Your email address will not be published. Required fields are marked *