ಮೈಸೂರು:30 ನವೆಂಬರ್ 2021
ನಂದಿನಿ
‘ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿಲ್ಲ. ಎರಡು ಡೋಸ್ ಕೋವಿಡ್ ಲಸಿಕೆ ತೆಗೆದುಕೊಂಡಿದ್ದೇವೆ. ಕೊರೊನಾ ಬಂದರೂ ಏನು ಆಗುವುದಿಲ್ಲ. ಸರ್ಕಾರವು ನಿಯಮಗಳನ್ನು ಸಡಿಲಗೊಳಿಸಿದೆ’ ಎಂದು ಅದೆಷ್ಟೋ ಮಂದಿ ಮಾಸ್ಕ್ ಧರಿಸದೆ ಆರಾಮಾಗಿ ಓಡಾಡಿಕೊಂಡಿದ್ದಾರೆ ಕೊರೊನಾ ನಿಯಮ ಪಾಲಿಸಿ, ಜಾಗೃತರಾಗಿರಿ ಎಂದು ಶಾಸಕ ಜಿಟಿ ದೇವೇಗೌಡ ತಿಳಿಸಿದ್ದಾರೆ.
ಮತ್ತೆ ಕೊರೋನಾ ಹೊಸ ತಳಿ `ಓಮಿಕ್ರಾನ್’ (Omicron) ಹುಟ್ಟಿಕೊಂಡಿದೆ.ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಬಂದಿದೆ ನಿಜ. ಆದರೆ ಕೊರೊನಾ ಸಂಪೂರ್ಣವಾಗಿ ತೊಲಗಿಲ್ಲ. ಹೀಗಾಗಿ ಸದಾ ಎಚ್ಚರಿಕೆ ವಹಿಸುವುದು ಅಗತ್ಯ. ಮೈ ಮರೆತರೆ ಕೊರೊನಾದ ಮತ್ತೊಂದು ಅಲೆ ಅಪ್ಪಳಿಸಲಿದೆ. ಆರೋಗ್ಯದ ಕಡೆ ಗಮನ ಹರಿಸಿ ಎಂದು ಮನವಿ ಮಾಡಿದ್ದಾರೆ.