ಮೈಸೂರು:10 ಜನವರಿ 2022
ನಂದಿನಿ ಮೈಸೂರು
ರಸ್ತೆಗಳನ್ನು ಅಗೆದು ಯು.ಜಿ ಕೇಬಲ್ ಅಳವಡಿಸಿ ಸರಿಯಾಗಿ ಗುಂಡಿ ಮುಚ್ಚದೆ ಇರುವುದನ್ನು ತೀಕ್ಷ್ಣವಾಗಿ ಪರಿಗಣಿಸಿದ ಶಾಸಕ ಎಲ್.ನಾಗೇಂದ್ರರವರು ಚೆಸ್ಕಾಂ ಯು.ಜಿ. ಕೇಬಲ್ ಯೋಜನೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದೊಡ್ಡಮನಿ ರವರನ್ನು ಪಾದಯಾತ್ರೆ ವೇಳೆ ತರಾಟೆಗೆ ತೆಗೆದುಕೊಂಡರು.
ಕೂಡಲೇ ಈ ಪ್ರದೇಶಗಲ್ಲಿ ಸಂಚರಿಸಿ ಯು,ಜಿ.ಕೇಬಲ್ ಅಳವಡಿಸಲು ತೆಗೆಯಲಾದ ಗುಂಡಿಗಳನ್ನು ಸರಿಯಾದ ಕ್ರಮದಲ್ಲಿ ಮುಚ್ಚಿ ರಸ್ತೆಯನ್ನು ಯತಾಸ್ಥಿತಿಗೆ ತರಲು ಕ್ರಮವಹಿಸಬೇಕೆಂದು ಇಲ್ಲವಾದಲ್ಲಿ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡಲಾಗುವುದೆಂದು ಸೂಚಿಸಿದರು.
ಈ ಕುರಿತಂತೆ ಮಹಾನಗರ ಪಾಲಿಕೆಯ ವಲಯ ಕಚೇರಿ-06 ರ ಸಹಾಯಕ ಆಯುಕ್ತ ಮಂಜುನಾಥ್ ಇವರಿಗೆ ಈ ಕುರಿತು ನಿಗಾವಹಿಸಿ ಸಮಸ್ಯೆ ಪರಿಹರಿಸಲು ಕ್ರಮವಹಿಸುವಂತೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಪ್ರಮೀಳ ಭರತ್,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಾದೇಶ್,ಮಹೇಶ್,ಸೋಮಶೇಖರ್ ರಾಜು,ಅನೂಜ್ ಸರಸ್ವತ್,ದೀನೇಶ್ ಗೌಡ,ರಮೇಶ್,ಸಚಿನ್,ತನುಜಾ ಮಹೇಶ್,ಚರಣ್ ಸೇರಿದಂತೆ ಇತರರು ಭಾಗಿಯಾಗಿದ್ದರು.