ಸರಗೂರು:10 ಜನವರಿ 2022
ಆಲನಹಳ್ಳಿ ಹಾಡಿಯ ಜನ ಸತ್ತವರ ಶವ ಸಂಸ್ಕಾರಕ್ಕೆ ಜಾಗವಿಲ್ಲ ನಮಗೆ ಸ್ಮಶಾನ ಜಾಗ ನೀಡುವಂತೆ ಹಾಡಿ ಜನ ಶವವಿಟ್ಟುಕೊಂಡು ಕಣ್ಣಿರಾಕಿದ್ರೂ. ತದ ನಂತರ
ತಾಲ್ಲೂಕಿನ ತಹಶೀಲ್ದಾರ್ ಚಲುವರಾಜು ಮತ್ತು ಸಿಬ್ಬಂದಿ ಆಲನಹಳ್ಳಿ ಹಾಡಿಗೆ ಭೇಟಿ ನೀಡಿ ಶವ ಸಂಸ್ಕಾರಕ್ಕೆ ಜಾಗ ಗುರುತಿಸುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಗ್ರಾಮಸ್ಥರ ಸಮ್ಮುಖದಲ್ಲಿ ತಹಶೀಲ್ದಾರ್ ಚಲುವರಾಜು ಮಾತುಕತೆ ನಡೆಸಿ ಆಲನಹಳ್ಳಿ ಹಾಡಿಯ ಜನರಿಗೆ ಅನುಕೂಲ ಮಾಡಿಕೊಡುವಂತೆ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಬೆಟ್ಟಸ್ವಾಮಿ ಮಾತನಾಡಿ ಇಲ್ಲಿನ ಹಾಡಿಯ ತುಂಬಾ ತೊಂದರೆಗಳು ಅನುಭವಿಸುತ್ತಿದ್ದಾರೆ.ಕಾಡು ಕುರುಬ ಜನರು ಕಾಡಿನಿಂದ ನಾಡಿಗೆ ಬಂದು ಜೀವನವನ್ನು ಸಾಗಿಸುತ್ತಿದ್ದಾರೆ. ಸರ್ಕಾರದಿಂದ ಸಿಗುವ ಸೌಲಭ್ಯ ಇವರಿಗೆ ಸಿಗುತ್ತಿಲ್ಲ ಎಂದರು.
ಹಾಡಿ ಮಹಿಳೆಯೊಬ್ಬರು ಮಾತನಾಡಿ, “ನಮಗೆ ಬಾಳ ತೊಂದ್ರಿ ಕೊಡ್ತಾರಾ. ಈ ಸೋಲರ್ ತಂತಿ ಇಲ್ಲಿ ಇರಕೂಡದು. ನಾವು ಹಿಂಗೆ ತಂದು ಮಡಿಕಂಡು, ಅವರು ತಗೀಗಂಟ ಹಿಂಗೆ ಕಾಯ್ಕೊಂಡು ನಿಂತಿರ್‍ಬೇಕು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಡಿಯ ಪುರುಷರೊಬ್ಬರು ಮಾತನಾಡಿ, “ಹಿರಿಯರ ಕಾಲದಲ್ಲಿ ನಡೆದಂತೆಯೇ ಈಗಲೂ ನಡೆಯಬೇಕು. ಬರೋಕೆ ನಮಗೆ ಜಾಗ ಇಲ್ಲ. ಸರ್ಕಾರ ನಮಗೆ ಏನು ಮಾಡಿಕೊಟ್ಟಿದೆ?” ಎಂದು ಕೇಳಿದ್ದಾರೆ
ತದನಂತರ ತಹಸೀಲ್ದಾರ್ ಚೆಲುವರಾಜು ಅವರು ಮಾತನಾಡಿ ಆಲನಹಳ್ಳಿ ಹಾಡಿಗೆ ಇಂದು ಭೇಟಿ ನೀಡಿದ್ದೆನು. ಸ್ಮಶಾನಕ್ಕಾಗಿ ಜಾಗವನ್ನು ಗುರುತು ಮಾಡಿದ್ದೇವೆ. ಸರ್ಕಾರಕ್ಕೆ ಪ್ರಸ್ತಾವನೆ ಕಳಿಹಿಸಿದ್ದೇವೆ. ಸರ್ಕಾರ ಮಂಜೂರು ಮಾಡಿ ಕಳುಹಿಸಲಿದೆ” ಎಂದು ತಿಳಿಸಿದರು.
ಸಂಜಯ್ ಕೆ ಬೆಳತೂರು ಜೊತೆ ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು