ನಂದಿನಿ ಮೈಸೂರು
ಕನ್ನಡ ಚಲನಚಿತ್ರ ನಟರಾದ
ಡಾ.ವಿಷ್ಣುವರ್ಧನ್ ರವರ ಜನ್ಮ ದಿನ ಆಚರಣೆ ಮತ್ತು ಆಹಾರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸ್ವಪ್ನ ಬುಕ್ ಹೌಸ್ ಬಳಿ ಮದ್ದೂರು ಟೆನ್ನಿಸ್ ಎದುರು ಕೃಷ್ಣ ರಾಜ ಆಸ್ಪತ್ರೆಯ ಕಲ್ಲು ಬಿಲ್ಡಿಂಗ್ ನ ಗಾಯತ್ರಿ ಭವನ ಆಟೋ ನಿಲ್ದಾಣದ ಬಳಿ ವಿಷ್ಣುವರ್ಧನ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ವಿತರಣೆ ಮಾಡಿದರು.
ಜೂನಿಯರ್ ವಿಷ್ಣು ವರ್ದನ್ ಹಾಗೂ
ಅಭಿಮಾನಿಗಳು ಓ ಗೆಳಯ ಜೀವದ ಗೆಳಯೇ ಎಂಬ ಹಾಡಿಗೆ ಹೆಜ್ಜೆ ಹಾಕಿದರು.
ಕಾರ್ಯಕ್ರಮದಲ್ಲಿ ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ರಾಜ್ಯಾಧ್ಯಕ್ಷರು ಗಿರೀಶ್ ಶಿವಾರ್ಚಕ ಮಾತನಾಡಿ ಗಾಯತ್ರಿ ಭವನ ಆಟೋ ನಿಲ್ದಾಣ ಮತ್ತು ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಜೊತೆಯಾಗಿ ವಿಷ್ಣು ರವರ ಹುಟ್ಟು ಹಬ್ಬ ಆಚರಿಸುತ್ತಿದ್ದೇವೆ.ವಿಷ್ಣುವರ್ದನ್ ರವರಿಗೆ ಪದೇ ಪದೇ ಅನ್ಯಾಯವಾಗುತ್ತಿದೆ.ಆದಷ್ಟು ಬೇಗ ವಿಷ್ಣು ಸ್ಮಾರಕ ಅಭಿವೃದ್ಧಿಪಡಿಸಬೇಕು.ಇಲ್ಲವಾದ್ದಲ್ಲಿ ಅಭಿಮಾನಿಗಳು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಗಾಯತ್ರಿ ಭವನ ಆಟೋ ನಿಲ್ದಾಣದ ಅಧ್ಯಕ್ಷ ಚಂದ್ರು, ರವಿ ಶಂಕರ್ ತಿಬ್ಬ ಶ್ರೀಧರ್ ಮಧು ಹೇಮಂತ್ ಚೇತು ಹಾಗೂ ಸಮಾಜ ಸೇವಕರಾದ ಮಹದೇವಣ್ಣ ಇನ್ನಿತರು ಭಾಗಿಯಾದ್ದರು.