ಕರ್ನಾಟಕದಲ್ಲಿ ವಿ (Vi) ಬಳಕೆದಾರರಿಗೆ ಡೇಟಾ ವೇಗ ಮತ್ತು ಸೇವಾ ವ್ಯಾಪ್ತಿಯ ಹೆಚ್ಚಳಕ್ಕೆ, ನೆಟ್‌ವರ್ಕ್ ಮೂಲಸೌಕರ್ಯವನ್ನು ವಿಸ್ತರಿಸಿದ ವಿ (Vi)

ನಂದಿನಿ ಮೈಸೂರು

ಕರ್ನಾಟಕದಲ್ಲಿ ವಿ (Vi) ಬಳಕೆದಾರರಿಗೆ ಡೇಟಾ ವೇಗ ಮತ್ತು ಸೇವಾ ವ್ಯಾಪ್ತಿಯ ಹೆಚ್ಚಳಕ್ಕೆ, ನೆಟ್‌ವರ್ಕ್ ಮೂಲಸೌಕರ್ಯವನ್ನು ವಿಸ್ತರಿಸಿದ ವಿ (Vi)

ನೆಟ್‌ವರ್ಕ್ ಸಾಮರ್ಥ್ಯವನ್ನು ಈ ಲೇಯರ್ನಲ್ಲಿ ದ್ವಿಗುಣಗೊಳಿಸಲು, 2100 MHz ಬ್ಯಾಂಡ್‌ನ ತರಂಗಾಂತರವನ್ನು ಮೇಲ್ದರ್ಜೆಗೇರಿಸಲಾಗಿದೆ
ಇತ್ತೀಚಿನ 2024ರ ಜೂನ್‌ನಲ್ಲಿ ನಡೆದ ಹರಾಜಿನಲ್ಲಿ, 900 MHz ಬ್ಯಾಂಡ್‌ನ ತರಂಗಾಂತರವನ್ನು ಹೆಚ್ಚುವರಿಯಾಗಿ ಖರೀದಿಸಲಾಗಿದೆ
ದೇಶದ ಪ್ರಮುಖ ದೂರಸಂಪರ್ಕ ಸೇವಾಸಂಸ್ಥೆಯಾಗಿರುವ ವಿ (Vi) ಬೆಂಗಳೂರು, ಮೈಸೂರು ಹಾಗೂ ತುಮಕೂರು ನಗರಗಳಲ್ಲಿನ ತನ್ನ ಬಳಕೆದಾರರಿಗೆ ತ್ವರಿತಗತಿಯ ಡೇಟಾ ವೇಗ ಒದಗಿಸಲು, ತನ್ನ ನೆಟ್‌ವರ್ಕ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿರುವುದಾಗಿ ಪ್ರಕಟಿಸಿದೆ.
ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಕಂಪನಿಯು ತನ್ನ LTE 2100 MHz ಬ್ಯಾಂಡ್‌ನ ಸಾಮರ್ಥ್ಯವನ್ನು 5 MHz ನಿಂದ 10 MHz- ಗೆ ವಿಸ್ತರಿಸುವ ಮೂಲಕ ದ್ವಿಗುಣಗೊಳಿಸಿರುವ ಮಾಹಿತಿ ಹಂಚಿಕೊಂಡಿದೆ. ಇದರಿಂದ ಗ್ರಾಹಕರಿಗೆ ತ್ವರಿತಗತಿಯ ಸಂಪರ್ಕಜಾಲ ವೇಗ ಮತ್ತು ಸುಧಾರಿತ ಅಂತರ್ಜಾಲ ಜಾಲಾಡುವ (ಇಂಟರ್‌ನೆಟ್‌ ಬ್ರೌಸಿಂಗ್) ಅನುಭವಗಳನ್ನು ಒದಗಿಸಲಿದೆ.
ಇತ್ತೀಚೆಗೆ ಖರೀದಿಸಿದ 900 MHz ಬ್ಯಾಂಡ್‌ನ ನಿಯೋಜನೆಯೊಂದಿಗೆ ವಿ (Vi) ತನ್ನ ನೆಟ್‌ವರ್ಕ್ಅನ್ನು ರಾಜ್ಯಾದ್ಯಂತ ಬಲಪಡಿಸಲು ಮತ್ತಷ್ಟು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಮುಂಬರುವ ದಿನಗಳಲ್ಲಿ ಒಳಾಂಗಣ ಸಂಪರ್ಕಜಾಲ ವ್ಯಾಪ್ತಿ ಹೆಚ್ಚಿಸಲು ಅದರಲ್ಲೂ ವಿಶೇಷವಾಗಿ ಉಪನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನನಿಬಿಡ ಪ್ರದೇಶಗಳಲ್ಲಿ L900 ತರಂಗಾಂತರ ಬಳಸಲು ಉದ್ದೇಶಿಸಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ತನ್ನ ಬದ್ಧತೆ ಬಲಪಡಿಸುವ ಮೂಲಕ, ರಾಜ್ಯದೊಳಗೆ ತನ್ನ ಸೇವಾ ವಿತರಣೆ ಮತ್ತು ಸೇವೆಯ ವ್ಯಾಪ್ತಿ ವಿಸ್ತರಿಸಲು ದಾವಣಗೆರೆಯಲ್ಲಿ ಹೊಸ ಸೇವಾ ವಲಯದ ಆರಂಭವನ್ನು ವಿ (Vi) ಪ್ರಕಟಿಸಿದೆ. ಈ ಎಲ್ಲಾ ಪ್ರಯತ್ನಗಳು ಕರ್ನಾಟಕದಾದ್ಯಂತ ಉತ್ತಮ ಸಂಪರ್ಕ ಮತ್ತು ಉತ್ತಮ ಗ್ರಾಹಕ ಅನುಭವವನ್ನು ಒದಗಿಸುವ ವಿ-ಯ ಬದ್ಧತೆಯ ಭಾಗವಾಗಿದೆ. ಹೀಗಾಗಿ ತನ್ನ ಬಳಕೆದಾರರು ಉನ್ನತ ಗುಣಮಟ್ಟ ಧ್ವನಿ ಮತ್ತು ಇದುವರೆಗಿನ ಅತ್ಯುತ್ತಮ ಸಂಪರ್ಕಜಾಲವಾದ ವಿ ಗಿಗಾನೆಟ್‌ (Vi GIGAnet) ನಲ್ಲಿ ತ್ವರಿತಗತಿಯ ಡೇಟಾ ವೇಗದಿಂದ ಪ್ರಯೋಜನ ಪಡೆಯುವುದನ್ನು ಖಚಿತಪಡಿಸುತ್ತದೆ.
ವಿ-ಯ ಸಂಪರ್ಕಜಾಲವು ಸದ್ಯಕ್ಕೆ ಕರ್ನಾಟಕದಲ್ಲಿ ಅಂದಾಜು ಶೇ 85ರಷ್ಟು ಜನಸಂಖ್ಯೆಯನ್ನು ಒಳಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ, ವಿ (Vi) ಕರ್ನಾಟಕದಲ್ಲಿ ತನ್ನ ಪ್ರಮುಖ ಸಂಪರ್ಕಜಾಲವನ್ನು ಮೇಲ್ದರ್ಜೆಗೆ ಏರಿಸಿದೆ. ಇದು 5G ಸನ್ನದ್ಧತೆಯನ್ನು ಖಾತ್ರಿಪಡಿಸಲಾಗಿದೆ. ಗ್ರಾಹಕರು E-SIMನ ಪ್ರಯೋಜನಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಇದು ವೊಲ್ಟೆ ಆರ್ಕಿಟೆಕ್ಚರ್ ಅನ್ನು ವರ್ಧಿಸಿದೆ. ಒಳಾಂಗಣ ಧ್ವನಿ ಸೇವೆಗಳನ್ನು ಸುಧಾರಿಸಲು ವೊ-ವೈಫೈ( Vo-wifi ) ಅನ್ನು ಜಾರಿಗೆ ತಂದಿದೆ. ವಿ ಸ್ಟೋರ್ಸ್‌, ವಿ ಶಾಪ್ಸ್‌ ಮತ್ತು ವಿ ಮಿನಿ ಸ್ಟೋರ್ಸ್‌ ಸೇರಿದಂತೆ 140ಕ್ಕೂ ಹೆಚ್ಚು ಮಳಿಗೆಗಳ ಮೂಲಕ ಕಂಪನಿಯು ರಾಜ್ಯದಲ್ಲಿ ತನ್ನ ರಿಟೇಲ್‌ ವಹಿವಾಟನ್ನು ವಿಸ್ತರಿಸಿದೆ. ತನ್ನ ಗ್ರಾಹಕರಿಗೆ ಹೆಚ್ಚಿನ ಸೇವೆ ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಸುಮಾರು 360 ವಿತರಕರು ಮತ್ತ 19,000 ರೀಚಾರ್ಜ್ ಮಳಿಗೆಗಳೊಂದಿಗೆ ರಾಜ್ಯದಲ್ಲಿ ವ್ಯಾಪಕವಾದ ವಿತರಣಾ ಜಾಲ ಹೊಂದಿದೆ.
ಸುದ್ದಿಗೋಷ್ಠಿಯಲ್ಲಿ ಈ ಎಲ್ಲಾ ಬೆಳವಣಿಗೆಗಳ ಕುರಿತು ಮಾತನಾಡಿದ ವಿ-ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿಜಿತ್ ಕಿಶೋರ್ ಅವರು: “4ಜಿ ಸೇವಾ ವ್ಯಾಪ್ತಿ ವಿಸ್ತರಿಸುವ ಮೂಲಕ ಮತ್ತು ಡೇಟಾ ವೇಗವನ್ನು ಹೆಚ್ಚಿಸುವ ಮೂಲಕ ನಮ್ಮ ಗ್ರಾಹಕರಿಗೆ ಅತ್ಯುತ್ತಮ ನೆಟ್‌ವರ್ಕ್ ಅನುಭವವನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಗ್ರಾಹಕರು ಉತ್ತಮ ಆಯ್ಕೆಗಳನ್ನು ಬಯಸಿದಂತೆ, ವಿಭಿನ್ನ ಅನುಭವವನ್ನು ನೀಡಲು ನಾವು ನಮ್ಮ ಪಾಲುದಾರರ ಜೊತೆಗೆ ಡಿಜಿಟಲ್ ಪೂರಕ ವ್ಯವಸ್ಥೆಯನ್ನು ನಿರ್ಮಿಸಿದ್ದೇವೆ. ಗೇಮಿಂಗ್, ಮನರಂಜನೆ, ಕ್ಲೌಡ್ ಗೇಮಿಂಗ್, ನಾಗರಿಕ ಸೇವೆಗಳ ಬಿಲ್ ಪಾವತಿ ಸೇರಿದಂತೆ ಗ್ರಾಹಕರಿಗೆ ಉಪಯುಕ್ತಕರವಾದ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿ ಅಪ್ಲಿಕೇಷನ್ (ಆ್ಯಪ್) ಬಹು-ಉಪಯುಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ವಿ ಆ್ಯಪ್, ವಿ-ಯ ಡಿಜಿಟಲ್ ಕೊಡುಗೆಗಳ ಮೂಲಾಧಾರವಾಗಿದೆ, ಬಳಕೆದಾರರಿಗೆ 400 ಕ್ಕೂ ಹೆಚ್ಚು ಲೈವ್ ಟಿ ವಿ ಚಾನೆಲ್‌ಗಳು, ವಿಡಿಯೊ ಆನ್ ಡಿಮ್ಯಾಂಡ್ ( ವಿಒಡಿ) ವಿಷಯ, ಫ್ರೀ ಫೈರ್ ಮತ್ತು ಕಾಲ್ ಆಫ್ ಡ್ಯೂಟಿಯಂತಹ ಜನಪ್ರಿಯ ಗೇಮ್ ಗಳು ಮತ್ತು ವಿದ್ಯುತ್ ಬಳಕೆಯ ಬಿಲ್ ಪಾವತಿಗಳಂತಹ ನಾಗರಿಕ ಸೇವೆಗಳ ಬಿಲ್ ಪಾವತಿ ಸೌಲಭ್ಯಗಳನ್ನು ಒದಗಿಸುತ್ತದೆ. ನೀರು, ಎಲ್‌ಪಿಜಿ, ಫಾಸ್ಟ್ಯಾಗ್ ರೀಚಾರ್ಜ್‌ಗಳು ಮತ್ತು ಇನ್ನಷ್ಟು.ಅನಿಯಮಿತ ರಾತ್ರಿ-ಸಮಯದ (ಬೆಳಿಗ್ಗೆ 12 ರಿಂದ 6 ಗಂಟೆಯವರೆಗೆ) ಡೇಟಾ, ಅನಿಯಮಿತ ಕರೆ, ಡೇಟಾ ರೋಲ್‌ ಓವರ್ ಮತ್ತು ಉಚಿತ ಒಟಿಟಿ ಚಂದಾದಾರಿಕೆಗಳೊಂದಿಗೆ ಸ್ಟ್ರೀಮಿಂಗ್ ಪ್ರಯೋಜನಗಳನ್ನು ಒದಗಿಸಿ ,ವಿ ಹೀರೊ ಅನ್‌ ಲಿಮಿಟೆಡ್ (Vi Hero Unlimited Plan) ಯೋಜನೆಯಂತಹ ಕೊಡುಗೆಗಳೊಂದಿಗೆ ಗ್ರಾಹಕರ ಬೇಡಿಕೆಗಳನ್ನು ಪೂರೈಸುವಲ್ಲಿ ವಿ (Vi) ಹೊಸತನವನ್ನು ಮುಂದುವರೆಸಿದೆ. ಕಂಪನಿಯು ಪೋಸ್ಟ್‌ಪೇಯ್ಡ್ ಗ್ರಾಹಕರಿಗಾಗಿ ‘ಚೂಸ್ ಯುವರ್ ಬೆನಿಫಿಟ್ʼ ಸೌಲಭ್ಯವನ್ನೂ ಪರಿಚಯಿಸಿದೆ. ಇದು ಅವರ ಅಗತ್ಯಗಳಿಗೆ ಅನುಗುಣವಾಗಿ, ಅವರ ಇಷ್ಟವಾದ ಬೆನಿಫಿಟ್ಸ್ ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಇತ್ತೀಚಿನ ಕೆಲ ಹೊಸ ಕೊಡುಗೆಗಳು ಹೀಗಿವೆ:
ವಿ ಗ್ಯಾರಂಟಿ ಪ್ರೋಗ್ರಾಂ: ವಿ ಗ್ರಾಹಕರು ಒಂದು ವರ್ಷದಲ್ಲಿ 130GB ಖಾತರಿಯ ಹೆಚ್ಚುವರಿ ಡೇಟಾವನ್ನು ಪಡೆಯುತ್ತಾರೆ, ವಿ ಆ್ಯಪ್ ಮೂಲಕ ಆಯ್ಕೆ ಮಾಡಿದ ನಂತರ 13 ಸತತ ರೀಚಾರ್ಜ್‌ಗಳಿಗೆ ಪ್ರತಿ 28 ದಿನಗಳಿಗೊಮ್ಮೆ 10 GB ಡೇಟಾವನ್ನು ಸ್ವಯಂಚಾಲಿತವಾಗಿ ಗ್ರಾಹಕರ ಖಾತೆಗೆ ಸೇರ್ಪಡೆ ಮಾಡಲಾಗುತ್ತದೆ. ಈ ಕೊಡುಗೆಯು 5G ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ವಿ (Vi) ಗ್ರಾಹಕರಿಗೆ ಹಾಗು, ಹೊಸ 4G ಸ್ಮಾರ್ಟ್‌ಫೋನ್‌ನೊಂದಿಗೆ, ₹299 ಅಥವಾ ಹೆಚ್ಚಿನ ದೈನಂದಿನ ಅನಿಯಮಿತ ಡೇಟಾ ಪ್ಯಾಕ್ ರಿಚಾರ್ಜ್ಗೆ ಅನ್ವಹಿಸುತದೆ.
ನವೀಕರಿಸಿದ ರೆಡ್ ಎಕ್ಸ್ (REDX) ಪ್ಲ್ಯಾನ್‌ ಯೋಜನೆಯು ಪೋಸ್ಟ್‌ಪೇಯ್ಡ್‌ನಲ್ಲಿ ₹ 1201ರ ಮಾಸಿಕ ದರದೊಂದಿಗೆ ತಡೆರಹಿತ ಸರ್ಫಿಂಗ್, ಸ್ಟ್ರೀಮಿಂಗ್ ಮತ್ತು ಸಂಪರ್ಕಕ್ಕಾಗಿ ಅನಿಯಮಿತ ಡೇಟಾವನ್ನು ಒದಗಿಸುತ್ತದೆ. ಎಲ್ಲಾ ವಿ (Vi) ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ ಆದ್ಯತೆಯ ಗ್ರಾಹಕ ಸೇವೆಯೊಂದಿಗೆ ನೆಟ್‌ಫ್ಲಿಕ್ಸ್ ( Netflix ) ಮೂಲ ಯೋಜನೆ, 6-ತಿಂಗಳ ಸ್ವಿಗ್ಗಿ ಒನ್ ಸದಸ್ಯತ್ವ, 7-ದಿನದ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್‌ನಂತಹ ಪೂರಕ ಕೊಡುಗೆಗಳಿಗೆ ಚಂದಾದಾರರಾಗಲು ಗ್ರಾಹಕರಿಗೆ ಆಯ್ಕೆಗಳನ್ನು ನೀಡುತ್ತದೆ.
ವಿ (Vi) ಈಗ, ನೆಟ್‌ಫ್ಲಿಕ್ಸ್‌ ನ ಎರಡು ಚಂದಾದಾರಿಕೆ ಯೋಜನೆಗಳನ್ನು (70 ದಿನಗಳಿಗೆ ₹1198 ಮತ್ತು 84 ದಿನಗಳಿಗೆ ₹1599) ಒದಗಿಸುತ್ತಿದೆ. ಈ ಪ್ಯಾಕ್‌ಗಳು ಹೀರೊ ಅನ್‌ಲಿಮಿಟೆಡ್‌ನ ವಿಶೇಷ ಪ್ರಯೋಜನಗಳಾದ ರಾತ್ರಿ 12 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಅನಿಯಮಿತ ಡೇಟಾ, ವಾರಾಂತ್ಯದ ಡೇಟಾ ರೋಲ್‌ಓವರ್ ಮತ್ತು ಡೇಟಾ ಡಿಲೈಟ್ಟನ್ನು ಗ್ರಾಹಕರಿಗೆ ನೀಡುತ್ತವೆ
ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಗಳಿಗೆ ತನ್ನ ಬಳಕೆದಾರರಿಗೆ ಕೈಗೆಟುಕುವ ಬೆಲೆಯಲ್ಲಿ ಹೆಚ್ಚಿನ ಮನರಂಜನೆಯನ್ನು ಒದಗಿಸಲು, ವಿ ಮೂವೀಸ್ ಆ್ಯಂಡ್ ಟಿ ವಿ ಆ್ಯಪ್ ನ್ನು ಪರಿಚಯಿಸಿದೆ. ಈಗ 17 ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು 350 ಲೈವ್ ಟಿ ವಿ ಚಾನೆಲ್‌ಗಳಿಗೆ ಒಂದೇ ಚಂದಾದಾರಿಕೆಯಲ್ಲಿ ಬಳಕೆಗೆ ಅವಕಾಶ ನೀಡುತ್ತದೆ. ಎರಡು ಹೊಸ ಚಂದಾದಾರಿಕೆ ಯೋಜನೆಗಳನ್ನು ಪ್ರಾರಂಭಿಸಿದೆ – ವಿ ಮೂವೀಸ್ ಆ್ಯಂಡ್ ಟಿ ವಿ ಪ್ಲಸ್ ತಿಂಗಳಿಗೆ ರೂ. 248 ಮತ್ತು ವಿ ಮೂವೀಸ್ ಆ್ಯಂಡ್ ಟಿ ವಿ ಲೈಟ್ ತಿಂಗಳಿಗೆ ₹154 ಬೆಲೆಗೆ ದೊರೆಯುತ್ತದೆ.
ಒಟಿಟಿ ಪ್ಲಾಟ್‌ಫಾರ್ಮ್‌ಗಳ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ವಿ (Vi) ತನ್ನ ವಿವಿಧ ಸೇವಾ ಯೋಜನೆಗಳನ್ನು ವಿಸ್ತರಿಸುತ್ತಿದೆ.
ಸದ್ಯಕ್ಕೆ ಇದು ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌, ಸೋನಿ ಲಿವ್‌ ಮತ್ತು ಸನ್‌ನೆಕ್ಸ್ಟ್‌ ಜೊತೆಗೆ ಒಟಿಟಿ ಸೇವೆಗಳನ್ನು ಒದಗಿಸುತ್ತಿದೆ. ಇನ್ನೂ ಹೆಚ್ಚಿನ ಪಾಲುದಾರಿಕೆಗಳು ಕಾರ್ಯಗತಗೊಳ್ಳುವ ಹಂತದಲ್ಲಿವೆ.

Leave a Reply

Your email address will not be published. Required fields are marked *