ನಂದಿನಿ ಮೈಸೂರು
ವರುಣ ಕ್ಷೇತ್ರದ ಉಪ್ಪಾರ, ಗಾಣಿಗ, ಮಡಿವಾಳ ಸಮಾಜದ ಸಮಾವೇಶ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣರವರ ನೇತೃತ್ವದಲ್ಲಿ ನಡೆಯಿತು.
ನಾಡನಹಳ್ಳಿಯ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿ.ಸೋಮಣ್ಣ
ವರುಣ ಕ್ಷೇತ್ರ ಒಂದು ಮಾದರಿ ಕ್ಷೇತ್ರವಾಗಬೇಕಾಗಿತ್ತು ಆದರೆ ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರ ಈ ವರ್ಣ ಕ್ಷೇತ್ರ ಸಮಸ್ಯೆಗಳ ಸರಮಾಲೆಯನ್ನೇ ಒತ್ತಿ ಕೊಂಡಿದೆ .ಒಂದು ಒಳ್ಳೆಯ ಆಸ್ಪತ್ರೆ ಇಲ್ಲ ,ಕಾಲೇಜಿಲ್ಲ ಈ ಕ್ಷೇತ್ರ ಮೂರು ತಾಲೂಕಿಗೆ ಸೇರಿಕೊಂಡು ಕ್ಷೇತ್ರದ ಜನರು ಎಲ್ಲಾ ಕಡೆ ಅಲೆಯುವಂತಾಗಿದೆ. ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನಿಮ್ಮ ಸಮಾಜಗಳಿಗೆ ಯಾವ ಅಭಿವೃದ್ಧಿ ಆಗಿದೆ ಎಂಬುದನ್ನು ಯಾರಾದರೂ ಹೇಳಿ ಹೇಳಲಿಕ್ಕೆ ಅಭಿವೃದ್ಧಿಯೇ ಆಗಿಲ್ಲ ಸಮಾಜದ ಬಂಧುಗಳೇ ನಿಮ್ಮ ಕ್ಷೇತ್ರದ ಸಮರ್ಪಕ ಅಭಿವೃದ್ಧಿಗೆ ನನಗೆ ಒಂದು ಬಾರಿ ಅವಕಾಶ ಮಾಡಿಕೊಡಿ ಎರಡು ವರ್ಷದಲ್ಲಿ ಕ್ಷೇತ್ರ ಯಾವ ರೀತಿ ಅಭಿವೃದ್ಧಿಯಾಗುತ್ತದೆ ಎಂಬುದನ್ನು ನೀವೇ ನೋಡುವಿರಿ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನದ ಹೊಳೆಯನ್ನು ಹರಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ವಿಜಯಕುಮಾರ್, ಗಿರೀಶ್ ಉಪ್ಪಾರ್, ಗಾಣಿಗ ಸಮಾಜದ ಚಿಕ್ಕ ಸ್ವಾಮಿ, ಮಹದೇವ ಶೆಟ್ಟರು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ವೆಂಕಟರಮಣ ವಾಜಮಂಗಲ ವೆಂಕಟೇಶ್, ಮಾದು, ಸಮಾಜದಇನ್ನು ಮುಂತಾದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೊಸ ಕೆಂಪಯ್ಯನ ಹುಂಡಿಯ ಉಪ್ಪಾರ ಸಮಾಜದ ಅನೇಕ ಯುವಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.