ಸನಾತನ ಹಿಂದೂ ಧರ್ಮ ರಕ್ಷಣೆ ಮಾಡುವವರಿಗೆ ನಮ್ಮ ಬೆಂಬಲ: ಅಶೋಕ್ ಹಾರನಹಳ್ಳಿ

ನಂದಿನಿ ಮೈಸೂರು

ಕಾಂಗ್ರೆಸ್ ನವರು ಯಾವ ಕಾರಣಕ್ಕೆ ಬಜರಂಗದಳವನ್ನು ನಿಷೇಧಿಸುತ್ತಾರೆ; ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ

*ಸನಾತನ ಹಿಂದೂ ಧರ್ಮ ರಕ್ಷಣೆ ಮಾಡುವವರಿಗೆ ನಮ್ಮ ಬೆಂಬಲ.

ಕೆ.ಆರ್.ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀವತ್ಸರನ್ನು ಎಲ್ಲಾ ಸಮುದಾಯವರು ಗೆಲ್ಲಿಸಬೇಕು

ಮೈಸೂರು; ಕಾಂಗ್ರೆಸ್‌ನವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿದ್ದಾರೆ. ಆದರೆ ಯಾವೆಲ್ಲಾ ಕಾರಣಕ್ಕೆ ನಿಷೇಧ ಮಾಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಹಾಗಾಗಿ ಬಜರಂಗದಳ ನಿಷೇಧ ಮಾಡುತ್ತೇವೆ ಎಂಬ ಘೋಷಣೆ ಅರ್ಥವಿಲ್ಲದ್ದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಅಶೋಕ್ ಹಾರನಹಳ್ಳಿ ಹೇಳಿದರು.

ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟç ವಿರೋಧಿ ಚಟುವಟಿಕೆಗಳನ್ನು ನಡೆಸುವ ಸಂಘಟನೆಗಳ ಬಗ್ಗೆ ಕಾನೂನು ಪರದಿಯಲ್ಲಿ ತನಿಖೆ ನಡೆಸಿ, ವರದಿ ಬಂದ ನಂತಹ, ಆ ಸಂಘಟನೆಗಳು ಅಪರಾಧ ಕೃತ್ಯಗಳನ್ನು, ಸಮಾಜ ಘಾತುಕ ಕೆಲಸಗಳನ್ನು ಮಾಡಿದ್ದರೆ, ಸಾಕ್ಷಿ, ಆಧಾರಗಳೊಂದಿಗೆ ಅಂತಹ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸುತ್ತದೆ. ಆದರೆ ಯಾವುದೇ ಸಂಘಟನೆಗಳನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಹೀಗಿದ್ದರೂ ಕೂಡ ಬಜರಂಗದಳದ ವಿರುದ್ಧ ಯಾವುದೇ ತನಿಖೆ ನಡೆಸದೆ, ಯಾವುದೇ ಸಾಕ್ಷಿಗಳಿಲ್ಲದೆ ನಿಷೇಧ ಮಾಡುತ್ತೇವೆ ಎಂದು ಕಾಂಗ್ರೆಸ್‌ನವರು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದೇ ತಪ್ಪು. ಆದರೂ ಕಾಂಗ್ರೆಸ್‌ನವರು ಬಜರಂಗದಳವನ್ನು ನಿಷೇಧಿಸುವುದಾಗಿ ಯಾಕೇ ಘೋಷಣೆ ಮಾಡಿದರೋ ಗೊತ್ತಿಲ್ಲ. ಇದು ಜನರಲ್ಲಿ ಗೊಂದಲವನ್ನುAಟು ಮಾಡಿದೆ. ಈ ಬಗ್ಗೆ ಕಾಂಗ್ರೆಸ್‌ನವರು ಸ್ಪಷ್ಟವಾದ ಕಾರಣಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸನಾತನ ಧರ್ಮ ರಕ್ಷಣೆ ಮಾಡುವವರಿಗೆ ನಮ್ಮ ಬೆಂಬಲ; ಯಾವ ಪಕ್ಷ, ಯಾರೂ ನಮ್ಮ ಸನಾತನ ಧರ್ಮ, ದೇಶವನ್ನು ರಕ್ಷಣೆ ಮಾಡುವವರೋ, ಅವರಿಗೆ ನಮ್ಮ ಬೆಂಬಲವಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ ನಾವು ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಯಾರು ಹಿಂದೂ ಧರ್ಮ, ಸನಾತನ ಧರ್ಮ ವಿರೋಧಿಸುತ್ತಾರೋ, ನಮ್ಮ ದೇಶದ ವಿರುದ್ಧ ಮಾತನಾಡುತ್ತಾರೋ ಅವರಿಗೆ ನಮ್ಮ ಬೆಂಬಲವಿಲ್ಲ, ಅಂತಹವರನ್ನು ನಾವು ವಿರೋಧಿಸುತ್ತೇವೆ ಎಂದರು.
ವಿಪ್ರರು ಅನೇಕ ಕ್ಷೇತ್ರಗಳಲ್ಲಿ ಈಗ ಹಿಂದುಳಿಯುತ್ತಿದ್ದಾರೆ. ಇದಕ್ಕೆ ಕಾರಣ ಸಮಾಜದಲ್ಲಿ ವಿಪ್ರರಿಗೆ ನೀಡುತ್ತಿದ್ದ ಪ್ರಾತಿನಿಧ್ಯ ಕಡಿಮೆಯಾಗುತ್ತಿರುವುದು. ಜೆಡಿಎಸ್‌ನವರು ಹಳೇ ಮೈಸೂರು ಪ್ರಾಂತ್ಯದ ಒಂದು ಕ್ಷೇತ್ರದಲ್ಲೂ ವಿಪ್ರ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ವಿಪ್ರರು ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಎಲ್ಲರಿಗೂ ಬೇಕಾಗಿದ್ದಾರೆ. ಕೆಲವೇ ವ್ಯಕ್ತಿಗಳ ಪ್ರಾಬಲ್ಯ ಶಾಸನ ಸಭೆಯಲ್ಲಿ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ವ್ಯಕ್ತಿಗಳನ್ನು ಮತದಾರರು ಆಯ್ಕೆ ಮಾಡಬೇಕು. ಬುದ್ಧಿವಂತರು, ಪ್ರಜ್ಞಾವಂತರು ಮನೆಯಲ್ಲಿ ಕೂರದೆ, ಮತಗಟ್ಟೆಗಳಿಗೆ ಬಂದು ಮತದಾನ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರೆಲ್ಲಾ ಮತದಾನ ಮಾಡಬೇಕು, ಯೋಗ್ಯ ಹಾಗೂ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಟಿ.ಎಸ್.ಶ್ರೀವತ್ಸರನ್ನು ಗೆಲ್ಲಿಸಿ; ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಬಿಜೆಪಿ ಸಜ್ಜನ, ಉತ್ತಮ ವ್ಯಕ್ತಿಯಾದ ಟಿ.ಎಸ್.ಶ್ರೀವತ್ಸರಿಗೆ ಟಿಕೆಟ್ ನೀಡಿ ನಿಲ್ಲಿಸಿದೆ. ಸಾಮಾನ್ಯ ಕುಟುಂಬದಿAದ ಬಂದ ಶ್ರೀವತ್ಸ ಎಲ್ಲಾ ಸಮುದಾಯದವರಿಗೂ ಬೇಕಾದವರು. ಬಿಜೆಪಿಯಲ್ಲಿ ಎಲೆ ಮರೆಕಾಯಿಯಂತೆ ದುಡಿದಿದ್ದಾರೆ. ಅಂತಹವರನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿರುವುದು ಸಂತಸವಾಗಿದೆ. ಇಂತಹ ಉತ್ತಮ ವ್ಯಕ್ತಿಯನ್ನು ಕ್ಷೇತ್ರದ ಎಲ್ಲಾ ಸಮುದಾಯದ ಜನರು ಬೆಂಬಲಿಸುವ ಮೂಲಕ ಶಾಸನ ಸಭೆಗೆ ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಿಭಾಗದ ಉಪಾಧ್ಯಕ್ಷ ನಟರಾಜ ಜೋಯಿಸ್, ಮುಖಂಡರಾದ ರಘುರಾಂ ವಾಜಪೇಯಿ, ಶ್ರೀನಿವಾಸ್, ಬಿಜೆಪಿ ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತ್ ಕುಮಾರ್, ನಗರ ವಕ್ತಾರ ಎಂ.ಎ.ಮೋಹನ್, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇಅರಸ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *