ಪತ್ರಕರ್ತರ ವಾರ್ಷಿಕ ಪ್ರಶಸ್ತಿ ಪ್ರಕಟ

 

ನಂದಿನಿ ‌ಮೈಸೂರು

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ 2021-22ನೇ ಸಾಲಿನ ಪತ್ರಿಕಾ ದಿನಾಚರಣೆ ಅಂಗವಾಗಿ ಕೊಡ ಮಾಡುವ ವಾರ್ಷಿಕ ಕನ್ನಡ ಮತ್ತು ಇಂಗ್ಲಿಷ್‌ ಪತ್ರಿಕೆಗಳ ಅತ್ಯುತ್ತಮ ವರದಿ, ಛಾಯಾಚಿತ್ರ ಮತ್ತು ಅತ್ಯುತ್ತಮ ವಿದ್ಯುನ್ಮಾನ ವರದಿಗಳ ವಾರ್ಷಿಕ ಪ್ರಶಸ್ತಿಗೆ ಕೆಳಕಂಡ ಪತ್ರಕರ್ತರು ಆಯ್ಕೆಯಾಗಿದ್ದಾರೆ.

ಪ್ರಜಾಸತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದ “ಮೈಸೂರು ಗಾಂಧಿಗಿಲ್ಲ ಸ್ಮಾರಕ” ಲೇಖನಕ್ಕೆ ‘ಜನಮಿತ್ರ’ ದಿನಪತ್ರಿಕೆ ಮೈಸೂರು ಜಿಲ್ಲಾ ವರದಿಗಾರ ರವಿಚಂದ್ರ ಹಂಚ್ಯಾ ಅವರಿಗೆ ವರ್ಷದ ಅತ್ಯುತ್ತಮ ಕನ್ನಡ ವರದಿ ಪ್ರಶಸ್ತಿ ಲಭಿಸಿದೆ. ನಂಜನಗೂಡು ತಾಲೂಕು ವಿಜಯವಾಣಿ ಪತ್ರಿಕೆ ವರದಿಗಾರ ಪ್ರತಾಪ್‌ ಟಿ ಕೋಡಿನರಸೀಪುರ ಅವರ “ಪಕ್ಷಿಗಳಿಗೆ ಮೀನು ಬಲೆ ಉರುಳು ಲೇಖನಕ್ಕೆ ವರ್ಷದ ಗ್ರಾಮಾಂತರ ವಿಭಾಗದ ಅತ್ಯುತ್ತಮ ಕನ್ನಡ ವರದಿ ಪ್ರಶಸ್ತಿ ಲಭಿಸಿದೆ.

ದಿ ನ್ಯೂ ಇಂಡಿಯನ್‌ ಎಕ್‌್ಸಪ್ರೆಸ್‌ ಪತ್ರಿಕೆ ವರದಿಗಾರ ಕಾರ್ತಿಕ್‌ ಕೆ.ಕೆ ಅವರ A VISION TO GUIDE THE CHALLENGED ಲೇಖನಕ್ಕೆ ವರ್ಷದ ಅತ್ಯುತ್ತಮ ಇಂಗ್ಲಿಷ್‌ ವರದಿ ಪ್ರಶಸ್ತಿ ಲಭಿಸಿದೆ. ಮೈಸೂರು ಮಿತ್ರಛಾಯಾಗ್ರಾಹಕ ಎಂ.ಎನ್‌ ಲಕ್ಷ್ಮೀ ನಾರಾಯಣ್‌ ಯಾದವ್‌ ಅವರ “ಮಳೆಯಿಂದ ಹಳೆಯ ಮನೆ ಕುಸಿತ ಸಿಲುಕಿದ್ದ ವೃದ್ಧನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸುತ್ತಿರುವ ಚಿತ್ರಕ್ಕೆ ವರ್ಷದ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿ ಲಭಿಸಿದೆ.
ದೂರದರ್ಶನ ವರದಿಗಾರ ಜಿ.ಜಯಂತ್‌ ಹಾಗೂ ಕ್ಯಾಮೆರಾಮನ್‌ ರಾಮು ಅವರ “ಪ್ರಾಣಿ ಪಕ್ಷಿಗಳ ದಾಹ ತೀರಿಸಲು ಕೆರೆ ಮೀಸಲು” ವಿಶೇಷ ವರದಿಗೆ ಅತ್ಯುತ್ತಮ ವಿದ್ಯುನ್ಮಾನ ವರದಿ ಪ್ರಶಸ್ತಿ ಲಭಿಸಿದೆ. ದೂರದರ್ಶನ ವರದಿಗಾರ ರಾಘವೇಂದ್ರ ಸ್ವಾಮಿ ಎಂ.ಸಿ ಅವರ “ಹಗ್ಗದ ದಾರದ ಛಾವಣಿಯ ಆವಿಷ್ಕಾರ ವಿಶೇಷ ವರದಿಗೆ ಅತ್ಯುತ್ತಮ ವಿದ್ಯುನ್ಮಾನ ವರದಿ ಪ್ರಶಸ್ತಿ ಲಭಿಸಿದೆ.

ಅಭಿನಂದಿತರು: ವರ್ಷದ ಹಿರಿಯ ಉಪಸಂಪಾದಕ ಎಚ್‌.ಪಿ.ಕೃಷ್ಣಶೆಟ್ಟಿ, ಹಿರಿಯ ಉಪಸಂಪಾದಕರು, ವಿಜಯವಾಣಿ, ಜೀವಮಾನ ಸಾಧನೆ: ಬಿ.ಎಸ್‌ ಪ್ರಭುರಾಜನ್‌‍, ವಿಶೇಷ ವರದಿಗಾರಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ, ಪ್ರಗತಿ ಗೋಪಾಲಕೃಷ್ಣ, ಛಾಯಾಗ್ರಾಹಕರು ಪ್ರಗತಿ ಫೋಟೋ, ಮಾಚಮ್ಮ ಮಲ್ಲಿಗೆ, ಹಿರಿಯ ಉಪಸಂಪಾದಕರು ಕನ್ನಡಿಗರ ಪ್ರಜಾನುಡಿ, ಹಿರಿಯ ಛಾಯಾಗ್ರಾಹಕ: ಎಂ.ಎನ್‌ ಲಕ್ಷ್ಮೀ ನಾರಾಯಣ್‌ ಯಾದವ್‌‍, ಛಾಯಾಗ್ರಾಹಕ ಮೈಸೂರು ಮಿತ್ರ, ವರ್ಷದ ಗ್ರಾಮಾಂತರ ಪತ್ರಕರ್ತ: ಹುಲ್ಲಹಳ್ಳಿ ಮೋಹನ್‌‍, ವರದಿಗಾರ ಅಮೋಘ ಟಿವಿ, ವರ್ಷದ ಹಿರಿಯ ವರದಿಗಾರ ದೃಶ್ಯಮಾಧ್ಯಮ: ರಾಮ್‌‍, ವರದಿಗಾರ ಟಿವಿ, ವರ್ಷದ ಹಿರಿಯ ಕ್ಯಾಮೆರಾಮನ್‌ ದೃಶ್ಯಮಾಧ್ಯಮ: ಕೆ.ವಿ. ಕಿರಣ್‌ ಕುಮಾರ್‌ ನ್ಯೂಸ್‌ ಒನ್‌ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *