ನಂದಿನಿ ಮೈಸೂರು
“ವಾಮನ” ಚಿತ್ರದ ಆಕ್ಷನ್ ಟೀಸರ್ ಬಿಡುಗಡೆ ಸಮಾರಂಭ
ಮೈಸೂರಿನ ವಿದ್ಯಾರಣ್ಯಪುರದಲ್ಲಿರುವ ಅಂಬಾರಿ ಕನ್ವೆನ್ಷನ್ ಹಾಲ್ ನಲ್ಲಿ ಅದ್ದೂರಿಯಾಗಿ ಜರುಗಿತು.
ಚೇತನ್ ಗೌಡ ನಿರ್ಮಾಣದ ಶಂಕರ್ ರಾಮನ್ ನಿರ್ದೇಶನದ, ನಾಯಕನಾಗಿ ಧನ್ವೀರ್ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿರುವ ವಾಮನ ಚಿತ್ರದ ಆಕ್ಷನ್ ಟೀಸರ್ ಅನ್ನು ಶಾಸಕರಾದ ಹರೀಶ್ ಗೌಡ,ರವಿಶಂಕರ್,ಹರೀಶ್ ಗೌಡ,ಮಾಜಿ ನಗರ ಪಾಲಿಕೆ ಸದಸ್ಯ ಅವ್ವಾ ಮಾದೇಶ್ ಸೇರಿದಂತೆ ಗಣ್ಯರು ಬಿಡುಗಡೆ ಮಾಡಿದರು.ಅನಿವಾರ್ಯ ಕಾರಣದಿಂದ ಚಿತ್ರದ ನಿರ್ಮಾಪಕ ಗೈರು ಹಾಜರಿದ್ದರೂ ಸಹ ದೂರದ ಊರಿನಿಂದಲೇ ಆಕ್ಷನ್ ಟೀಸರ್ ಗೆ ಆಗಮಿಸಿದ ಗಣ್ಯರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಚಿತ್ರದಲ್ಲಿ ತಾರಾ, ಸಂಪತ್ ರಾಜ್, ಅವಿನಾಶ್, ಕಾಕ್ರೋಜ್ ಸುಧಿ,ಆದಿತ್ಯಮೆನನ್ ,ಶಿವರಾಜ್ ಕೆಆರ್ ಪೇಟೆ,ಅಚ್ಯುತ್ ಕುಮಾರ್ ಮುಂತಾದವರು ಅಭಿನಯಿಸಿದ್ದಾರೆ.
ಈಗಾಗಲೇ ವಾ…ವಾ…ವಾ….ವಾಮನ. ಹಾಗೂ ಮುದ್ದು ರಾಕ್ಷಿಸಿ ಎಂಬ ರೋಮ್ಯಾಂಟಿಕ್ ಹಾಡು ಬಿಡುಗಡೆಯಾಗಿದ್ದು 3 ಮಿಲಿಯನ್ ಜನರು ವೀಕ್ಷೀಸಿದ್ದಾರೆ.ಅಜನೀಶ್ ಲೋಕನಾಥ್ ಸಂಗೀತ,ವಿ.ನಾಗೇಂದ್ರ ಪ್ರಸಾದ್ ಮುದ್ದಾದ ಸಾಹಿತ್ಯ,ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ಧ್ವನಿ ಕೂಡಿಸಿದ್ದಾರೆ.
ಛಾಯಾಗ್ರಹಣ ಮಹೇಂದ್ರ ಸಿಂಹ ,ಸಂಕಲನ ಸುರೇಶ್ ಆಮುರ್ಗಂ,ಅರ್ಜುನ್ ರಾಜ್,ವಿಕ್ರಮ್ ಮೋರ್,ಜಾಲಿ ಬಾಸ್ಟಿನ್ ಆಕ್ಷನ್,ಪ್ರವೀಣ್, ನವೀನದ ಕಲಾ ನೀರ್ದೇಶನ ಚಿತ್ರಕ್ಕಿದೆ.ಭೂಷಣ್ ಮಾಸ್ಟರ್ ಕೋರಿಯೋಗ್ರಫ್ ಮಾಡಿದ್ದಾರೆ.ಸಿನಿಮಾ ಪ್ರಚಾರಕ್ಕಾಗಿ ಸುಧೀಂದ್ರ ವೆಂಕಟೇಶ್ ಕೈ ಜೋಡಿಸಿದ್ದಾರೆ.ವಾಮನ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.