ಶಾಶ್ವತ ಸೇವಾ ಸ್ಕೂಲ್, ನವಕೀಸ್ ವಿದ್ಯಾಸಂಸ್ಥೆ, ಆರ್.ಜಿ. ಎಸ್.ಗ್ರೂಪ್ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ

ನಂದಿನಿ ಮೈಸೂರು

ಮೈಸೂರಿನ ಶಾಶ್ವತ ಸೇವಾ ಸ್ಕೂಲ್ ಮತ್ತು ನವಕೀಸ್ ವಿದ್ಯಾಸಂಸ್ಥೆ ಹಾಗೂ ಆರ್.ಜಿ. ಎಸ್.ಗ್ರೂಪ್ ವತಿಯಿಂದ ಇಂದು 77ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಆಚರಣೆ ಮಾಡಲಾಯಿತ್ತು…

ಶಾಶ್ವತ ಸೇವಾ ಸ್ಕೂಲ್ ನ ಮಕ್ಕಳಿಂದ ಜಾಥಾವನ್ನು ನಡೆಸುವ ಮೂಲಕ ಜನರಲ್ಲಿ ಸ್ವಾತಂತ್ರ್ಯೋತ್ಸವದ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸಲಾಯಿತ್ತು. ನವಾಕೀಸ್ ಸ್ಕೂಲ್ ನಲ್ಲಿ ಭಾರತ ಮಾತೇ ಭಾವಚಿತ್ರಕ್ಕೆ ಪುಷ್ಪನಮಾನ ಸಲ್ಲಿಸಿ ದ್ವಜಾರೋಹಣ ದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಲಾಯಿತು… ಆರ್.ಜಿ.ಎಸ್.ಗ್ರೂಪ್ ನ ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವುದರ ಮೂಲಕ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತ್ತು.

ಇನ್ನು ಈ ಆಚರಣೆಯ ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ್ರು, ವೈದ್ಯಧಿಕಾರಿ ಡಾ.ಜಿ. ಸಿದ್ದೇಶ್,ಬನ್ನೂರಿನ ಸಮಾಜ ಸೇವಕರು ಮತ್ತು ಬನ್ನೂರಿನ ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ, ಪ್ರಾಂಶುಪಾಲರಾದ ಡಿ.ಎಸ್. ತಾರಾಕೇಶ್ವರಿ,ವ್ಯವಸ್ಥಾಪಕರಾದ ಮಹೇಶ್,ಹಿರಿಯ ವ್ಯವಸ್ಥಾಪಕರಾದ ಅನುಪ್, ಕಾವ್ಯ,ಪಾರಾಸ್ ಭೋರಾಣ,ಬಿಜೆಪಿ ಮುಖಂಡರಾದ ಕವೀಶ್ ಗೌಡ,ವಿದ್ಯಾ ಗಿರೀಶ್, ಸಿದ್ದರಾಜು,ರಮೇಶ್,ಉಷಾ, ಸುಮಯಬಾಯೀ,ಪ್ರಮೀಳಾ, ಭಕ್ತರಾಮು,ಅಮರರಾಮ್, ರವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಕುರಿತು ಡಾ. ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಡೆಲ್ಲೆದೇ ಹಬ್ಬರೀತಿಯಲ್ಲಿ ಆಚರಣೆ ಮಾಡಲಾಗುತ್ತಿದ್ದು, ಇಂದು ಮೈಸೂರಿನಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕೆಂಬ ಉದ್ದೇಶದಿಂದ ಹಲವಾರು ಸಮಾಜ ಸೇವೆಗಳನ್ನು ಮಾಡುವ ಮೂಲಕ ಆಚರಣೆ ಮಾಡುತ್ತಿರುವುದಾಗಿ ತಿಳಿಸಿದ್ದರು,ಈ ಆಚರಣೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಜಿ.ಟಿ. ದೇವೇಗೌಡ್ರು ಆಗಮಿಸಿದ್ದು ತುಂಬಾನೇ ಸಂತೋಷವಾಗಿದೆ ಸನ್ಮಾನ್ಯ ಶಾಸಕರನ್ನು ನಮ್ಮ ಸಮುದಾಯದಗಳ ವತಿಯಿಂದ ಸನ್ಮಾನಿಸಿದ್ದೇವೆ,ಈ ಸ್ವಾತಂತ್ರ್ಯ ದಿನಾಚರಣೆಯನ್ನು ರಕ್ತದಾನ, ನೇತ್ರಾದಾನ,ಮಾಡಿ ಒಂದು ಜೀವಕ್ಕೆ ನೇರವಾಗುವ ಮೂಲಕ ಆಚರಿಸಲಾಗುತ್ತಿದ್ದೆ, ನಮ್ಮ ಸಮುದಾಯದವರಿಗೆ ಮಾತ್ರವಲ್ಲದೆ ಸಾರ್ವಜನಿಕವಾಗಿ ಸಮಾಜ ಎಲ್ಲಾ ಜನಾಂಗದವರಿಗೂ ಈ ಸೇವೆಯನ್ನು ಮಾಡಿಕೊಂಡು ಬರುತ್ತೀದ್ದೇವೆ,ನಮ್ಮಲ್ಲಿ ಎಷ್ಟೇ ಕೆಲಸದ ಒತ್ತಡವಿದ್ದರೂ ಎಲ್ಲವನ್ನು ಬದಿಗೊತ್ತಿ ರಕ್ತದಾನ ಇತರೆ ಸೇವೆಗಳ ಮೂಲಕ ಒಂದು ಜೀವವನ್ನು ಉಳಿಸುವುದರಲ್ಲಿ ಮುಂದಿರುತ್ತೇವೆ,ಇಂತಹ ಸಂಘದಲ್ಲಿ ನಾನು ಸದಸ್ಯ ನಾಗಿರುವುದು ನನಗೆ ಹೆಮ್ಮೆ ಮತ್ತು ಖುಷಿ ಅಂತೆಯೇ ಮುಂದಿನ ವರ್ಷ ಈ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಸಮಾಜ ಸೇವೆಯನ್ನು ಮಾಡುವ ಮೂಲಕ ಆಚರಿಸೋಣ ಎಂದು ತಿಳಿಸಿದ್ದರು.

Leave a Reply

Your email address will not be published. Required fields are marked *