ಮೈಸೂರು:21 ಸೆಪ್ಟೆಂಬರ್ 2022
ನಂದಿನಿ ಮೈಸೂರು
ಇಂದು ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯನ್ನು ಸಮುದಾಯದ ಮುಖಂಡರು ಬಹಿಸ್ಕರಿಸಿ ಮನವಿ ಸಲ್ಲಿಸಿದರು.
ಮೀಸಲಾತಿ ಹೆಚ್ಚಳ ಮಾಡುವವರೆಗೂ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಹಾಗೂ ಸಮುದಾಯದ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬೆಂಗಳೂರಿನ ಫ್ರೀಡಮ್ ಪಾರ್ಕ್ ನಲ್ಲಿ ವಾಲ್ಮೀಕಿ
ಸ್ವಾಮೀಜಿಗಳು 224 ದಿನಗಳಿಂದ ಮೀಸಲಾತಿ ಹೆಚ್ಚಳ ಮಾಡುವಂತೆ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿ ಸರಕಾರದ ಗಮನಸೆಳೆಯಲಾಗಿದ್ದರೂ ಮೀಸಲಾತಿ ಬೇಡಿಕೆ ಈಡೇರಿಲ್ಲ.
ಈ ಕುರಿತಂತೆ ಎಸ್.ಸಿ ಮತ್ತು ಎಸ್.ಟಿ ಜಗದ್ಗುರು ಗಳವರು ಇದೇ 28.9.2022 ರಂದು ಸರ್ಕಾರಕ್ಕೆ ಅಂತಿಮ ಗಡುವನ್ನು ನೀಡಿದ್ದಾರೆ. ಅಷ್ಟರಲ್ಲಿ ನಮ್ಮ ಬೇಡಿಕೆ ಈಡೇರಬೇಕು.
ಒಂದು ಪಕ್ಷ ಬೇಡಿಕೆ ಈಡೇರದೇ ಇದ್ದಲ್ಲಿ 9.10.2022 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಯಲ್ಲಿ ನಾವ್ಯಾರು ಭಾಗವಹಿಸುವುದಿಲ್ಲ. ಆ ದಿನ ವಾಲ್ಮೀಕಿ ಶ್ರೀ ಗಳು ಧರಣಿ ಸತ್ಯಾಗ್ರಹದಲ್ಲಿರುವ ಫ್ರೀಡಮ್ ಪಾರ್ಕ್ ನಲ್ಲಿ ಕಪ್ಪು ಬಟ್ಟೆಯನ್ನು ಪ್ರದರ್ಶಿಸಿ ಬೃಹತ್ ಹೋರಾಟ ಮಾಡುತ್ತೇವೆ ಎಂದು ಕೆಂಪನಾಯಕ ಹಾಗೂ ದ್ಯಾವಪ್ಪನಾಯಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಲ್ಲದೇ ಸಮುದಾಯದ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಪ್ರಭಾಕರ ಹುಣಸೂರು ಚನ್ನನಾಯಕ.ಪ್ರಕಾಶ್ ಹದಿನಾರು,ವಿನೋದ್ ನಾಗವಾಲ,ಜಿಲ್ಲೆ ಹಾಗೂ ತಾಲೂಕಿನ ಸಮುದಾಯದ ಮುಖಂಡರು ಭಾಗಿಯಾಗಿದ್ದರು.