ನಂದಿನಿ ಮೈಸೂರು
ರಾಜನಹಳ್ಳಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಲ್ಮೀಕಿ ಜನಜಾಗೃತಿ ಜಾತ್ರಾ ಮಹೋತ್ಸವ ಮೂಲಕ ರಾಜ್ಯದಲ್ಲಿರುವ ನಾಯಕ ಸಮುದಾಯವನ್ನ ಒಗ್ಗೂಡಿಸಿದೆ ಎಂದು ಪ್ರಸನ್ನಾನಂದ ಸ್ವಾಮಿಗಳು ತಿಳಿಸಿದರು.
2023 ಫೆಬ್ರವರಿ ತಿಂಗಳಿನಲ್ಲಿ ರಾಜನಹಳ್ಳಿಯಲ್ಲಿ 3 ದಿನಗಳ ಕಾಲ ನಡೆಯುವ ವಾಲ್ಮೀಕಿ ಜಾತ್ರೆ ಕುರಿತು ಪೂರ್ವಭಾವಿ ಸಭೆ ನಡೆಸಿ ಮೈಸೂರು ಜಿಲ್ಲೆಯ ನಾಯಕ ಸಮುದಾಯದವರ ಅಭಿಪ್ರಾಯ ಗ್ರಹಿಸಿ ನಂತರ ಪೂರ್ವ ಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು
ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಉದ್ದೇಶ ಸಂಘಟನೆ.ವಾಲ್ಮೀಕಿ ನಾಯಕರ ಸಮಾಜ ಸಂವಿಧಾನಿಕ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕು.185 ತಾಲೂಕಿನಿಂದ ಜನ ಜಾತ್ರೆಗೆ ಆಗಮಿಸಲಿದ್ದಾರೆ.ಮೂರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮಹಿಳಾ ಜಾತ್ರೆ,ರೈತ ಜಾತ್ರೆ,ನೌಕರ ಗೋಷ್ಠಿ ,ಯುವಕರ ಗೋಷ್ಠಿ ,ಇತಿಹಾಸ, ಸಂಸ್ಕೃತಿ,ಪರಂಪರೆ ಅನಾವರಣಗೊಳ್ಳಲಿದೆ.
ಹಾಗಾಗಿ ಎಲ್ಲಾರೂ ಒಕ್ಕೊರಲಿನಿಂದ ಸಂಘಟಿತರಾಗಿ ಸಮುದಾಯವನ್ನ ಕಾಯಬೇಕು ಎಂದು ಕರೆ ನೀಡಿದರಲ್ಲದೇ, ನಾಯಕ ಸಮುದಾಯದ ಜೊತೆ ಜೊತೆಗೆ ಜ್ಯಾತ್ಯಾತೀತವಾಗಿ ಎಲ್ಲಾ ಸಮುದಾಯದವರು ವಾಲ್ಮೀಕಿ ಜಾತ್ರೆಗೆ ಆಗಮಿಸಿ ಎಂದು ಆಹ್ವಾನಿಸಿದರು.
ಇನ್ನೂ ಮೈಸೂರು ಜಿಲ್ಲೆಯಲ್ಲಿ ಶಾಖಾ ಮಠ ಸ್ಥಾಪನೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಪ್ರತಿಯೊಂದು ಮಠವೂ ಕೂಡ ಜಿಲ್ಲೆಯಲ್ಲಿ ಶಾಖಾ ಮಠ ಸ್ಥಾಪನೆ ಮಾಡಿದ್ದಾರೆ.ಅಂತೆಯೇ ಸಮುದಾಯದಿಂದ ಶಾಖಾ ಮಠದ ಕೂಗು ಬರುತ್ತಿದೆ.ನಾವು ಮೊದಲಿಗೆ ಒಂದು ಶಿಕ್ಷಣ ಸಂಸ್ಥೆ ಸ್ಥಾಪಿಸಿ ನಂತರ ಶಾಖಾ ಮಠ ನಿರ್ಮಾಣ ಮಾಡಬೇಕೋ ಇಲ್ಲವೋ ಎಂಬುದನ್ನ ಸಮುದಾಯದವರ ಜೊತೆ ಚರ್ಚಿಸಿ ನಂತರ ಮಾಹಿತಿ ನೀಡಲಾಗುವುದು ಎಂದರು.
ಪೂರ್ವ ಭಾವಿ ಸಭೆಯಲ್ಲಿ ನಾಯಕ ಸಮುದಾಯದ ನೂರಕ್ಕೆ ಹೆಚ್ಚು ಮಂದಿ ಭಾಗಿಯಾಗಿ ಸ್ವಾಮೀಜಿಗಳ ಆಶಿರ್ವಾದ ಪಡೆದರು.