3 ದಿನಗಳ ಕಾಲ ವಿವಿಧ ಭೂ ಪ್ರದೇಶದಲ್ಲಿ ರಕ್ಷಣಾ ಪಡೆಗಳ ಸುಸ್ಥಿರತೆಗಾಗಿ ಭವಿಷ್ಯದ ಕಾರ್ಯತಂತ್ರಗಳು ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ನಂದಿನಿ ಮೈಸೂರು

ರಕ್ಷಣಾ ಸಚಿವಾಲಯ ,ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ,ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿವಿಧ ಭೂ ಪ್ರದೇಶದಲ್ಲಿ ರಕ್ಷಣಾ ಪಡೆಗಳ ಸುಸ್ಥಿರತೆಗಾಗಿ ಭವಿಷ್ಯದ ಕಾರ್ಯತಂತ್ರಗಳು ಶಿರ್ಷಿಕೆಯಡಿ ಮೂರು ದಿನಗಳ ಕಾಲ ಆಯೋಜಿಸಿರುವ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಮೈಸೂರಿನ ಸರ್ದನ್ ಸ್ಟಾರ್ ಖಾಸಗೀ ಹೋಟೆಲ್ ನಲ್ಲಿ ಏರ್ಪಡಿಸಿರುವ ಸಮ್ಮೇಳನಕ್ಕೆ ಡಿಆರ್ ಡಿ ಓ ಮಹಾ‌ನಿರ್ದೇಶಕ ಡಾ.ಉಪೇಂದ್ರ ಕುಮಾರ್ ಸಿಂಗ್ ಚಾಲನೆ ನೀಡಿದರು. ಇದೇ ವೇಳೆ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದೊಂದಿಗೆ ತಯಾರಿಸಿದ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.

ಡಿಎಫ್ ಆರ್ ಎಲ್ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಸಂಶೋಧಿಸಿ ತಯಾರಿಸಿದ ಆಹಾರ ಪದಾರ್ಥಗಳು,ಗೃಹೋಪಯೋಗಿ ಪದಾರ್ಥಗಳ 8 ಮಳಿಗೆಗೆ ಚಾಲನೆ ನೀಡಲಾಯಿತು. ಒಂದು ವರ್ಷಗಳ ಕಾಲ ಶೇಖರಿಸಿ ಉಪಯೋಗಿಸಬಹುದಾದ ಆಹಾರ ಪದಾರ್ಥಗಳು ಮಾರಾಟಕ್ಕಿಟ್ಟಿದ್ದು ವಿಶೇಷವಾಗಿತ್ತು.

ಸಿ ಅಂಡ್ ವಿ ಕಮಾಂಡರ್ ಮನೋಜ್ ಶರ್ಮ,ಇಸ್ರೋ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರದ ನಿರ್ದೇಶಕ ಡಾ.ಆರ್.ಉಮಾಮಹೇಶ್ವರನ್,ಡಿ.ಆರ್ ಡಿ ಓ ಮುಖ್ಯಸ್ಥ ಡಾ.ಸಮೀರ್ ವಿ.ಕಾಮತ್,ಡಿಎಫ್ ಆರ್ ಎಲ್ ವಿಜ್ಞಾನಿಗಳಾದ ಡಾ.ಕುಮಾರ್ ,ಡಾ.ಸಜೀವ್ ಕುಮಾರ್ ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *