ನಂದಿನಿ ಮೈಸೂರು
ಮೈಸೂರು: ಭಾರತೀಯ ಜನತಾ ಪಾರ್ಟಿಯ ವರುಣ ಕ್ಷೇತ್ರದ ಅಭ್ಯರ್ಥಿ ವಿ ಸೋಮಣ್ಣ ಪರವಾಗಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಬಿರುಸಿನ ಮತಯಾಚನೆ ಮಾಡಿದರು.
ಕೆಂಪಯ್ಯನಹುಂಡಿ ಹಾಗೂ ರಂಗಸಮುದ್ರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಗ್ಗೇಶ್, ಸಿದ್ದರಾಮಯ್ಯನವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವರುಣ ವಿಧಾನಸಭಾ ಕ್ಷೇತ್ರ ಮೈಸೂರು ಜಿಲ್ಲೆಯಲ್ಲಿ ಅತಿ ಹಿಂದುಳಿದ ವಿಧಾನಸಭಾ ಕ್ಷೇತ್ರವಾಗಿದೆ. ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ವರುಣ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ರೀತಿಯ ಕಾರ್ಯವನ್ನು ಮಾಡದೆ ಇಡೀ ವರುಣವನ್ನು ಅನಾಥವನ್ನಾಗಿ ಮಾಡಿದ್ದಾರೆ. ಯಾವುದೇ ಶಾಲಾ-ಕಾಲೇಜುಗಳು, ಸುಸಜ್ಜಿತ ಹಾಸ್ಪಿಟಲ್, ಕಾರ್ಖಾನೆಗಳು, ಸರ್ಕಾರಿ ಕಚೇರಿಗಳು ನಿರ್ಮಾಣ ಮಾಡಲು ಕೂಡ ಇವರಿಗೆ ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಆಗಿದ್ದಾಗಲೇ ಈ ಕ್ಷೇತ್ರಕ್ಕೆ ಏನನ್ನು ಮಾಡದೇ ಇರುವ ಸಿದ್ದರಾಮಯ್ಯನವರು ಮುಂದೆ ಯಾವ ಅಭಿವೃದ್ಧಿಯನ್ನು ಮಾಡಲು ಸಾಧ್ಯ? ಹಾಗಾಗಿ ಮಾನ್ಯ ಮತದಾರ ಬಂಧುಗಳು ಗೋವಿಂದರಾಜನಗರದ ಅಭಿವೃದ್ಧಿಯ ಹರಿಕಾರ ವಿ. ಸೋಮಣ್ಣ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸಿ ಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಿನ್ನಂಬಳ್ಳಿ ಮಂಜು, ವಿಜಯಕುಮಾರ್, ಮಲ್ಲೇಶ್, ಶಿವಪ್ರಕಾಶ್ ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.