ಮೈಸೂರು:27 ಮೇ 2022
ನಂದಿನಿ ಮೈಸೂರು
ಮೈಸೂರಿನಲ್ಲಿ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯುನಿಜೀನ್ ಡಯಾಗ್ನಾಸ್ಟಿಕ್ ಮತ್ತು ಸ್ಕ್ಯಾನಿಂಗ್ ಸೆಂಟರ್ ಉದ್ಘಾಟನೆಗೊಂಡಿತು.
ಮೈಸೂರಿನ ಎನ್.ಆರ್.ಮೊಹಲ್ಲದಲ್ಲಿರುವ ಶಿವಾಜಿ ರಸ್ತೆಯಲ್ಲಿ ಸಂಸ್ಥಾಪಕರಾದ ಚನ್ನಕೇಶವ ಹಾಗೂ ನಿರ್ದೇಶಕರಾದ ಡಾ.ರಘು ಒಡೆತನದಲ್ಲಿ ಆರಂಭಗೊಂಡಿರುವ ಸ್ಕ್ಯಾನಿಂಗ್ ಸೆಂಟರ್ ಅನ್ನು ಜೆಡಿಎಸ್ ಮುಖಂಡ ಅಬ್ದುಲ್ ಅಜೀಜ್ ರವರು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಯುನಿಜೀನ್ ಲ್ಯಾಬ್ ಕಳೆದ 6 ವರ್ಷಗಳಿಂದ ಉತ್ತಮ ಗುಣಮಟ್ಟ ಸೇವೆ ನೀಡುತ್ತಾ ಬಂದಿದೆ. 24 ಗಂಟೆಗಳ ಕಾಲ ಸೇವೆ ಒದಗಿಸಲು ಇದೀಗಾ ಯುನಿಜೀನ್ ಡೈಯಾಗ್ನಾಸ್ಟಿಕ್ ಮತ್ತು ಸ್ಕ್ಯಾನಿಂಗ್ ಸೆಂಟರ್ ಸ್ಥಾಪಿಸಲಾಗಿದೆ.ಅತೀ ಕಡಿಮೆ ದರದಲ್ಲಿ ಸ್ಕ್ಯಾನಿಂಗ್ ಮಾಡಲಾಗುತ್ತದೆ.ಗರ್ಭಿಣಿಯರಿಗೆ ವಿಶೇಷ ಸೇವೆ ನೀಡುತ್ತಿದ್ದೇವೆ .ಉಚಿತ ಅಂ ಬುಲೆನ್ಸ್ ಒದಗಿಸಲಾಗುತ್ತಿದೆ ಎಂದು ನಿರ್ದೇಶಕ ಡಾ.ರಘು ತಿಳಿಸಿದರು.
ಸಮಾರಂಭದಲ್ಲಿ ಪಾಲಿಕೆ ಸದಸ್ಯರಾದ ಸಾಉದ್ ಖಾನ್,ರಫೀಕ್,ಅನ್ವರ್ ಬೇಗ್,ಶೈಲೇಂದ್ರ, ಕಿರಣ್ ಕುಮಾರ್ ಸೇರಿದಂತೆ ಸಿಬ್ಬಂದಿಗಳು ಭಾಗಿಯಾಗಿ ಶುಭ ಕೋರಿದರು.