ತಂಬಾಕು ಬೆಳೆಯುವ ರೈತರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಸಹಾಯ ಮಾಡಲು ಮುಂದಾದ “ಭಾರತ್ ಕ್ಯಾನ್ಸರ್ ಆಸ್ಪತ್ರೆ”

ಮೈಸೂರು:28 ಮೇ 2022

ನಂದಿನಿ ಮೈಸೂರು

ತಂಬಾಕು ಬೆಳೆಯುವ ರೈತರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಸಹಾಯ ಮಾಡುವುದು
ಎಂದು ಎಚ್‌ಸಿಜಿ ಕಾರ್ಯಾಧ್ಯಕ್ಷ ಡಾ. ಅಜಯ್‌ ಕುಮಾರ್‌ ತಿಳಿಸಿದರು.

ತಂಬಾಕು ಉತ್ಪಾದನೆಯನ್ನು ಹಂತಹಂತವಾಗಿ ಕಡಿತಗೊಳಿಸಿ, ರೈತರ ಸುರಕ್ಷತೆ ಮತ್ತು ಅವರುಗಳು ಆರ್ಥಿಕವಾಗಿ ಲಾಭ ಪಡೆಯುವಂತೆ ಮಾಡಲು ಪರ್ಯಾಯ ಬೆಳೆ ಬೆಳೆಯಲು ಸಹಾಯ ಮಾಡಬೇಕಿದೆ. ಇದರಿಂದ ತಂಬಾಕು ಬಳಕೆಯನ್ನು ತಡೆಗಟ್ಟಲು ಮತ್ತು ಬದಲಾವಣೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ.
ನಾವೆಲ್ಲರೂ ಆಂಕೊಲಜಿಗೆ(ಕ್ಯಾನ್ಸರ್‌) ಪ್ರವೇಶಿಸಿದ್ದು ಜೀವಗಳನ್ನು ಉಳಿಸಲು ಮತ್ತು ಈ ಕಾಯಿಲೆಯಿಂದ ಜನರನ್ನು ಗುಣಪಡಿಸಲು ಮತ್ತು ವ್ಯಾಪರಕ್ಕಾಗಿ ಅಲ್ಲ. ಇದಕ್ಕಾಗಿಯೇ HCG ದೇಶ ಮತ್ತು ವಿದೇಶಗಳಲ್ಲಿ 25ಕ್ಕೂ ಹೆಚ್ಚು ಕ್ಯಾನ್ಸರ್‌ ಆಸ್ಪತ್ರೆಗಳನ್ನು ಹೊಂದಿದೆ. ಈಗ ಕ್ಯಾನ್ಸರ್‌ನ ಮೂಲ ಕಾರಣವನ್ನು ತೊಡೆದು ಹಾಕುವ ಸಮಯ ಬಂದಿದ್ದು, ಅದುವೇ ತಂಬಾಕು. ಆಗ ವೈದ್ಯರುಗಳಾದ ನಾವು ನಮ್ಮ ಅನೇಕ ಜೀವಗಳನ್ನು ಉಳಿಸುವ ನಮ್ಮ ಕನಸನ್ನು ನಿಜವಾಗಿ ನನಸಾಗಿಸಿಕೊಳ್ಳುತ್ತೇವೆ ಎಂದರು.

ಭಾರತದಲ್ಲಿ ಪ್ರತಿ ವರ್ಷ 1.3 ಮಿಲಿಯನ್‌ಗಿಂತಲೂ ಹೆಚ್ಚು ಜನರು ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ ಮತ್ತು ಇವರಲ್ಲಿ ಹೆಚ್ಚಿನವರು ಕ್ಯಾನ್ಸರ್‌ನಿಂದ ತೊಂದರೆ ಅನುಭವಿಸಿದ್ದಾರೆ. ವಿಶ್ವದಲ್ಲಿ ತಂಬಾಕು ಬಳಸುವ ಹೆಚ್ಚಿನ ಜನರಿರುವ ದೇಶದಲ್ಲಿ ಭಾತರ ಎರಡನೇ ದೇಶವಾಗಿದ್ದು, ಇವರುಗಳಲ್ಲಿ ಅರ್ಧದಷ್ಟು ಜನರು ಬಾಯಿಯ ಕ್ಯಾನ್ಸರ್‌ನಿಂದ ಹಾಗೂ ಕ್ಷಯರೋಗದಿಂದ ಬಳಲುತ್ತಾರೆ. ಕಳೆದ ವಾರ ಬಿಡುಗಡೆಯಾದ 2022ರ ತಂಬಾಕು ಅಟ್ಲಾಸ್‌ ಪ್ರಕಾರ ಜಗತ್ತಿನಲ್ಲಿ ಪ್ರಸ್ತುತ 1.1 ಶತಕೋಟಿ ಸಿಗರೇಟ್‌ ಸೇದುವವರಿದ್ದಾರೆ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಬಳಸುವವರು ಸುಮಾರು 200 ಮಿಲಿಯನ್ ಜನರಿದ್ದಾರೆ. ಈ ಅಂಕಿ ಅಂಶಗಳು ಇದೇ ರೀತಿ ಮುಂದುವರಿದರೆ 2030ರ ವೇಳೆಗೆ ಪ್ರಪಂಚದಲ್ಲಿ ಪ್ರತಿವರ್ಷ ಧೂಮಪಾನವು 8 ಮಿಲಿಯನ್‌ ಜನರನ್ನ ಕೊಲ್ಲುವುದರಲ್ಲಿ ಅಚ್ಚರಿ ಇಲ್ಲ.

ಆದರೂ ಇಂದಿಗೂ ತಂಬಾಕು ಅತ್ಯಂತ ವ್ಯಾಪಕವಾಗಿ ಲಭ್ಯವಿರುವ ವ್ಯಸನಕಾರಿ ವಸ್ತುವಾಗಿ ಉಳಿದಿದೆ ಮತ್ತು ಅದನ್ನು ಎಲ್ಲಬೇಕಾದರು ಸುಲಭವಾಗಿ ಖರೀದಿಸಬಹುದಾಗಿದೆ. ತಂಬಾಕು ಉತ್ಪಾದಕರಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದ್ದು, ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌ ಮತ್ತು ಉತ್ತರ ಪ್ರದೇಶದ ಒಟ್ಟು ಉತ್ಪಾದನೆಯ ಪ್ರಮಾಣ ಶೇ.80ರಷ್ಟಿದೆ. 

ಈ ಪ್ರಯತ್ನದಲ್ಲಿ ಎಚ್‌ಸಿಜಿಯ ಚಿಂತಕರ ಚಾವಡಿಯಾಗಿರುವ ಅಂತರ್‌ಧ್ವನಿ, ರಾಜ್ಯದಲ್ಲಿ ಹೆಚ್ಚಾಗಿ ತಂಬಾಕು ಬೆಳೆಯುವ ಪ್ರದೇಶವಾಗಿರುವ ಹುಣಸೂರಿನಲ್ಲಿ ದೇಶದಲ್ಲೇ ಮೊದಲ ಪರ್ಯಾಯ ಕೃಷಿ ಯೋಜನೆ ಆರಂಭಿಸಿದೆ. ಈ ಯೋಜನೆ 50 ಮಂದಿ ರೈತರನ್ನು ಒಳಗೊಂಡಿದೆ. ಇವರುಗಳು ಪ್ರಾಥಮಿಕವಾಗಿ ತಮ್ಮ ಕೃಷಿ ಭೂಮಿಯ 1 ಎಕರೆಯಲ್ಲಿ ಶ್ರೀಗಂಧದ ಜೊತೆಗೆ ಇತರ ಸೀಸನಲ್‌ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಈ ಯೋಜನೆಯ ಮೊದಲ ಹಂತದಲ್ಲಿ ಒಟ್ಟು 50 ಎಕರೆ ಪ್ರದೇಶದಲ್ಲಿ ಹಾಕಲಾಗಿದೆ.

ಇದಕ್ಕಾಗಿ ಎಚ್‌ಸಿಜಿಯ ಸಂಸ್ಥೆಯು ಉನ್ನತ ದರ್ಜೆಯ 15 ಸಾವಿರಕ್ಕೂ ಹೆಚ್ಚು ಶ್ರೀಗಂಧದ ಸಸಿಗಳನ್ನ ಮತ್ತು 8 ಸಾವಿರಕ್ಕೂ ಹೆಚ್ಚಿನ ಲಾಭದಾಯಕ ಹಣ್ಣಿನ ಸಸಿಗಳನ್ನು ಉಚಿತವಾಗಿ ರೈತರಿಗೆ ನೀಡಿದೆ. ಅಲ್ಲದೇ ಪರ್ಯಾಯ ಬೆಳೆಯನ್ನು ಬೆಳೆಯುವ ಪ್ರತಿ ಹಂತದಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೃಷಿ ವಿಜ್ಞಾನಿಗಳು, ಪರಿಸರಶಾಸ್ತ್ರಜ್ಞರು ಮತ್ತು ತಜ್ಞರ ತಂಡವನ್ನು ಹೊಂದಿದ್ದೇವೆ.

ಕರ್ನಾಟಕದ ತಂಬಾಕು ಬೆಳೆಗಾರರು ಆರ್ಥಿಕವಾಗಿ ಲಾಭದಾಯಕವಾದ ಪರ್ಯಾಯ ಯೋಜನೆಯನ್ನ ಮಾಡಲು ಸಾಧ್ಯವಾಗಿರಲಿಲ್ಲ. ಅಲ್ಲದೇ ವಿವಿಧ ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿಗೆ ಅನುಗುಣವಾಗಿ ತಂಬಾಕಿನ ಬದಲಿಗೆ ಬೆಳೆಯಬಹುದಾದ ಬೆಳೆಗಳನ್ನು ಗುರುತಿಸುವುದು, ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆ ಜೊತೆಗೆ ತಂಬಾಕು ಬೆಳೆಯುವುದರಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವ ಅವಶ್ಯಕತೆ ಹಿಂದಿನಿಂದಲೂ ಇದೆ. (ಅರಣ್ಯನಾಶ) – ಇದು ಹೆಚ್ಚಾಗಿ ತಿಳಿಯದ ಸತ್ಯವಾಗಿದ್ದು, ಸಿಗರೇಟ್‌ಗಳಿಗೆ ಬಳಸುವ FCV (ಫ್ಲೂ ಕ್ಯೂರ್ಡ್‌ ವರ್ಜೀನಿಯಾ) ತಂಬಾಕು ಬೆಳೆಗಾರರನ್ನು ಒಳಗೊಂಡಿರುತ್ತದೆ. ಇದು ಹೆಚ್ಚು ಲಾಭದಾಯಕ ಆಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ಸಾಂಸ್ಥಿಕ ಬೆಂಬಲವನ್ನು ಹೊಂದಿಗೆ ಮತ್ತು ತಂಬಾಕು ಉದ್ಯಮದಿಂದ ಬೆಂಬಲಿತವಾಗಿದೆ.

ತಂಬಾಕಿನ ವಿರುದ್ಧ ಹೋರಾಡುತ್ತಿರುವ ಕ್ಯಾನ್ಸರ್‌ ಆಸ್ಪತ್ರೆ ತನ್ನ ಸ್ವಂತ ವ್ಯವಹಾರವನ್ನು ಏಕೆ ಪಣಕ್ಕಿಡುತ್ತಿದೆ?

ಯೋಜನೆ ಅಂಕಿಅಂಶಗಳು

ಒಟ್ಟು ರೈತರು: 50
ಒಟ್ಟು ಭೂ ವಿಸ್ತೀರ್ಣ: 1 ಎಕರೆ(ಪ್ರತಿ ರೈತರಿಂದ)
ಒಟ್ಟು ಎಕರೆಗಳು: 50 ಎಕರೆ
ಸ್ಥಳ: ಹುಣಸೂರು(ಮೈಸೂರು)
1ಕೆಜಿ FCV ತಂಬಾಕಿ ಬೆಲೆ: 150-200 ರೂ.
1ಕೆಜಿ ಶ್ರೀಗಂಧ: 28ರಿಂದ 30 ಸಾವಿರ ರೂ.

ಏಕೆ ತಂಬಾಕು ಗುರಿ?
ಭಾರತದಲ್ಲಿ ತಂಬಾಕು ಸೇವನೆಯಿಂದ ಪ್ರತಿ ವರ್ಷ ಪ್ರಾಣ ಕಳೆದುಕೊಳ್ಳುತ್ತಿರುವವರು: 13.5 ಲಕ್ಷ
ಭಾರತದಲ್ಲಿ ತಂಬಾಕು ಬಳಕೆಯಿಂದ ಆರ್ಥಿಕ ಹೊರೆ(2011): 104,500 ಕೋಟಿ
ಅರಣ್ಯ ನಾಶ: 1ಕೆಜಿ ತಂಬಾಕು ಎಲೆಗಳನ್ನು ಸುಡಲು 8ಕೆಜಿ ಉರುವಲು ಬೇಕಿದೆ
ಭಾರತದಲ್ಲಿ ತಂಬಾಕು ಬಳಕೆದಾರರು: 266.8 ಮಿಲಿಯನ್
ಧೂಮಪಾನಿಗಳು: 99.5 ಮಿಲಿಯನ್‌
ಹೊಗೆರಹಿತ ತಂಬಾಕು ಬಳಕೆದಾರರ: 199.3.

 

 

Leave a Reply

Your email address will not be published. Required fields are marked *