ಗಜಪಡೆಗೆ ಅವಮಾನಿಸಿದ ಅರಣ್ಯ ಸಚಿವ ಶೂ ಧರಿಸಿ ಗಜಪಡೆಗೆ ಪೂಜೆ ಸಲ್ಲಿಸಿದ ಉಮೇಶ್ ಕತ್ತಿ

288 Views

ವೀರನಹೊಸಹಳ್ಳಿ:7 ಆಗಸ್ಟ್ 2022

ನಂದಿನಿ ಮೈಸೂರು

ಅರಣ್ಯ ಸಚಿವ ಉಮೇಶ್ ಕತ್ತಿ
ದಸರಾ ಗಜಪಡೆ ಪೂಜೆ ವೇಳೆ ಶೂ ಧರಿಸಿಯೇ ಗಜ ಪಡೆಗೆ ಪೂಜೆ ಸಲ್ಲಿಸಿ ಟೀಕೆಗೆ ಗುರಿಯಾಗಿದ್ದಾರೆ.

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2022 ಮೊದಲ ಪೂಜೆ ಗಜಪಯಣ .ವೀರನ ಹೊಸಹಳ್ಳಿಯಲ್ಲಿ
9:01 ರಿಂದ 9:39 ವರಗೆ ಸಲ್ಲುವ ಶುಭ ಲಗ್ನದಲ್ಲಿ ಗಜಪಡೆಗೆ ಪೂಜಾ ಸಲ್ಲಿಸುವ ವೇಳೆ ಉಮೇಶ್ ಕತ್ತಿ ಮಾತ್ರ ಶೂ ಧರಿಸಿ ಪೂಜೆ ಮಾಡಿದ್ದಾರೆ.

ಸಾಮಾನ್ಯ ಯಾವುದೇ ಕಾರ್ಯಕ್ರಮಗಳಲ್ಲಿ
ಸಂಪ್ರದಾಯವಾಗಿ ಪೂಜೆ ಸಲ್ಲಿಸುವಾಗ ಚಪ್ಪಲಿ,ಶೂ ಧರಿಸುವುದಿಲ್ಲ.ಆದ್ರೆ ಉಮೇಶ್ ಕತ್ತಿ ಎಲ್ಲವನ್ನೂ ಮರೆತು ಶೂ ಧರಿಸಿ ಪೂಜೆ ಸಲ್ಲಿಸಿದ್ದಾರೆ.ಇದೇ ಮೊದಲ ಬಾರಿಗೆ ಗಜಪಯಣಕ್ಕೆ ಆಗಮಿಸಿದ್ದ ಉಮೇಶ್ ಕತ್ತಿ ಇವರಿಗೆ ಸಂಸ್ಕೃತಿ, ಆಚಾರ,ವಿಚಾರ ಇಲ್ಲವೇ ಸಚಿವ ಸ್ಥಾನದಲ್ಲಿದ್ದುಕೊಂಡು ಗಜಪಡೆಗೆ ಅವಮಾನಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published. Required fields are marked *