ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ಸಾವು

ಬೆಂಗಳೂರು:6 ಸೆಪ್ಟೆಂಬರ್ 2022

ನಂದಿನಿ ಮೈಸೂರು

ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ(61 ವರ್ಷ) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ತಮ್ಮ ಮನೆಯಲ್ಲಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ.ತಕ್ಷಣ  ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಉಮೇಶ್ ಕತ್ತಿ ಸಾವನ್ನಪ್ಪಿದ್ದಾರೆ.ವಿಧಾನ ಸಭೆಗೆ ಎಂಟು ಬಾರಿ ಆಯ್ಕೆಯಾಗಿದ್ದ ಸಚಿವ ಉಮೇಶ್ ಕತ್ತಿ.ಬೆಳಗಾವಿ ಜಿಲ್ಲೆ ಹುಕ್ಕೆರಿ ವಿಧಾನ ಸಭಾಕ್ಷೇತ್ರದಿಂದ ಶಾಸಕರಾಗಿದ್ದು ಈಗ ಆಹಾರ ಇಲಾಖೆಯ ಸಚಿವರಾಗಿದ್ದರು.25 ನೇ ವರ್ಷಕ್ಕೆ 1985 ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದ ಉಮೇಶ್ ಕತ್ತಿ ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತೇನೆ ಎಂದು ಆಸೆ ಹೊಂದಿದ್ದರು.

ಕಳೆದ ಒಂದು ತಿಂಗಳ ಹಿಂದೆ ಹುಣಸೂರು ತಾಲೂಕು ವೀರನ ಹೊಸಹಳ್ಳಿಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ 2022 ಗಜಪಯಣದ ಪೂಜೆಯಲ್ಲಿ ಭಾಗಿಯಾಗಿದ್ದರು.ನಾನು ಇದೇ ಮೊದಲು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ದಸರಾ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದರು.ಗಜಪಡೆಗೆ ಪೂಜೆ ಸಲ್ಲಿಸುವ ವೇಳೆ ಶೂ ಧರಿಸಿದ್ದರೂ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ನಂತರ ಮಾಧ್ಯಮಗಳ ಮುಂದೆ ಬಂದು ನಾನು ಬಟ್ಟೆ ಶೂ ಧರಿಸಿದ್ಧೇ ಎಂದು ಸ್ಪಷ್ಟಪಡಿಸಿದ್ದರು.

Leave a Reply

Your email address will not be published. Required fields are marked *