ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ,  ನೂತನ ಮೇಯರ್ ಶಿವಕುಮಾರ್, ಉಪಮೇಯರ್ ಜಿ.ರೂಪ ಆಯ್ಕೆ

 

 

ನಂದಿನಿ ಮೈಸೂರು

ಮೈಸೂರು:6 ಸೆಪ್ಟೆಂಬರ್ 2022

ಪ್ರತಿಷ್ಠಿತ ಮೈಸೂರು ಮಹಾನಗರ ಪಾಲಿಕೆಗೆ ಇಂದು 24ನೇ ಮೇಯರ್ ಗಳನ್ನು ಆಯ್ಕೆ ಮಾಡುವ ಚುನಾವಣೆ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಯಿತು.

    ರೀಜನಲ್ ಕಮಿಷನರ್ ಹಾಗೂ ಚುನಾವಣಾ ಅಧಿಕಾರಿಯೂ ಆದ ಸಿ.ಜಿ. ಪ್ರಕಾಶ್ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರದ ಲಕ್ಷ್ಮಿಕಾಂತ ರೆಡ್ಡಿ ಪಾಲಿಕೆಯ ಸದಸ್ಯರುಗಳು ಹಾಗೂ ಮೈಸೂರು ನಗರದ ಎಲ್ಲ ಪಕ್ಷಗಳ ಜನಪ್ರತಿನಿಧಿಗಳ ಕೈ ಎತ್ತಿಸುವ ಮೂಲಕ ಚುನಾವಣೆ ನಡೆಸಿಕೊಟ್ಟರು.


     ಇಂದಿನ ಚುನಾವಣೆಯಲ್ಲಿ ಬಿಜೆಪಿಯ ಎಂ.ಶಿವಕುಮಾರ್ ಮೇಯರ್ ಆಗಿಯೂ, ಜಿ. ರೂಪ ಉಪಮೇಯರಾಗಿ ಆಯ್ಕೆಯಾದರು.
     ಬಿಜೆಪಿ, ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದ್ದ ರೂ ಸಹ ಎರಡೂ ಸ್ಥಾನಗಳು ಬಿಜೆಪಿಗೆ ಒಲಿದಿವೆ.

      ಆರಂಭದಲ್ಲಿ ಬಿಜೆಪಿಗೆ ಮೇಯರ್ ಸ್ಥಾನ, ಜೆಡಿಎಸ್ ಗೆ ಉಪಮೇಯ ಸ್ಥಾನ ಬಿಟ್ಟುಕೊಡುವುದಾಗಿ ಎರಡು ಪಕ್ಷಗಳ ಹೊಂದಾಣಿಕೆಯಲ್ಲಿ ನಿರ್ಣಯವಾಗಿತ್ತು ಆದರೆ ಜೆಡಿಎಸ್ ನ ಉಪಮೇಯರ್ ಸ್ಥಾನಕ್ಕೆ  ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರೇಷ್ಮಾ ಭಾನು ಅವರ ನಾಮಪತ್ರ ಬಿಸಿಎ ಪ್ರಮಾಣ ಪತ್ರ ಇಲ್ಲದ ಕಾರಣ ತಿರಸ್ಕೃತಗೊಂಡಿತು.

       ಇದರಿಂದಾಗಿ ಕಣದಲ್ಲಿ ಬಿಜೆಪಿಯ  ರೂಪ,  ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದ ಜೆಡಿಎಸ್ ನ ನಿರ್ಮಲ ಕಣದಲ್ಲಿ ಉಳಿದಿದ್ದರು, ಆದರೆ ನಿರ್ಮಲಾರವರು ಕಾಂಗ್ರೆಸ್ ಪರವಾಗಿ ಕೈಯೆತ್ತಿದ್ದರಿಂದ, ಜೆಡಿಎಸ್ ಪಕ್ಷದವರು ತಮ್ಮದೇ ಪಕ್ಷದ ಅಭ್ಯರ್ಥಿ ನಿರ್ಮಲ ಪರವಾಗಿ ಕೈ ಎತ್ತದ ಕಾರಣ ಅವರಿಗೆ ಕಾಂಗ್ರೆಸ್ ಮತ್ತು ನಿರ್ಮಲ ಅವರ ಮತ ಸೇರಿದಂತೆ. ಒಟ್ಟು 28 ಮತಗಳು ಲಭಿಸಿದವು.

      ಬಿಜೆಪಿ ಮತ್ತು ಜೆಡಿಎಸ್ ನವರ ಮತಗಳಿಂದ ಜಿ. ರೂಪ ಅವರಿಗೆ 45 ಮತಗಳು ಲಭಿಸಿದವು. ಇದರಿಂದಾಗಿ ಜಿ. ರೂಪ ರವರು ಉಪಮೇಯರಾಗಿ ಆಯ್ಕೆಯಾದರು.

        ಇದೇ ಸಮಯದಲ್ಲಿ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೂ 7 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದರು.

       ಇಂದಿನ ಮೇಯರ್ ಚುನಾವಣೆಯಲ್ಲಿ, ಜನಪ್ರತಿನಿಧಿಗಳಾದ ಜೆಡಿಎಸ್ ನ ಜಿ.ಟಿ. ದೇವೇಗೌಡ, ಸಿ.ಎನ್. ಮಂಜೇಗೌಡ, ಮರಿ ತಿಬ್ಬೇಗೌಡ, ಬಿಜೆಪಿಯ ರಾಮದಾಸ್, ನಾಗೇಂದ್ರ, ಎಚ್ ವಿಶ್ವನಾಥ್, ಪ್ರತಾಪ್ ಸಿಂಹ ಎಂ.ಪಿ. ಕಾಂಗ್ರೆಸ್ ಪಕ್ಷದ ವತಿಯಿಂದ ತನ್ವೀರ್ ಸೇಟ್, ಡಿ ತಿಮ್ಮಯ್ಯ, ಮಧು ಜಿ. ಮಾದೇಗೌಡ ಉಪಸ್ಥಿತರಿದ್ದು ಮತ ಚಲಾಯಿಸಿದರು.

Leave a Reply

Your email address will not be published. Required fields are marked *