ಮೈಸೂರು:2 ಆಗಸ್ಟ್ 2022
ನಂದಿನಿ ಮೈಸೂರು
ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಹಾಗೂ ಭಾರತೀಯ ರೆಡ್ ಕ್ರಾಸ್ ಮೈಸೂರು ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ತಪಾಸಣಾ ಶಿಬಿರಗಳನ್ನು ಸದ್ಯದಲ್ಲೇ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೇಂದ್ರದ ಸದಸ್ಯ ಕಾರ್ಯದರ್ಶಿ ಎಸ್.ಎಸ್. ವೈದ್ಯನಾಥ್ ತಿಳಿಸಿದರು.
ವಿಶೇಷ ಚೇತನರಿಗಾಗಿ ಜಿಲ್ಲೆಯ ಎಂಟೂ ತಾಲೂಕುಗಳಲ್ಲಿ ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವೈದ್ಯಕೀಯ ತಪಾಸಣೆ ಹಾಗೂ ಅರಿವು ಕಾರ್ಯಕ್ರಮ ನಡೆಸಲಾಗುವುದು.
ಈ ವೇಳೆ ಎಷ್ಟು ಪ್ರಮಾಣದಲ್ಲಿ ವಿಶೇಷ ಚೇತನರು ಎಂಬುದನ್ನು ಗುರುತಿಸಿ ಯುಡಿಐಡಿ ಕಾರ್ಡ್ ನೀಡಲಾಗುವುದು. ಸರ್ಕಾರದ ಹಲವಾರು ಸೌಲಭ್ಯಗಳನ್ನು ದೇಶದ ಯಾವುದೇ ಭಾಗದಲ್ಲಿಯಾದರೂ ಪಡೆಯಲು ಈ ಕಾರ್ಡ್ ಅಗತ್ಯವಾಗಿದೆ. ಮೈಸೂರು ಜಿಲ್ಲೆಯಲ್ಲಿ 60 ಸಾವಿರ ಮಂದಿ ಅಂಗವಿಕಲರು ಇದ್ದಾರೆ.
ಹೀಗಾಗಿ ಯಾವ ಯಾವ ದಿನಗಳಂದು ಎಲ್ಲೆಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗುವುದು ಎಂಬುದನ್ನು ಮುಂದೆ ತಿಳಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ
ರೆಡ್ ಕ್ರಾಸ್ ಸಂಸ್ಥೆಯ ಕೆ.ಎಂ. ವೀರಯ್ಯ, ಬಸಪ್ಪ, ನಾಗರಾಜು ಜೊತೆಗಿದ್ದರು.