ಮೈಸೂರು:3 ಆಗಸ್ಟ್ 2022
ನಂದಿನಿ ಮೈಸೂರು
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಬೇಕು. ಅವರ ಪ್ರಾಮಾಣಿಕ ಹಾಗೂ ಜಾತ್ಯತೀತ ಜನಪರ ಸೇವೆಯ ಆಡಳಿತ ನಾಡಿನ ಜನತೆಗೆ ಮತ್ತೊಮ್ಮೆ ಲಭಿಸುವಂತಾಗಬೇಕು ಎಂದು ಕೆಪಿಸಿಸಿ ಸದಸ್ಯರಾದ ವಿಣಾ ಹೇಳಿದರು.
ಚಾಮುಂಡೇಶ್ವರಿ ಯುವ ಬಳಗ ವತಿಯಿಂದ ಮಾಜಿ ಮುಖ್ಯಮಂತ್ರಿ ಭಾಗ್ಯಗಳ ಸರದಾರ ಸಿದ್ದರಾಮಯ್ಯ ರವರ 75ನೇ ಹುಟ್ಟಿದ ಹಬ್ಬದ ಅಂಗವಾಗಿ ಹಲವಾರು ಭಾಗ್ಯಗಳಲ್ಲಿ ಬಡವರಿಗಾಗಿ ಕೊಟ್ಟಂತಹ ಕೊಡುಗೆ ಇಂದಿರಾ ಕ್ಯಾಂಟೀನ್ ಸಹ 1 ಹಾಗಾಗಿ ಗನ್ ಹೌಸ್ ವೃತ್ತದಲ್ಲಿರುವ
ಇಂದಿರಾಕ್ಯಾಂಟೀನ್ ಮುಂಭಾಗ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಆಹಾರ ಹಾಗೂ ವಿಶೇಷವಾಗಿ ಮೈಸೂರ್ ಪಾಕ್ ವಿತರಿಸುವ ಮೂಲಕ ಸಿದ್ದರಾಮಯ್ಯ ರವರ ಕೊಡುಗೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು
ನಂತರ ಮಾತನಾಡಿದ ಕೆಪಿಸಿಸಿ ಸದಸ್ಯರಾದ ವೀಣಾ
ದೇವರಾಜ ಅರಸು ಅವರ ನಂತರ ರಾಜ್ಯ ಕಂಡ ಅತ್ಯಂತ ಧೀಮಂತ ನಾಯಕ. ಅಭಿವೃದ್ಧಿಯ ಹರಿಕಾರ, ರಾಜ್ಯದ ಎಲ್ಲ ಬಡವರ್ಗದವರ ಪಾಲಿನ ಆಶಾಕಿರಣವಾಗಿರುವ ಸಿದ್ದರಾಮಯ್ಯನವರು ,
ಸಿದ್ದರಾಮಯ್ಯ ಅವರು ಎಲ್ಲಾ ಸಮುದಾಯಗಳ ನಾಯಕರು .ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನೀಡಿದ ಮುಖ್ಯಮಂತ್ರಿ .ಬಿಜೆಪಿ ದುರಾಡಳಿತದಿಂದ ಜನರು ಸಿದ್ದರಾಮಯ್ಯ ಅವರ ಆಡಳಿತವನ್ನು ನೆನಪಿಸುತ್ತಿದ್ದಾರೆ ,
ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನ ಕಾರ್ಯಕ್ರಮ ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಲಿದೆ .
ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಕೆ ಅಶೋಕ್ ,ವಿನಯ್ ಕಣಗಾಲ್ ,ಚಾಮುಂಡೇಶ್ವರಿ ಯುವಬಳಗದ ಅಧ್ಯಕ್ಷ ಶ್ರೀನಿವಾಸ್ ಕುಂಚಿಟಿಗ ,ಎಸ್ ಎನ್ ರಾಜೇಶ್ ,ಚೇತನ್ ಕಾಂತರಾಜು ,ಸುನಿಲ್ ನಾರಾಯಣ್ ,ಫ್ರಾನ್ಸಿಸ್ ,ನಾಗರಾಜ್ ,ರಾಜು ,ಹಾಗೂ ಇನ್ನಿತರರು ಹಾಜರಿದ್ದರು.