ದಿ.ತೂಗುದೀಪ ಶ್ರೀನಿವಾಸ್ ರವರ 26ನೇ ವರ್ಷದ ಪುಣ್ಯಸ್ಮರಣೆ

ಮೈಸೂರು:16 ಅಕ್ಟೋಬರ್ 2021
ನ@ದಿನಿ
ದಿ. ತೂಗುದೀಪ ಶ್ರೀನಿವಾಸ್ ರವರ 26ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಚಾಲೆಂಜಿಂಗ್ Star ದರ್ಶನ್ ಅಭಿಮಾನಿ ಅಭಿಮಾನಿ ಬಳಗದ ವತಿಯಿಂದ ಲಲಿತಮಹಲ್ ಪ್ಯಾಲೇಸ್ ಬಳಿ ಇರುವ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆನಂತರ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಸ್ಮರಿಸಿದರು.
ಇದೇ ಸಂದರ್ಭದಲ್ಲಿ ದಿವಂಗತ ತೂಗುದೀಪ ಶ್ರೀನಿವಾಸ್ ರವರ ಅಭಿಮಾನಿ ಬಳಗದ ಮುಖ್ಯ ಸಂಚಾಲಕರಾದ ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ ಕನ್ನಡ ಸಿನಿಮಾರಂಗದಲ್ಲಿ ಖಳನಟನಿಗೂ ಬೇರೆಯದ್ದೇ ಗತ್ತು ಗಾಂಭೀರ್ಯ ಇದೆ ಎನ್ನುವುದನ್ನು ಅಭಿನಯದ ಮೂಲಕವೇ ಪ್ರೇಕ್ಷಕರಿಗೆ ತೋರಿಸಿಕೊಟ್ಟ ನಟ ತೂಗುದೀಪ್ ಶ್ರೀನಿವಾಸ್ ,ಕಲಾವಿದನಾಗಿ ಸಾವಿಲ್ಲ ಸಾವು ಅವರ ದೇಹಕ್ಕೆ ಮಾತ್ರ ಎನ್ನುವ ಮಾತಿದೆ .ಅಂತೆಯೇ ತೂಗುದೀಪ ಶ್ರೀನಿವಾಸ್ ನಮ್ಮಂತಹ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದರೂ ಕೂಡ ಇಂದಿಗೂ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಅವರು ಅಜರಾಮರ .ಹಾಗೆಯೇ ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದಂತಹ ಮೇರು ಕಲಾವಿದರು .ಅಂಥವರ ಪ್ರತಿಮೆಯನ್ನು ಲಲಿತ್ ಮಹಲ್ ರಸ್ತೆಯಲ್ಲಿರುವ ವೃತ್ತದಲ್ಲಿ ಅವರ ಕಂಚಿನ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಮೇರು ನಟನಿಗೆ ನಗರಪಾಲಿಕೆ ಗೌರವ ಕೊಡಬೇಕೆಂದು ವಿನಂತಿಸಿದರು .ಇಲ್ಲವಾದಲ್ಲಿ ಅಭಿಮಾನಿಗಳು ಅವರ ಸ್ವಂತ ಹಣದಿಂದಲೇ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗುತ್ತೇವೆ ಎಂದು ಹೇಳಿದರು .ತೂಗುದೀಪ್ ಶ್ರೀನಿವಾಸ್ ರವರ ಸುಪುತ್ರ ದರ್ಶನ್ ರವರು ಕೋವಿಡ್ ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲಿ ಬಿರುಗಾಳಿಯ ಪ್ರಾಣಿಗಳ ದತ್ತು ಸ್ವೀಕಾರ ಹಾಗೂ ಕಲಾವಿದರ ಸಂಕಷ್ಟಕ್ಕೆ ಹಾಗೂ ಚಿತ್ರಮಂದಿರದ ಕೆಲಸಗಾರರಿಗೆ ದಿನ ಟಿಕೆಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದರು ಈ ಸಂದರ್ಭದಲ್ಲಿ ಸ್ಮರಿಸಿದರು .
ಹರೀಶ್ ನಾಯ್ಡು ,ದಚ್ಚು ರಾಜ್ ,
ಲಿಂಗರಾಜು ,ಮಂಜುನಾಥ್ ರಾಘವೇಂದ್ರ,ಲೋಕನಾಥ್
ವಿನೋದ್ ತಾವರೆಕೆರೆ,ಸಂತೋಷ್ ಗಜ ,ಸಂತೋಷ್ ಬಿ ಎನ್ ,ಮುರಳಿ,ಮುರುಗ ದಚ್ಚು ರಾಜ್,ಸುಪ್ರೀತ್,ನವೀನ್ ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *