ನಂದಿನಿ ಮೈಸೂರು
ಈ ಬಾರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ದೇ ಏರ್ಪಡುವ ಸಾಧ್ಯತೆ ಹೆಚ್ಚು ಇದೆ. ಜಿಟಿಡಿ ವಿರುದ್ದ ತೊಡೆ ತಟ್ಟಲು ಬಿಜೆಪಿ ಟಿಕೇಟ್ ಆಕಾಂಕ್ಷಿ ಎನ್.ಎಂ ಜಗದೀಶ್ ಗೌಡ ಹಾಗೂ ಮರಿಗೌಡ ಕಾಂಗ್ರೇಸ್ ನ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ.ಆದರೇ ಕಾಂಗ್ರೇಸ್ ದಿಂದ ಸಿದ್ದರಾಮಯ್ಯ ಕೂಡ ಚಾಮುಂಡೇಶ್ವರಿ ಕಡೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಜಿಟಿ ದೇವೇಗೌಡರಿಗೆ ಅಧಿಕೃತವಾಗಿ ಟಿಕೇಟ್ ಘೋಷಣೆ ಮಾಡಿದೆ.ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಹಿಂದೆ
ಕಾಂಗ್ರೆಸ್ ನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಸ್ಪರ್ಧಿಸಿ ಸೋಲು ಅನುಭವಿಸಿದ್ರೂ.ನಂತರ ಬಾದಾಮಿಯಲ್ಲಿ ಗೆದ್ರೂ ಈಗ ಕ್ಷೇತ್ರ ಹುಡುಕುವುದರಲ್ಲಿ ಸಿದ್ದು ಬ್ಯೂಸಿ ಯಾಗಿದ್ದಾರೆ. ಕೋಲಾರದಲ್ಲಿ ಸ್ಪರ್ಧಿಸುವಂತೆ ಅಭಿಮಾನಿಗಳು ಒತ್ತಾಯಿಸುತ್ತಿರುವುದು ಒಂದು ಕಡೆಯಾದರೇ ಸೋಲುವ ಭೀತಿಯೂ ಎದುರಾಗಿದೆ. ಕೋಲಾರದಲ್ಲಿ ಸ್ಪರ್ಥಿಸೋದಾ ಅಥವಾ ಕೊನೆ ಚುನಾವಣೆ ಎಂದು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಥಿಸೋಕೆ ಸಿದ್ದು ರೆಡಿಯಾಗುತ್ತಿದ್ದಾರೆಂದು ಗುಪ್ತಚರ ಇಲಾಖೆಯಿಂದ ಮಾಹಿತಿ ಹೊರಬಿದ್ದಿದೆ.
ಆರ್ ಎಸ್ ಎಸ್ ಮುಖಂಡ ನಾಗನಹಳ್ಳಿ ಎನ್.ಎಂ.ಜಗದೀಶ್ ಗೌಡರವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿದ್ದಾರೆ.
ಜಿಟಿಡಿ ಹಾಗೂ ಸಿದ್ದರಾಮಯ್ಯ ನವರು ಬಿಜೆಪಿ ಹೊಸ ಮುಖವಾದ ಜಗದೀಶ್ ಗೌಡರ ನಡುವೆ ತ್ರಿಕೋನ ಸ್ಪರ್ದೇ ಏರ್ಪಡುವ ಸಾಧ್ಯತೆ ಇದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕುಂದು ಕೊರತೆ ಸಮಸ್ಯೆ ಎದುರಿಸುತ್ತಾ ಬಂದಿರುವ ಕ್ಷೇತ್ರದ ಮತದಾರರು ಈ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕ್ತಾರಾ ಎಂಬುದೇ ಕುತೂಹಲ ಮೂಡಿಸಿದೆ.
ಕ್ಷೇತ್ರದ ಸಮೀಕ್ಷೆಯಲ್ಲಿ ಜಗದೀಶ್ ಗೌಡರಿಗೆ ಮತದಾರರು ಒಲವು ತೋರಿದ್ದಾರೆ.ಜಗದೀಶ್ ಗೌಡರಿಗೆ ಈ ಬಾರಿ ಬಿಜೆಪಿಯಿಂದ ಟಿಕೇಟ್ ನೀಡಿದರೇ ಗೆಲ್ಲುವ ಸಾಧ್ಯತೆ ಇದೆ ಎಂದು ಕ್ಷೇತ್ರದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.