ಮೈಸೂರು:30 ಮಾರ್ಚ್ 2022
ನಂದಿನಿ ಮೈಸೂರು
ದೇಶದ ಅನ್ನದಾತರು, ಭಕ್ತಿಗೀತೆ, ಕ್ರಿಶ್ಚಿಯನ್ ಹಾಡು,ಅಂಜನೇಯನ ಹಾಡು ಸೇರಿದಂತೆ ಒಂದು ಸಿನಿಮಾಗೆ ಎಣ್ಣೇ ಹಾಡನ್ನು ಒಂದೇ ದಿನದಲ್ಲಿ ವಿಭಿನ್ನ ಸಾಹಿತ್ಯದ ಐದು ಹಾಡುಗಳನ್ನು ಹಾಡುವ ಮೂಲಕ ನಟರಾಜರವರು
ಉತ್ತಮ ಗಾಯಕ ಎಂದು ನಿರೂಪಿಸಿದ್ದಾರೆ.
ಗಂಧದಗುಡಿಯಲ್ಲಿ ದೇವರಾಗಿ ಕಂಡರು” ಎನ್ನುವ ಗೀತೆಯನ್ನು ಈಗಾಗಲೇ ಮಂಜುಕವಿಯವರ ಸಾಹಿತ್ಯ-ಸಂಗೀತದಲ್ಲಿ ” ಡಾ||ಪುನೀತ್ ರಾಜ್ ಕುಮಾರ್’ರವರಿಗೆ ಗೀತನಮನವನ್ನು ಸಲ್ಲಿಸಿದ್ದಾರೆ. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.
ನಟರಾಜರವರು ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಮಣಿವಿನ ಕುರಿಕೆ ಗ್ರಾಮದವರು. ತಮ್ಮ ಬಾಲ್ಯದಿಂದಲೂ ಎಸ್.ಪಿ ಬಾಲಸುಬ್ರಮಣ್ಯಂರವರ ಗೀತೆಗಳನ್ನು ಕೇಳುವ ಮುಖಾಂತರ ಸಾಹಿತ್ಯ, ಸಂಗೀತ ಹಾಗು ನಟನೆಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು. ವೃತ್ತಿಯಲ್ಲಿ ಸಿವಿಲ್ ಎಂಜಿನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲಸ ಕಾರ್ಯಗಳ ಒತ್ತಡದಲ್ಲೂ ಕಲೆ, ಸಾಹಿತ್ಯ, ಸಂಗೀತದ ಬಗ್ಗೆ ಆಸಕ್ತಿಯಿಂದ ಹಾಡುಗಳನ್ನು ಹಾಡುವ ಮೂಲಕ ಮಾರಕಾಸ್ತ್ರ [Maarakasthra] ಹಾಗು ಸಂಸಾರ ಸಾಗರ ಚಿತ್ರಗಳಿಗೆ ತಮ್ಮ ವಿಶೇಷ ಕಂಠದ ಮೂಲಕ ಧ್ವನಿಯಾಗಿದ್ದಾರೆ.
ಬೆಳಗ್ಗೆ ಎಂ.ಕೆ ಆಡಿಯೋದಲ್ಲಿ ಐದು ಹಾಡುಗಳನ್ನು ಹಾಡಿರುವ ನಟರಾಜರವರು ಗಮನ ಸೆಳೆದಿದ್ದಾರೆ.
5 ಹಾಡುಗಳು ಅದ್ಬುತವಾಗಿ ಮೂಡಿಬಂದಿದ್ದು.ಆದಷ್ಟು ಬೇಗ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.ಇನ್ನೂ ಹೆಚ್ಚಿನ ಕನ್ನಡ ಚಲನಚಿತ್ರ ಗೀತೆಗಳಿಗೆ ತಮ್ಮ ಕಂಠದಾನ ಮಾಡುವ ಮೂಲಕ ತಮ್ಮ ಕಲಾಸೇವೆಯನ್ನು ಮುಂದುವರೆಸುವಲ್ಲಿ ಉತ್ಸುಕರಾಗಿದ್ದಾರೆ.