ನಂದಿನಿ ಮೈಸೂರು
*ಬಿಜೆಪಿ ಗೆಲ್ಲಲು ಬೂತ್ ಮಟ್ಟದ ಕಾರ್ಯಕರ್ತರು ಶಕ್ತಿ: ಟಿ ಎಸ್ ಶ್ರೀವತ್ಸ*
![](https://bharathnewstv.in/wp-content/uploads/2025/01/OPENING-TODAY.jpg)
ಟಿ ಕೆ ಲೇಔಟ್ ನಲ್ಲಿ ಬಿಜೆಪಿ ಅಭ್ಯರ್ಥಿ ಟಿ ಎಸ್ ಶ್ರೀವತ್ಸ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಮತಯಾಚನೆ ಸಂದರ್ಭದಲ್ಲಿ ಪ್ರತಿ ಬೂತ್ ಗಳಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿ ಪರ ಜೈ
ಘೋಷ ಕೂಗಿ ಪ್ರಚಾರದಲ್ಲಿ ಭಾಗಿಯಾಗಿದ್ದರು.
ನಂತರ ಮಾತನಾಡಿದ ಬಿಜೆಪಿ ಅಭ್ಯರ್ಥಿ ಟಿ ಎಸ್ ಶ್ರೀವತ್ಸ ಪ್ರಧಾನಿ ನರೇಂದ್ರ ಮೋದಿ ಅವರು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದು, ಬಿಜೆಪಿ ಪಕ್ಷಕ್ಕೆ ಬೂತ್ ಮಟ್ಟದ ಕಾರ್ಯಕರ್ತರ ಸಂಘಟತ ಶಕ್ತಿಯೇ ಬಲ, ಪ್ರತಿಯೊಂದು ಬೂತ್ ಗಳಲ್ಲಿಯೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಾಶಕ್ತಿ ಕೇಂದ್ರಗಳಲ್ಲಿರುವ ವಿವಿಧ ಬೂತ್ಗಳ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆಮನೆಗಳಲ್ಲಿ ತಲುಪಿಸುತ್ತಿದ್ದಾರೆ , ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಮೆಚ್ಚಿಗೆ ಸೂಚಿಸುತ್ತಿದ್ದಾರೆ, 2023ರ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ರಾಜ್ಯದಲ್ಲಿಯೇ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ, ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಮೂಲಕ ಅಭಿವೃದ್ಧಿಯ ಪರ್ವ ಮುಂದುವರಿಸಲಿದೆ ಎಂದರು .
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಗೌಡ, ಬಿ ಎಂ ರಘು, ಮಾಜಿನಗರ ಪಾಲಿಕಾ ಸದಸ್ಯರಾದ ಜಗದೀಶ್, ಶಂಕರ್, ಮೃಗಾಲಯ ಪ್ರಾಧಿಕಾರ ಸದಸ್ಯರಾದ ಜ್ಯೋತಿ ರೇಚಣ್ಣ, ವಾರ್ಡ್ ಅಧ್ಯಕ್ಷ ಶಿವಣ್ಣ, ರಮೇಶ್ ,ಮಧು, ಪೂರ್ಣಿಮಾ ಹಾಗೂ ಇನ್ನಿತರರು ಹಾಜರಿದ್ದರು.