ಎಲ್ & ಟಿ ಟೆಕ್ನಾಲಜಿ ಸರ್ವೀಸಸ್ ವಾರ್ಷಿಕ ಎಂಜಿನಿಯರಿಂಗ್ ಆಯೋಜಿಸಿದ 6 ನೇ ಆವೃತ್ತಿಯ ಹ್ಯಾಕಥಾನ್ ಟೆಕ್‍ಜಿಎಂ ದಾಖಲೆ ಭಾಗವಹಿಸುವಿಕೆ

ನಂದಿನಿ ಮೈಸೂರು

*ಎಲ್ & ಟಿ ಟೆಕ್ನಾಲಜಿ ಸರ್ವೀಸಸ್ ವಾರ್ಷಿಕ ಎಂಜಿನಿಯರಿಂಗ್ ಆಯೋಜಿಸಿದ 6 ನೇ ಆವೃತ್ತಿಯ ಹ್ಯಾಕಥಾನ್ ಟೆಕ್‍ಜಿಎಂ ದಾಖಲೆ ಭಾಗವಹಿಸುವಿಕೆ*

ಎಲ್ & ಟಿ ಟೆಕ್ನಾಲಜಿ ಸರ್ವಿಸಸ್ ಆಯೋಜಿಸಿದ ಜನಪ್ರಿಯ ಅಕಾಡೆಮಿ – ಇಂಡಸ್ಟ್ರಿ ಇಂಜಿನಿಯರಿಂಗ್ ಇನ್ನೋವೇಶನ್ ಹ್ಯಾಕಥಾನ್ ‘ಟೆಕ್‍ಜಿಎಂ’ ಆರನೇ ಆವೃತ್ತಿ ಆವೃತ್ತಿ ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು ಇದರ ವಿಚಾರವಾಗಿ ಇಂದು ಸುದ್ದಿಗೋಷ್ಟಿ ನಡೆಸಲಾಯಿತು.

ಟೆಕ್‍ಜಿಎಂನ 6ನೇ ಆವೃತ್ತಿಯ ಕುರಿತು ಮಾತನಾಡಿದ ಎಲ್ & ಟಿ ಟೆಕ್ನಾಲಜಿ ಸೇವೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಮಂಡಳಿಯ ಸದಸ್ಯ ಅಭಿಷೇಕ್ ಸಿನ್ಹಾ, “ಟೆಕ್‍ಜಿಎಂ ಮಹತ್ವಾಕಾಂಕ್ಷೆಯ ಯುವ ಇಂಜಿನಿಯರ್‍ಗಳಿಗೆ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಸಹಯೋಗಿಸಲು ಅವಕಾಶವನ್ನು ಒದಗಿಸುತ್ತದೆ. ಈ ವರ್ಷದ ಸ್ಪರ್ಧೆಗಳು ಎಲ್‍ಟಿಟಿಎಸ್‍ನ ಅತ್ಯಂತ ಹಳೆಯ ಕ್ಯಾಂಪಸ್‍ಗಳಲ್ಲಿ ಒಂದಾದ ಮತ್ತು ಎಂಜಿನಿಯರಿಂಗ್ ಆವಿಷ್ಕಾರದ ಕೇಂದ್ರ ಎನಿಸಿದ ನಮ್ಮ ಮೈಸೂರು ಕ್ಯಾಂಪಸ್‍ನಲ್ಲಿ ನಡೆದ ಕಾರಣ ಅತ್ಯಂತ ವಿಶೇಷ ಎನಿಸಿದೆ. ಯುವ ಎಂಜಿನಿಯರಿಂಗ್ ಮನಸ್ಸುಗಳು ಪ್ರದರ್ಶಿಸುವ ಉತ್ಸಾಹ ಮತ್ತು ಸೃಜನಶೀಲತೆಯ ಮಟ್ಟವನ್ನು ನೋಡಲು ಇದು ಉತ್ತೇಜನಕಾರಿಯಾಗಿದೆ.

ಎಲ್‍ಟಿಟಿಎಸ್‍ನ ಮೈಸೂರು ಕ್ಯಾಂಪಸ್‍ನಲ್ಲಿ ನಡೆದ ವಾರ್ಷಿಕ ತಂತ್ರಜ್ಞಾನ ಸ್ಪರ್ಧೆಯಲ್ಲಿ ದೇಶದ ವಿಧೆಡೆಗಳಿಂದ ಆಗಮಿಸಿದ್ದ 475 ಕ್ಕೂ ಎಂಜಿನಿಯರಿಂಗ್ ಸಂಸ್ಥೆಗಳಿಂದ 31,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.

ಟೆಕ್‍ಜಿಎಂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 20 ಲಕ್ಷ ರೂಪಾಯಿಗಳ ಬಹುಮಾನದ ಮೊತ್ತದೊಂದಿಗೆ ಭಾರತದ ಅತಿದೊಡ್ಡ ಅನುಶೋಧನಾ ವೇದಿಕೆಯಾಗಿದ್ದು, ಅಗ್ರ ವಿಜೇತರು 10 ಲಕ್ಷ ರೂಪಾಯಿಗಳನ್ನು ಜಯಿಸಿದರು.

ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಎಲ್‍ಟಿಟಿಎಸ್ ತನ್ನ ಪಾತ್ರ ನಿರ್ವಹಿಸಲು ಹೆಮ್ಮೆಪಡುತ್ತದೆ” ಎಂದು ಹೇಳಿದರು.

Leave a Reply

Your email address will not be published. Required fields are marked *