ಪತಿ ಎಲ್ ನಾಗೇಂದ್ರರವರ ಪರ ಧರ್ಮಪತ್ನಿ ಶೀಲಾ ರವರಿಂದ ಮತಯಾಚನೆ

ನಂದಿನಿ ಮೈಸೂರು

ವಿಜಯನಗರದಲ್ಲಿ ಶಾಸಕರಾದ ಎಲ್ ನಾಗೇಂದ್ರರವರ ಧರ್ಮಪತ್ನಿ ಶೀಲಾ ನಾಗೇಂದ್ರ ಅವರು
ಬಿಜೆಪಿ ಮಹಿಳಾ ಮೋರ್ಚಾ ಜೊತೆಗೂಡಿ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು.

ನಂತರ ಶೀಲಾ ನಾಗೇಂದ್ರ ಮಾತನಾಡಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಖ್ಯವಾಹಿನಿಗೆ ಬರುತ್ತಿರುವುದು ಸಂತಸದ ವಿಚಾರ. ಅದೇ ರೀತಿಯಲ್ಲಿ ಮತದಾನದ ಪ್ರಕ್ರಿಯೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತಗಟ್ಟೆಗೆ ಬಂದು ಮತ ಚಲಾಯಿಸ ಮುಂದಾಗ ಬೇಕೆಂದು ಮನವಿ ಮಾಡಿದರು.

ಚಾಮರಾಜ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸವಲತ್ತನ್ನು ಮನೆ ಮನೆಗೆ ತಲುಪಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದ್ದು, ಈ ಬಾರಿಯ ಅಭಿವೃದ್ಧಿಯ ಪ್ರಗತಿಯನ್ನು ನೋಡಿ ಮತ್ತೊಮ್ಮೆ ಬಿಜೆಪಿಗೆ ಮತ ನೀಡುವ ಮೂಲಕ ಜನಸಾಮಾನ್ಯರು ಆಶೀರ್ವದಿಸಲಿದ್ದಾರೆ ಎಂದರು.

ಶಾಸಕರಾದ ಎಲ್. ನಾಗೇಂದ್ರ ಧರ್ಮ ಪತ್ನಿ ಶೀಲಾ ನಾಗೇಂದ್ರ, ಚೈತ್ರ ಚೌಡಪ್ಪ, ಬಿಜೆಪಿ ಮಹಿಳಾ ನಗರಾಧ್ಯಕ್ಷರಾದ
ಹೇಮಾನಂದೀಶ್, ಉಪಾಧ್ಯಕ್ಷರಾದ ಸರಸ್ವತಿ ಪ್ರಸಾದ್, ಪ್ರಮೋದಿನಿ ಸುರೇಶ್, ನಾಗಮಣಿ. ಜೆ ಹರ್ಷ, ಕಾವೇರಿ, ಪುಷ್ಪ ಬಾಬು, ರೇಖಾ, ಚಂದನ, ವೇದಾವತಿ, ರಚನಾ ಇನ್ನಿತರರು ಇದ್ದರು..

Leave a Reply

Your email address will not be published. Required fields are marked *