ಮೊದಲ ಪ್ರಾಶಸ್ತ್ಯ ಗೆಲುವು ಸಾಧಿಸಿದ ಕಾಂಗ್ರೇಸ್ ಅಭ್ಯರ್ಥಿ ತಿಮ್ಮಯ್ಯ

ಮೈಸೂರು:14 ಡಿಸೆಂಬರ್ 2021

ನಂದಿನಿ

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೊದಲ ಪ್ರಾಶಸ್ತ್ಯ ಗೆಲುವು ಸಾಧಿಸಿದ್ದಾರೆ.

ಡಾ.ತಿಮ್ಮಯ್ಯ ಮಾತನಾಡಿ ಈ ಚುನಾವಣೆ ನನಗೆ ಹೊಸದಾಗಿದೆ. ಇದು ನನ್ನ ಗೆಲುವಲ್ಲ ಪಕ್ಷದ ಗೆಲುವಾಗಿದೆ. ನಮ್ಮ ನಾಯಕರಾದ ಸಿದ್ದರಾಮಯ್ಯ ಅವರ ಶೇ.೯೦ ರಷ್ಟು ಪ್ರಯತ್ನ ಹಾಗೂ ನನಗೆ ಟಿಕೇಟ್ ನೀಡಿದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ರಾಷ್ಟೀಯ ಅಧ್ಯಕ್ಷರು ನನಗೆ ಕೊಟ್ಟ ಅವಕಾಶದಿಂದ ಈ ಚುನಾವಣೆ ಗೆದ್ದಿದ್ದೇನೆ‌. ನನ್ನ ಗೆಲುವಲ್ಲಿ ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡರಾದ ಅವರ ಸಹಕಾರವೂ ಇದೆ. ಅವರಿಗೆ ನಾನು ಅಭಾರಿಯಾಗಿದ್ದೇನೆ‌. ಅವರ ಬೆಂಬಲಿಗರಿಗೆ ನಮಗೆ ಮತ ನೀಡುವಂತೆ ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನನ್ನ ಗೆಲುವಿಗೆ ಅವರು ಕಾರಣಕರ್ತರಾಗಿದ್ದಾರೆ. ಜತೆಗೆ ಇಲ್ಲಿ ಎರಡು ಜಿಲ್ಲೆಯ ಜಿಲಾಧ್ಯಕ್ಷರು ಹಾಗೂ ನಗರಾಧ್ಯಕ್ಷರು ಹಾಲಿ, ಮಾಜಿ ಶಾಸಕರ ಪ್ರಯತ್ನದ ಫಲವಾಗಿ ಈ ಗೆಲುವು ಲಭಿಸಿದೆ ಎಲ್ಲರ ಸಂಘಟನೆಯ ಪ್ರಯತ್ನದಿಂದ ಗೆದ್ದಿದ್ದೇನೆ. ಮುಂದಿನ ದಿನಗಳಲ್ಲಿ ಹಲವು ಅಭಿವೃದ್ಧಿ ಕನಸುಗಳನ್ನು ನನಸಾಗಿಸುವ ಪ್ರಯತ್ನ ನಡೆಸುವೆ ಎಂದರು.

Leave a Reply

Your email address will not be published. Required fields are marked *