ಮೈಸೂರಿನಲ್ಲಿ 12 ಗಂಟೆ ನಂತರ ಆರಂಭವಾದ ಮತ ಎಣಿಕೆ ಪ್ರಕ್ರಿಯೆ

ಮೈಸೂರು:14 ಡಿಸೆಂಬರ್ 2021

ನಂದಿನಿ 

ಡಿ.10 ರಂದು ನಡೆದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು ಮೈಸೂರಿನಲ್ಲಿ  ಮತಗಳ ಎಣಿಕೆ ಪ್ರಕ್ರಿಯೆ ನಿಧಾನವಾಗಿ ಆರಂಭವಾಗಿದೆ.
ನಗರದ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಮೈಸೂರು ಚಾಮರಾಜನಗರ ಮತಗಳ‌ ಎಣಿಕೆ ನಡೆಯುತ್ತದೆ.


ಒಟ್ಟು 14 ಟೇಬಲ್‌ ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, 6787 ಮತಗಳ ಪೈಕಿ 6769‌ ಮತಗಳು ಚಲಾವಣೆಗೊಂಡಿವೆ. 7 ಅಭ್ಯರ್ಥಿಗಳು
ಕಣದಲ್ಲಿದ್ದಾರೆ.ಜಿಲ್ಲಾಧಿಕಾರಿ ಹಾಗೂ ಚುನುವಣಾಧಿಕಾರಿಯೂ ಆಗಿರುವ ಡಾ.ಬಗಾದಿ ಗೌತಮ್ ಬೆಳಿಗ್ಗೆ ಚುನಾವಣಾ ಮತದಾನದ ಸ್ಟ್ರಾಂಗ್ ರೂಮ್ ಅನ್ನು ಅಭ್ಯರ್ಥಿಗಳ ಸಮಕ್ಷಮದಲ್ಲಿ ತೆರೆದು ಮತ ಎಣಿಕಾ ಪ್ರಕ್ರಿಯೆ ಆರಂಭಿಸಿದ್ದಾರೆ.

ಮತ ಎಣಿಕೆಯ ಕೇಂದ್ರದ ಸುತ್ತು ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದು, 144 ನೇ ಸೆಕ್ಷನ್ ಜಾರಿಗೊಳಿಸಲಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ಮತ ಎಣಿಕಾ ಕೇಂದ್ರದ ಸುತ್ತ ಮದ್ಯ ಮಾರಾಟ ಸ್ಥಗಿತ ಗೊಳಿಸಿ,
ಮತ ಎಣಿಕೆ ಕೇಂದ್ರದಿಂದ 3 ಕಿ ಮಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು.
ರಾತ್ರಿ 12ರ ವರೆಗೆ ಡ್ರೈ ಡೇ ಎಂದು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *