ಬೈಲಕುಪ್ಪೆ :15 ಆಗಸ್ಟ್ 2022
75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಪುಟಾಣಿ ಬೌದ್ಧ ಭಿಕ್ಷುಗಳು ಭಾರತದ ಧ್ವಜ ಹಿಡಿದು ಸಂಭ್ರಮಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿ ವಿವಿಧಡೆ ಸ್ವಾತಂತ್ರ್ಯ ಆಚರಣೆ ಸಂಭ್ರಮದಿಂದ ಕಳೆಗಟ್ಟಿತು,
ಪ್ರವಾಸಿಗರ ನೆಚ್ಚಿನ ತಾಣ ಗೋಲ್ಡನ್ ಟೆಂಪಲ್ ಬೌದ್ಧ ಬಿಕ್ಷಗಳಿಂದ ನಡೆದ ಸ್ವಾತಂತ್ರ್ಯದಿನಾಚರಣೆ ಆಚರಿಸಿದರು.
ಬೈಲಕುಪ್ಪೆಯ ಆರಕ್ಷಕ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್, ಬಸವರಾಜು, ಆಟೋ ಚಾಲಕರ ಸ್ಟ್ಯಾಂಡ್ ನಲ್ಲಿ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್, ಟಿಬೆಟಿನ್ ಆಡಳಿತ ಸಂಸ್ಥೆಯ ಇಂಡೋ ಟಿಬೇಟಿಯನ್ ಅಧ್ಯಕ್ಷ ಜವರೇಗೌಡ ಹಾಗೂ ಸದಸ್ಯ ನಟರಾಜು ಧ್ವಜಾರೋಹಣ ಮಾಡಿದರು.
ಧ್ವಜಾರೋಹಣ ಕಾರ್ಯಕ್ರಮವನ್ನು
ಹೆಚ್ಚು ಮಂದಿ ಪ್ರವಾಸಿಗರು ವೀಕ್ಷಣೆ ಮಾಡಿದರು .
ಜೊತೆಗೆ ನೂರಾರು ಮಂದಿ ಪುಟ್ಟ ಬೌದ್ಧ ಭಿಕ್ಷುಗಳು ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ನಮ್ಮ ದೇಶ ನಮ್ಮ ಭಾರತ ಎಂದು ಘೋಷಣೆಯನ್ನು ಸಹ ಕೂಗಿದರು.