ಸರಗೂರಿನಲ್ಲಿ 75ನೇ ಸ್ವಾತಂತ್ರ್ಯ ಸಂಭ್ರಮ

ಸರಗೂರು:15 ಆಗಸ್ಟ್ 2022

ನಂದಿನಿ ಮೈಸೂರು

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನೂತನ ಸರಗೂರಿನ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವತಿಯಿಂದ ತಹಸೀಲ್ದಾರ್ ಚಲುವರಾಜು ರವರ ನೇತೃತ್ವದಲ್ಲಿ ವಿಭೃಂಭಣೆಯಿಂದ ಸ್ವಾಂತತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚಲುವರಾಜು ರವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸ್ವಾಂತತ್ರ್ಯವೆಂಬುದು ನೂರಾರು ವರ್ಷ ಆಳ್ವಿಕೆ ಮಾಡಿದ ಬ್ರಿಟಿಷರ ವಿರುದ್ಧ ಹೋರಾಡಿ ಅವರ ದಾಸ್ಯದಿಂದ ಪಡೆದ ಬಿಡುಗಡೆ. ಇಂದು ಒಂದೆರಡು ದಿನದಲ್ಲಿ ದಕ್ಕಿದ್ದಲ್ಲ. ಇದಕ್ಕಾಗಿ ಸಾವಿರಾರು ನಾಯಕರ ಹೋರಾಟ ಬಲಿದಾನ ಪ್ರತಿಫಲವಾಗಿ ಪಡೆದದ್ದು, ಅಂತಹ ಸ್ವಾತಂತ್ರ್ಯ ನಮಗೆ ಅಮುಲ್ಯವಾದದ್ದು. ಅವರ ತ್ಯಾಗವನು ನಾವು ಗೌರವಿಸೋಣ ಎಂದರು.

ನಂತರ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಸರಗೂರು ತಾಲ್ಲೂಕ್ಕಾಗಿ ವಿಂಗಡನೆಯಾಗಿದೆ. ಆದ್ದರಿಂದ ಈ ಬಾರಿ ಸರಗೂರು ತಾಲ್ಲೂಕು ಮಟ್ಟದಲ್ಲಿಯೂ ಸಹ ಒಂದು ಅದ್ದೂರಿ ಕಾರ್ಯಕ್ರಮ ಮಾಡಬೇಕು ಎಂದು ಇಲ್ಲಿಯೂ ಸಹ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ರಾಷ್ಟ್ರೀಯ ಹಬ್ಬಗಳನ್ನು ಇದೇ ರೀತಿ ವಿಜೃಂಭಣೆಯಿಂದ ಆಚರಿಸಲಾಗಿವುದು ಎಂದರು.

ಬಳಿಕ ಮಾತನಾಡಿದ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ವೈ.ಡಿ.ರಾಜಣ್ಣ, ಸ್ವತಂತ್ರ ಪೂರ್ವದಲ್ಲಿ ಭಾರದಲ್ಲಿ ಅಪೌಷ್ಠಿಕತೆ, ಬಡತನ, ಮೌಢ್ಯತೆ, ಅನಿಷ್ಟ ಪದ್ಧತಿಗಳು ತುಂಬಿದ್ದವು. ಆದರೆ ಈಗ ದೇಶ ಅವುಗಳಿಂದ ಮುಕ್ತಿಗೊಳ್ಳುತ್ತಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ. ಅಭಿವೃದ್ಧಿ ಎಂದರೆ ಇಂದು ಇಡೀ ವಿಶ್ವವೇ ಭಾರತದತ್ತ ನೋಡುವಂತಾಗಿದೆ ಎಂದರು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ತಾಲ್ಲೂಕು ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಫಥ ಸಂಚಲನ ಮಾಡಿದರು.

ನಂತರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಾಧಕರು ಹಾಗೂ ವೀರಯೋಧರಿಗೆ ಸನ್ಮಾನಿಸಿ ಗೌರವಿಸಲಾಯಿತು.

ನಂತರ ಸರಗೂರಿನ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ಈ ವೇಳೆ 10ಕ್ಕೂ ಹೆಚ್ಚು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೊತೆಗೆ ಉತ್ತಮ ಪ್ರದರ್ಶನ ನೀಡಿದ ಶಾಲಾ-ಕಾಲೇಜುಗಳಿಗೆ ಶಾಸಕರ ವತಿಯಿಂದ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ತಕ್ಷ ವಿನಾಯಕ ಪ್ರಸಾದ್, ಸದಸ್ಯರಾದ ಹೇಮವತಿ ರಮೇಶ್, ಚೈತ್ರ, ಸಣ್ಣತಾಯಮ್ಮ, ಎಸ್.ಎಸ್.ರಾಜಣ್ಣ, ನೂರಳಸ್ವಾಮಿ, ಶಿವಕುಮಾರ್, ಉಮಾರಾಮು, ಶ್ರೀನಿವಾಸ್, ಆರ್.ದಿವ್ಯ, ಚಲುವಕೃಷ್ಣ, ರಂಗಸ್ವಾಮಿ, ಪ್ರತಾಪ್, ನಾರಾಯಣ್, ಇಒ ಸುಷ್ಮ, ಕಾವೇರಿ ನೀರಾವರಿ ನಿಗಮದ ಎಇಇ ಉಷಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸತೀಶ್, ವೃತ್ತ ನಿರೀಕ್ಷಕ ಆನಂದ್, ಪಿಎಸ್‍ಐ ಶ್ರವಣ್ ದಾಸ ರೆಡ್ಡಿ ಶ್ರೀ ವಾಲ್ಮೀಕಿ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಚಿಕ್ಕವೀರ ನಾಯಕ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *