“ಥೇಮಿಸ್” ಚಿತ್ರದ “ಗಂಡ್ಮಕ್ಕಳ ತವರಲ್ಲಿ ಎಣ್ಣೇಯ ನಶೆಯಲ್ಲಿ ಯಾರನ್ನ ಬೇಡಲಿ ಇನ್ನೊಂದು ಬಾಟಲಿ” ಸಾಂಗ್ ಬಿಡುಗಡೆ

ಮೈಸೂರು:2 ಸೆಪ್ಟೆಂಬರ್ 2022

ನಂದಿನಿ ಮೈಸೂರು

LCA Cinematics ನಿರ್ಮಾಣದಲ್ಲಿ ಮೂಡಿ ಬಂದಿರುವಥೇಮಿಸ್” ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ.

ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗ ಶಾಲೆಯ ಸಭಾಂಗಣದಲ್ಲಿ
” ಗಂಡ್ಮಕ್ಕಳ ತವರಲ್ಲಿ ಎಣ್ಣೇಯ ನಶೆಯಲ್ಲಿ ಯಾರನ್ನ ಬೇಡಲಿ ಇನ್ನೊಂದು ಬಾಟಲಿ” ಎಂಬ ಹಾಡು ರಿಲೀಸ್ ಆಗಿದೆ.ಗಾಯಕ ಹೇಮಂತ್
ಸೋಗಸಾದ ಗೀತೆ ಹಾಡಿದ್ದಾರೆ.
ಚೇತನ್ ಹನ್ವಿತ್ ಕಥೆ,ಚಿತ್ರಕಥೆ,ನಿರ್ದೇಶನ ಮಾಡಿದ್ದಾರೆ.ವಿಲಾಸ್ ಆರ್ ಹೊಸೂರ್ ಮತ್ತು ಭವನ್ ಮಾಚಯ್ಯ ಸಹ ನಿರ್ದೇಶನ.ಆರ್ಟ್ ಡೈರೆಕ್ಟರ್ ಮಧುಸೂಧನ್,
ವಾಧ್ಯ ಸಂಯೋಜನೆ ವಿಲ್ಸ್ಟನ್ ಗಾನ್ ಸಲ್ವಾಸ್,ರಾಗ ಸಂಯೋಜನೆ :ಲೋಕೇಶ್ ಗಾನವ್,ವಾದ್ಯ ಸಂಯೋಜನೆ :ವಿಲ್ಸ್ಟನ್ ಗಾನ್ ಸಲ್ವಾಸ್,ನೃತ್ಯ ಸಂಯೋಜನೆಚಿರಾಯು ಮಂಜೇಶ್,ಸಂಕಲನ :ಚೇತನ್ ಕವಿರಾಜ್ ರವರದ್ದಾಗಿದ್ದು ಸಂತೋಷ್ ದಾಯಾಳನ್ ಛಾಯಾಗ್ರಹಣ ಮಾಡಿದ್ದಾರೆ.ಸಿನಿಮಾ ನಿರ್ದೇಶಕ ಚೇತನ್ ಹನ್ವಿತ್ ಇಂಜಿನಿಯರ್ ಆಗಿದ್ದು,ಇದೀಗ ಚಿತ್ರರಂಗದ ಕಡೆ ಹೆಜ್ಜೆ ಹಾಕಿದ್ದಾರೆ.

ಚಿತ್ರದ ಎಲ್ಲಾ ಕಲಾವಿದರು ಚಿತ್ರಕ್ಕೆ ಹೊಸಬರೇ ಇದ್ದರೂ ಅವರೆಲ್ಲಾರೂ ಕೂಡ ರಂಗಭೂಮಿಯವರು.ಥೇಮಿಸ್ ಚಿತ್ರ ಆರ್ ಆರ್ ಸಿನಿಮಾವಾಗಿದೆ.ನನ್ನ ಮೊದಲ ಪ್ರಯತ್ನಕ್ಕೆ ಸಿನಿಪ್ರೀಯರು ಆಶೀರ್ವಾದಿಸಿ ಎಂದು ಚೇತನ್ ಹನ್ವಿತ್ ಮನವಿ ಮಾಡಿದರು.

Leave a Reply

Your email address will not be published. Required fields are marked *