ಮೈಸೂರು:17 ಜೂನ್ 2022
ನಂದಿನಿ ಮೈಸೂರು
ಅಧಿಕೃತವಾಗಿ ಪರವಾನಗಿ ಪಡೆಯದೇ ಅನಧಿಕೃತ ಅಂಗಡಿ ನಡೆಸುತ್ತಿದ್ದಲ್ಲದೇ ಸಾರ್ವಜನಿಕರ ಜಾಗ ಆವರಿಸಿಕೊಂಡಿದ್ದ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಎಚ್ ಡಿ ಕೋಟೆ ಮಾನಂದವಾಡಿ ರಸ್ತೆಯಲ್ಲಿ ಪರಸಯ್ಯನ ಹುಂಡಿಯಲ್ಲಿ ಅಂಗಡಿ ಮಾಲೀಕರು ಅನಧಿಕೃತವಾಗಿ ಅಂಗಡಿ ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದರು.ಶ್ರೀರಾಂಪುರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಧಿಕೃತವಾಗಿ ಪರವಾನಗಿ ತೆಗೆದುಕೊಳ್ಳುವಂತೆ
ಹಲವು ಬಾರಿ ನೋಟಿಸ್ ನೀಡಿದ್ರೂ ಅಂಗಡಿ ಮಾಲೀಕರು ಕ್ಯಾರೇ ಎಂದಿರಲಿಲ್ಲ.ಅದಲ್ಲದೇ
ಜೂನ್ 15 ರಂದು ಪ್ರತಾಪ್ ಸಿಂಹ ರಸ್ತೆ ಬದಿಯಲ್ಲಿ ಇರುವ ಫ್ಲೇಕ್ಸ್ ,ಅನಧಿಕೃತ ಪೆಟ್ಟಿ ಅಂಗಡಿ,ಜೆನ್ ಶೀಟ್ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರೂ.
ಇಂದು ಜೆಸಿಬಿ ತರಿಸಿ ಪೋಲಿಸ್ ಭದ್ರತೆಯೊಂದಿಗೆ ಶ್ರೀರಾಂಪುರ ಪಟ್ಟಣ್ಣ ಪಂಚಾಯತಿ ಮುಖ್ಯ
ಅಧಿಕಾರಿ ಶ್ರೀಧರ್ ಹಾಗೂ ಆರೋಗ್ಯ ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಶ್ರೀರಾಂಪುರ ಮುಖ್ಯರಸ್ತೆಯಲ್ಲಿರುವ ಅನಧಿಕೃತ ಅಂಗಡಿ ತೆರವಿಗೆ ಮುಂದಾಗಿದ್ದೇವೆ.ಈ ಹಿಂದೆ ಎಲ್ಲರಿಗೂ ಲೈಸನ್ಸ್ ಪಡೆಯುವಂತೆ ನೋಟಿಸ್ ನೀಡಿದ್ದೇವು.ನಂತರ ಕೋವಿಡ್ ಸಮಯದಲ್ಲಿ ಸ್ವಲ್ಪದಿನ ಕಾಲಾವಕಾಶ ನೀಡುವಂತೆ ಕೇಳಿದ್ರೂ ಅದಕ್ಕೂ ನಾವು ಸಹಕರಿಸಿದ್ದೇವು.ಆದರೂ ಅಂಗಡಿ ಮಾಲೀಕರು ಲೈಸೆನ್ಸ್ ಪಡೆದಿಲ್ಲ ಆಗಾಗಿ ತೆರವು ಬಿಲ್ ಕಲೆಕ್ಟರ್ ಕುಮಾರಸ್ವಾಮಿ ಮನವಿ ಮಾಡಿದರು.
ಮಾಂಸದಂಗಡಿ,ಕೈಗಾಡಿ ತೆರವುಗೊಳಿಸಿದ್ರೂ.ನಂತರ
ವೆಲ್ಡಿಂಗ್ ಶಾಪ್ ಮುಂಭಾಗ ಇಟ್ಟಿದ್ದ ವಸ್ತುಗಳನ್ನು ತೆಗೆಯುವಂತೆ ತಿಳಿಸಲಾಯಿತು.ನಂತರ ಅಂಗಡಿ ಲೈಸೆನ್ಸ್ ಪರಿಶೀಲಿಸಿದಾಗ 2011 ರಲ್ಲಿ ಪರವಾನಗಿ ತೆಗೆದುಕೊಂಡಿದ್ದನ್ನ ಬಿಟ್ಟರೇ 2022 ಇದುವರೆಗೂ ಕಳೆದ 12 ವರ್ಷಗಳಿಂದ ಲೈಸೆನ್ಸ್ ತೆಗೆದುಕೊಂಡಿಲ್ಲದಿರೋದು ಕಂಡು ಬಂತು.
ಅನಧಿಕೃತ ತೆರವು ಕಾರ್ಯಾಚರಣೆಯಲ್ಲಿ
ಎಸ್ ಡಿ ಎ ಪುಷ್ಪ,ಆರೋಗ್ಯ ಇಲಾಖೆ ಪರಮೇಶ್ವರ್,ಪೌರ ಕಾರ್ಮಿಕ ಮುತ್ತುಸ್ವಾಮಿ,ಪರಮೇಶ್ವರ್ ಸೇರಿದಂತೆ ಸಿಬ್ಬಂದಿಗಳು ಭಾಗಿಯಾಗಿದ್ದರು.