ಅಂಧ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ವಿತರಣೆ

ಮೈಸೂರು:18 ಜೂನ್ 2022

ನಂದಿನಿ ಮೈಸೂರು

ಮೈಸೂರು ನಗರದ ದಟ್ಟಗಳ್ಳಿಯ 3ನೇ ಹಂತದಲ್ಲಿರುವ ನಂ ೨, ೧೨ ನೇ ಕ್ರಾಸ್ ೮ನೇ ಮುಖ್ಯ ರಸ್ತೆಯಲ್ಲಿರುವ ದಿವ್ಯ ಜ್ಯೋತಿ ಚಾರಿಟಬಲ್ ಟ್ರಸ್ಟ್ನಲ್ಲಿ ದಿನಾಂಕ 1೭-0೬-202೨ ರಂದು ದಿವ್ಯ ಜ್ಯೋತಿ ಚಾರಿಟಬಲ್ ಟ್ರಸ್ಟ್ ಸಂಸ್ಥೆ ಹಾಗೂ ಎನ್ ಐ ವಿ ಹೆಚ್ ಸಂಸ್ಥೆಯ ಸಹಭಾಗಿತ್ವದಲ್ಲಿ ಸ್ಮಾರ್ಟ್ ಫೋನ್ ವಿತರಣಾ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಂಡಿದ್ದೆವು.

ಸಮಾರಂಬದ ಉದ್ಘಾಟನೆಯನ್ನು ಶ್ರೀ ಎಸ್.ಎ. ಮಂಜುನಾಥ್ ಸರ್ ( Senior Branch Manager, City Branch Office, L I C ) ರವರು ಅಮೃತ ಹಸ್ತ ದಿಂದ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಪ್ರಾರ್ಥನೆಯನ್ನು ಮಾಧವಿ ಹಾಗೂ ತಂಡದವರು ನೆರವೇರಿಸಿಕೊಟ್ಟಾರು . ಶ್ರೀ ಜಯಕುಮಾರ್ ಎನ್.ಐ.ವಿ.ಎಚ್. ರವರು ದಿವ್ಯ ಜ್ಯೋತಿ ಚಾರಿಟಬಲ್ ಟ್ರಸ್ಟ್ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಸಮಾರಂಭವನ್ನು ಉದ್ಘಾಟಿಸಿದಂತಹ ಶ್ರೀ ಎಸ್.ಎ. ಮಂಜುನಾಥ್ ಸರ್ ರವರು ಇನ್ನು ಮುಂದೆ ಸಹ ಸಂಸ್ಥೆಯ ಎಲ್ಲಾ ವಿಧ್ಯಾರ್ಥಿಗಳಿಗೂ ತಮ್ಮ ಕಡೆಯಿಂದ ಆಗುವುಷ್ಟು ಸಹಾಯವನ್ನು ಮಾಡುವುದಾಗಿ ಹಾಗೂ ಕೊಟ್ಟಿರುವ ಸ್ಮಾರ್ಟ್ ಪೋನ್ ಗಳನ್ನು ವಿಧ್ಯಾರ್ಥಿಗಳು ಯಾವ ರೀತಿಯಾಗಿ ಉಪಯೋಗಿಸಿಕೊಳ್ಳಬೆಕೆಂದು ತಿಳಿಸಿಕೊಟ್ಟರು.ಇನ್ನೋರ್ವ ಅತಿಥಿಗಳಾದಂತಹ ಹೆಚ್.ಪಿ. ಗಂಗಾಧರ ಸ್ವಾಮಿ ನಿವೃತ್ತ ಕನ್ನಡ ಪ್ರಾಧ್ಯಾಪಕರು ಜೆ.ಎಸ್.ಎಸ್ ಕಾಲೇಜು ಮೈಸೂರು ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ನಂತರ ಮಕ್ಕಳಿಗೆ ಸ್ಮಾರ್ಟ್ ಪೋನ್ ಗಳನ್ನು ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್.ಎ.ಶಿವಪ್ರಕಾಶ್ ( founder cum managing trustee of Divya Jyothi ChariTabel Trust ) ರವರು ವಹಿಸಿದ್ದರು.ಅವರು ತಮ್ಮ ಅಧ್ಯಕ್ಷಿಯ ನುಡಿಗಳಲ್ಲಿ ವಿಧಾರ್ಥಿಗಳಿಗೆ ತಮಗೆ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು.. ಕಾರ್ಯಕ್ರಮದಲ್ಲಿ ರಘುರಾಮ್ ಸರ್ , ದಿನೇಶ್ ಕೈಗಾರಿಕೊದ್ಯಮಿ ,ಹರಿಶ್ ( N R foundation ) ಹಾಗೂ ಧನಂಜಯ ( trustee ) ಮತ್ತಿತ್ತರರು ಭಾಗವಹಿಸಿದರು.

Leave a Reply

Your email address will not be published. Required fields are marked *