ಕೈಲಾಸಂ ವ್ಯಕ್ತಿಯಲ್ಲ ಶಕ್ತಿ-ರಂಗಕರ್ಮಿ ಧನಂಜಯ

ನಂದಿನಿ ಮೈಸೂರು

ಕೈಲಾಸಂ ವ್ಯಕ್ತಿಯಲ್ಲ ಶಕ್ತಿ-ರಂಗಕರ್ಮಿ ಧನಂಜಯ

ಮೈಸೂರು,29:ಕನ್ನಡದ ಕಂಪನ್ನು ಇಡೀ ನಾಡಿನಾದ್ಯಂತ ಪಸರಿಸಿ ಕೈಲಾಸಂ ವ್ಯಕ್ತಿಯಲ್ಲ ಶಕ್ತಿ ಎಂಬುದನ್ನು ಸಾಬೀತುಪಡಿಸಿದವರು ಎಂದು ಉಪನ್ಯಾಸಕರು ಹಾಗೂ ರಂಗಕರ್ಮಿಗಳಾದ ಧನಂಜಯ ಅವರು ಅಭಿಪ್ರಾಯಪಟ್ಟರು
ಮೈಸೂರು ಜಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಮಹರ್ಷಿ ಸಹಯೋಗದಲ್ಲಿ ಕನ್ನಡ ಪ್ರಹಸನ ಪಿತಾಮಹ ಟಿ.ಪಿ.ಕೈಲಾಸಂ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.

‌ನಗೆಯ ಚಾಟಿಯ ಮೂಲಕ ಸಮಾಜಕ್ಕೆ ಎಚ್ಚರಿಕೆಯ ಗಂಟೆ ಬಾರಿಸಿದ ಕ್ರಾಂತಿಕಾರರು. ಯಾರಿಗೂ ಹೆದರದೆ ತನ್ನದೇ ಆದ ಧೋರಣೆಯನ್ನು ಪ್ರತಿಪಾದಿಸಿದ ಗಟ್ಟಿ ನಿಲುವನ್ನು ಕೊನೆಯವರೆವಿಗೂ ಪ್ರತಿಪಾದಿಸಿದವರು ಎಂದರು
ಕಾರ್ಯಕ್ರಮವನ್ನು ದೀಪ ಬೆಳಗಿ ಕೈಲಾಸಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸುವುದರ ಮೂಲಕ ಸಂಸ್ಥೆಯ ಆಡಳಿತಾಧಿಕಾರಿ ತೇಜಸ್ ಬಿ.ಶಂಕರ್ ಅವರು ಉದ್ಘಾಟಿಸಿದರು.

ಕಸಾಪ ಕಾರ್ಯದರ್ಶಿ ಮ.ನ. ಲತಾಮೋಹನ್ ಕಾರ್ಯಕ್ರಮದ ರೂಪು ರೆಷೆಗಳನ್ನು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಙ
ಕೈಲಾಎಸಂ ಅವರ ಜನಪ್ರಿಯ ಗೀತೆ “ಕೋಳೀಕೆ ರಂಗ” ಋಋ ಸಂಸ್ಥೆಯ ಪ್ರಹ್ಲಾದರಾವ್ ಅವರು ಹಾಡಿ ರಂಜಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪದ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಅವರು ಕನ್ನಡ ಕಟ್ಟುವ ಕೆಲಸವನ್ನು ಕೈಲಾಸಂ ಅವರು ಸಮರ್ಥವಾಗಿ ನಿರ್ವಹಿಸಿದವರು. ಕೈಲಾಸಂ ಎಂದಾಕ್ಷಣ ಮೈಮನಗಳಲ್ಲಿ ಹೊಸ ಸಂಚಲನ ಒಡ ಮೂಡುತ್ತದೆ. ಅವರೆಂದೂ ಪ್ರಾತ:ಸ್ಮರಣೀಯರು ಎಂದು ನುಡಿದರು.

ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಶುಪಾಲರಾದ ಎಂ‌ ಮಹದೇವಸ್ವಾಮಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಎ. ಕುಮಾರ್ ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ರುಚಿತ ಪ್ರಾರ್ಥಿಸಿ, ಭುವನ ಸ್ವಾಗತಿಸಿ,ಪವನ್ ನಿರೂಪಿಸಿ, ಅನನ್ಯ ವಂದನಾರ್ಪಣೆ ಮಾಡಿದರು. ಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.

Leave a Reply

Your email address will not be published. Required fields are marked *