ಸ್ನೇಹಿತನ ಮನೆಗೆ ಕನ್ನ,ಕಳ್ಳನ ಬಂಧಿಸುವಲ್ಲಿ ತಿ.ನರಸೀಪುರ ಪೋಲಿಸರು ಯಶಸ್ವಿ:ಎಎಸ್ಪಿ ಡಾ.ಬಿ.ಎನ್.ನಂದಿನಿ

ತಿ.ನರಸೀಪುರ:29 ಜುಲೈ 2022

ನಂದಿನಿ ಮೈಸೂರು

ಸ್ನೇಹಿತನ ಮನೆಯಲ್ಲಿ ಕಳ್ಳತನ ಮಾಡಿದ್ದ ಕಳ್ಳನನ್ನು ಬಂಧಿಸಿ 5 ಲಕ್ಷ ಹಣ ವಶಪಡೆಯುವಲ್ಲಿ ಟಿ.ನರಸೀಪುರ ಪೋಲಿಸರು ಯಶಸ್ವಿಯಾಗಿದ್ದಾರೆ ಎಂದು ಎಎಸ್ಪಿ ಡಾ.ಬಿ.ಎನ್. ನಂದಿನಿ ತಿಳಿಸಿದರು.

ಪಟ್ಟಣದ ಪೋಲಿಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸೆಂಟ್ ಮೇರೀಸ್ ಶಾಲೆ ರಸ್ತೆಯ ಚಡ್ಡಿ ನಿವಾಸದ ಬಳಿ ಮನೆಯೊಂದರಲ್ಲಿ 5 ಲಕ್ಷ ಕಳ್ಳತನ ಮಾಡಿರುವ ಪ್ರಕರಣ ನರಸೀಪುರ ಠಾಣೆಯಲ್ಲಿ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್, ಚೇತನ್ ರವರು ಕಳ್ಳರನ್ನು ಸೆದೆ ಬಡೆಯಲು ನಂಜನಗೂಡು ಡಿ.ವೈ.ಎಸ್.ಪಿ. ಗೋವಿಂದ ರಾಜ್,ಪಿಐ ಕೃಷ್ಣಪ್ಪ ರವರ ಮಾರ್ಗದರ್ಶನದಲ್ಲಿ
ತಿ.ನರಸಿಪುರ ಪೋಲಿಸ್ ಠಾಣೆಯ ಪಿ.ಎಸ್.ಐ. ಮಹೇಶ್ ಕುಮಾರ್ ಬಿಕೆ, ಸಿಬ್ಬಂದಿಗಳಾದ ಭಾಸ್ಕರ್. ಗೋವಿಂದ ರಾಜು,ಮಲಗೌಡ ಕೆಂಪಿ,ಪರಶುರಾಮ್ ನಾಟೀಕರ್, ರಂಗಸ್ವಾಮಿ, ರವರು ಒಂದು ತಂಡವನ್ನು ರಚನೆ ಮಾಡಿತ್ತು ಆ ತಂಡ ಕಳ್ಳತನದ ಪ್ರಕರಣ ಬೇದಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಕಳ್ಳನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಹಾಗೂ ತಿ. ನರಸೀಪುರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಜಾಸ್ತಿ ಮಾಡಲಾಗಿದೆ ಅಲ್ಲದೆ ಪ್ರಮುಖ ಅಂಗಡಿಗಳು ಹಾಗೂ ವ್ಯಾಪಾರ ವಹಿವಾಟು ಹೆಚ್ಚಾಗಿ ನೆಡಯುವ ಸ್ಥಳಗಳಲ್ಲಿ ಸಿ.ಸಿ ಟಿವಿ ಅಳವಡಿಸುವ ಕೆಲಸವನ್ನು ಮಾಡಲಾಗುತ್ತದೆ ಜನರು ಯಾವುದೇ ರೀತಿಯ ಭಯಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಪೋಲೀಸರು ತಮ್ಮ ಜೊತೆ ಇರುತ್ತಾರೆ ಹಾಗೆ ಸಾರ್ವಜನಿಕರು ಸಹ ಪೋಲೀಸ್ ಸಿಬ್ಬಂದಿಗೆ ಸಹಕಾರ ನೀಡಬೇಕೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿವೈಎಸ್ ಪಿ ಗೋವಿಂದರಾಜು,ಇನ್ಸ್ಪೆಕ್ಟರ್ ಕೃಷ್ಣಪ್ಪ, ಮಹೇಶ್ ಕುಮಾರ್, ಸಿಬ್ಬಂದಿಗಳಾದ ಭಾಸ್ಕರ್,ಗೋವಿಂದರಾಜು, ಪರಶು ರಾಮ್ ,ರಂಗಸ್ವಾಮಿ,ಮಲಗೌಡ ಕೆಂಪಿ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *