ಗಾಂಧಿ ಜಯಂತಿ ಪ್ರಯುಕ್ತ ಬೆಟ್ಟದ ಸುತ್ತಾ ಸ್ವಚ್ಛತಾ ಕಾರ್ಯಕ್ರಮ

 

ಮೈಸೂರು:2 ಅಕ್ಟೋಬರ್ 2021

ನ@ದಿನಿ

ಗಾಂಧಿ ಜಯಂತಿಯ ಪ್ರಯುಕ್ತ
ಸ್ವಚ್ಛ ಮೈಸೂರು ಎಂಬ ಶಿರ್ಷಿಕೆಯಡಿಯಲ್ಲಿ
ಫೌಂಡೇಶನ್ (ಡಿಸಿಎಫ್) ,ಸ್ವಯಂಸೇವಕರು
ಚಾಮುಂಡಿ ಬೆಟ್ಟದ ಪ್ರವೇಶ ಕಮಾನಿಂದ ಚಾಮುಂಡಿ ಬೆಟ್ಟದ ಸುತ್ತಾ ಮುತ್ತಾ ಸ್ವಚ್ಚತಾ ಕಾರ್ಯ ಕೈಗೊಂಡಿದ್ದರು.

ಚಾಮುಂಡಿ ಬೆಟ್ಟದ ಹೆಬ್ಬಾಗಿಲಿನಲ್ಲಿ ಸ್ವಚ್ಚ ಮೈಸೂರು ಕಾರ್ಯಕ್ರಮಕ್ಕೆ ಡಾ. ಚಂದ್ರಶೇಖರ್ ಚಾಲನೆ ನೀಡುವುದರ ಜೊತೆಗೆ ಸ್ವತಃ ರಸ್ತೆ ಹಾಗೂ ಅಕ್ಕಪಕ್ಕದಲ್ಲಿದ್ದ ಕಸವನ್ನ ತೆಗೆಯಲು ಮುಂದಾದರು. ನಂತರ ಮಾತನಾಡಿದ ಅವರು ಗಾಂಧಿ ಜಯಂತಿ ಪ್ರಯುಕ್ತ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದೇವೆ.ನಾವು ಸ್ವಚ್ಛತೆಗೊಳಿಸುವುದರಲ್ಲದೇ ಸಾರ್ವಜನಿಕರಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ.ನಮ್ಮ ಸ್ವಚ್ಚತಾ ಕಾರ್ಯ ಈ ಗಾಂಧಿ ಜಯಂತಿಗೆ ಮಾತ್ರವಲ್ಲದೇ,ಮುಂದಿನ ದಿನಗಳಲ್ಲೂ ಇದೇ ರೀತಿ ಸ್ವಚ್ಛ ಕಾರ್ಯ ಕೈಗೊಳ್ಳಲಿದ್ದೇವೆ.ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು,ಸ್ವಯಂ ಸೇವಕರು ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕಾವೇರಿ ಆಸ್ಪತ್ರೆಯ ವೈದ್ಯರಾದ ಡಾ.ಸರಳ‌ ಚಂದ್ರಶೇಖರ್,ಸಂದೀಪ್ ಮುತಾಂದ ಕಾವೇರಿ ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *