ಸ್ವಚ್ಚತೆಗೆ ಆದ್ಯತೆ ನೀಡಿದ ಪ.ಪಂಚಾಯಿತಿ, ಸ್ವಚ್ಚತೆಗೆ ಕೈಜೋಡಿಸದ ಶ್ರೀರಾಂಪುರ ಜನ,ಕಸ ಬಿಸಾಡುವವರಿಗೆ ದಂಡ

54 Views

ಮೈಸೂರು:23 ಏಪ್ರಿಲ್ 2022

ನಂದಿನಿ ಮೈಸೂರು

ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿದೆ.ಆದರೇ ಜನ ಮಾತ್ರ ಸ್ವಚ್ಚತೆಗೆ ಕೈಗೂಡಿಸುತ್ತಿಲ್ಲ.

ಮೈಸೂರು ಜಿಲ್ಲೆ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿ ಸ್ವಚ್ಚತೆ ಮಾಡಿದ್ರೇ ಇತ್ತ ಕೆಲ ಜನ
ರಸ್ತೆ ಬದಿಯಲ್ಲಿ ಕಸ ಹಾಕಿ ಹೋಗುತ್ತಿದ್ದಾರೆ.

ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಈ ವ್ಯಾಪ್ತಿಯಲ್ಲಿ ವಾಸವಾಗಿದ್ದಾರೆ.
ಪ್ರತಿದಿನ ಮನೆ ಬಳಿ ಕಸದ ವಾಹನ ಹೋಗುತ್ತದೆ. ಪೌರಕಾರ್ಮಿಕರು ಕಸ ಸಂಗ್ರಹಿಸುತ್ತಾರೆ.ಆದರೂ ಕೆಲವರು ರಸ್ತೆ ಬದಿಯಲ್ಲಿ ಕಸ ಬಿಸಾಡಿ ಹೋಗ್ತೀದ್ದಾರೆ.

ಶ್ರೀರಾಂಪುರ ಪಟ್ಟಣ ಪಂಚಾಯಿತಿ ಸಿಇಓ ಶ್ರೀಧರ್ ರವರು ಸ್ವಚ್ಚತೆಗಾಗಿ ಹತ್ತಾರು ಜಾಗೃತಿ ಕಾರ್ಯಕ್ರಮ ಮಾಡಿ ಅರಿವು ಮೂಡಿಸಿದ್ರೂ.ನಂತರ ಕಸ ಎಸೆಯದಂತೆ ಮನವಿ ಮಾಡಿದ್ರೂ. ಆದರೇ ಏತ ಪ್ರಕಾರ ರಸ್ತೆ ಬದಿಯಲ್ಲಿ ಜನ ಕಸ ಎಸೆದು ಹೋಗ್ತೀದ್ದಾರೆ.ಆದ್ದರಿಂದ ಎಚ್ಚರಿಕೆ ನೀಡಿದ್ದೇವೆ.
ಸಾರ್ವಜನಿಕರು ಇದೇ ರೀತಿ ರಸ್ತೆ ಬದಿಯಲ್ಲಿ ಕಸ ಹಾಕಿದ್ರೇ ವಿಶೇಷ ತಂಡ ರಚಿಸಿ ದಂಡ ವಿಧಿಸಲಾಗುವುದಾಗಿ ತಿಳಿಸಿದರು.

 

Leave a Reply

Your email address will not be published.