ಮೈಸೂರು:6 ಜೂನ್ 2022
ನಂದಿನಿ ಮೈಸೂರು
ಜೂನ್ 13 ರಂದು ನಡೆಯುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದ್ದು ಪಕ್ಷೇತರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆಯುತ್ತಿದೆ.
ದಕ್ಷಿಣ ಪದವೀಧರ ಕ್ಷೇತ್ರದಿಂದ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿ ವಕೀಲೆ ಸುಜಾತ ಎಚ್.ಪಿ ಇಂದು ಮೈಸೂರಿನ ಅರಣ್ಯ ಭವನಕ್ಕೆ ಭೇಟಿ ನೀಡಿ ಕ್ರಮ ಸಂಖ್ಯೆ 19 ಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಎಂದು ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಸುಜಾತ ಮಾತನಾಡಿ ನಾನು ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ನಾನು ಯಾವುದೇ ರಾಜಕೀಯ ಪಕ್ಷದಲ್ಲಿಲ್ಲ.ನಾನು ಸ್ವತಂತ್ರ ಅಭ್ಯರ್ಥಿಯಾಗಿ
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದೇನೆ.ಇಂದು ಅರಣ್ಯ ಭವನದ ಕಚೇರಿಗೆ ಆಗಮಿಸಿ ಮತಯಾಚಿಸಿದ್ದೇನೆ.ಮೈಸೂರು, ಚಾಮರಾಜನಗರ, ಮಂಡ್ಯ,ಹಾಸನದ ಕಾಲೇಜು,ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ನನಗೆ ಮತ ಹಾಕುವಂತೆ ಮನವಿ ಮಾಡಿದ್ದೇನೆ.ಪದವಿದರರಿಗೆ ಅನುಕೂಲವಾಗುವಂತಹ ಸೇವೆ ಸಲ್ಲಿಸಲು ನಾನು ಕಣಕ್ಕಿಳಿದ್ದಿದ್ದೇನೆ.ಕ್ರಮ ಸಂಖ್ಯೆ 19 ಕ್ಕೆ ಮತ ಹಾಕಿ ನಿಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.