ಸುಡುವ ರುದ್ರಭೂಮಿಯಲ್ಲಿ ನನ್ನ ಜನ್ಮದಿನಾಚರಣೆ:ಕೆ‌ಎಸ್.ಶಿವರಾಮು

ಮೈಸೂರು:6 ಜೂನ್ 2022

ನಂದಿನಿ ಮೈಸೂರು

ನನ್ನ ಜನ್ಮ ದಿನದ ಅಂಗವಾಗಿ ಚಾಮುಂಡಿಬೆಟ್ಟದ ಪಾದದ ಸುಡುವ ರುದ್ರಭೂಮಿಯಲ್ಲಿ ದ್ರಾವಿಡರು, ಮುಸ್ಲಿಮರು, ಕ್ರೈಸ್ತರ ಸೌಹಾರ್ದಕೂಟ ಹಾಗೂ ಸಹಪಂಕ್ತಿ ಭೋಜನ ಏರ್ಪಡಿಸಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಕೆ.ಎಸ್. ಶಿವರಾಮು ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧರ್ಮ ಧರ್ಮಗಳ ನಡುವೆ ಇಂದು ವೈಷಮ್ಯ ಭಿತ್ತಲಾಗುತ್ತಿದೆ. ಹೀಗಾಗಿ ಯುವಜನತೆಗೆ ಸಾಮರಸ್ಯದ ಸಂದೇಶ ನೀಡಲು ಹಾಗೂ ದ್ರಾವಿಡರ ಇತಿಹಾಸ ಓದಲು ಪ್ರೇರೇಪಿಸಲೆಂದು ಈ ವೇಳೆ ದ್ರಾವಿಡ ಪದ ಬಳಸಲಾಗಿದೆ.

ಜೂನ್ 8 ರಂದು ಏರ್ಪಡಿಸಿರುವ ಕಾರ್ಯಕ್ರಮಕ್ಕೆ
ಕನ್ನಡ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ. ಅರವಿಂದ ಮಾಲಗತ್ತಿ ಚಾಲನೆ ನೀಡುವರು.ದ್ರಾವಿಡರು, ಮುಸ್ಲಿಮರು, ಕ್ರೈಸ್ತ ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಜ್ಞಾನಪ್ರಕಾಶ ಸ್ವಾಮೀಜಿ, ಪ್ರೊ. ಪ್ರೊ. ಶಬ್ಬೀರ್ ಮುಸ್ತಫಾ, ಫಾದರ್ ಜೇಮ್ಸ್ ಡೊಮಿನಿಕ್, ಪ್ರೊ. ಮಹೇಶ್ಚಂದ್ರಗುರು, ಪ್ರೊ.ಕೆ.ಎಸ್. ಭಗವಾನ್, ಪ್ರೊ. ಕಾಳೇಗೌಡ ನಾಗವಾರ, ಇನ್ನಿತರರು ಹಾಜರಿರುವರು. ಎಲ್ಲರಿಗೂ ಮಾಂಸಾಹಾರ ಹಾಗೂ ಸಸ್ಯಾಹಾರ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ
ಯೋಗೇಶ್ ಉಪ್ಪಾರ್, ಕಲೀಂ, ಲೋಕೇಶ್‌ಕುಮಾರ್ ಮಾದಾಪುರ ಹಾಜರಿದ್ದರು.

Leave a Reply

Your email address will not be published. Required fields are marked *