ಮೈಸೂರು :8 ಡಿಸೆಂಬರ್ 2021
ನಂದಿನಿ
ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಡಾ.ಸಿ.ವೆಂಕಟೇಶ್ ಅವರ ಮೇಲೆ ಜಾತಿ ನಿಂದನೆಯ ಸುಳ್ಳು ಆರೋಪ ಮಾಡುತ್ತಿರುವುದನ್ನ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಮೈಸೂರಿನ ಸ್ಪೋಟ್ಸ್ ಪೆವಿಲಿಯನ್ ನಲ್ಲಿರುವ
ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಮುಂಭಾಗ ಜಮಾಹಿಸಿದ ಅವರು ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಯೋಗಿರಾಜ್ ಮಾತನಾಡಿ ಡಾ.ಸಿ.ವೆಂಕಟೇಶ್ ಅವರು ಯಾವುದೇ ಜಾತಿ ನಿಂದನೆ ಮಾಡಿರುವುದಿಲ್ಲ . ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿರುತ್ತಾರೆ . ಇವರ ಮೇಲೆ ದೂರು ನೀಡಿರುವವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ಆಚರಣೆಯನ್ನು ವಿದ್ಯಾರ್ಥಿನಿಲಯದಲ್ಲಿ ಹೊರಗಿನಿಂದ ಬಂದಿದ್ದ ಐದಾರು ಜನರೊಂದಿಗೆ ಮದ್ಯಪಾನ ಮಾಡಿಕೊಂಡು ಗಲಾಟೆ ಮಾಡುತ್ತಾ ನಡೆಸುತ್ತಿದ್ದರು . ಇದರಿಂದ ನಮ್ಮ ಓದಿಗೆ ತೊಂದರೆ ಆಗಿದ್ದರಿಂದ ನಾವು ಇದನ್ನು ವಾರ್ಡನ್ ಆದ ಡಾ.ಸಿ.ವೆಂಕಟೇಶ್ ಅವರಿಗೆ ರಾತ್ರಿ 30 ರಲ್ಲಿ ಕರೆ ಮಾಡಿ ತಿಳಿಸಿರುತ್ತೇವೆ . ಆಗ ಅವರು ಆ ವಿದ್ಯಾರ್ಥಿಗಳಿಗೆ ಬೈದು ಬುದ್ದಿ ಹೇಳಿದ್ದು ಇಂತಹ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಪಡೆದು ಮಾಡಿ ಎಂದು ತಿಳಿಸಿರುತ್ತಾರೆ . ಅಷ್ಟಕ್ಕೇ ಇವರಿಗೆ ಆಗದವರೆಲ್ಲಾ ಸೇರಿಕೊಂಡು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ . ಮದ್ಯಪಾನ ಮಾಡಿಕೊಂಡು ಗಲಾಟೆ ಮಾಡುತ್ತಿರುವ ಇಂತಹ ವಿದ್ಯಾರ್ಥಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಹಾಗು ನಮಗೆ ಸಂಘಟನೆಗಳಿಂದ ಬೆದರಿಕೆಗಳು ಬರುತ್ತಿದ್ದ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿದ್ಯಾ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಭಾಗಿಯಾಗಿದ್ದರು.