ಮೈಸೂರು:8 ಡಿಸೆಂಬರ್ 2021
ನಂದಿನಿ
ಕೋರೋನಾ ಆತಂಕ ದಿನೇ ದಿನೇ ಹೆಚ್ಚಾಗುತ್ತಿದ್ದು ಮಕ್ಕಳ ಸುರಕ್ಷತೆಗಾಗಿ ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ.
ಹೌದು
ಇಂದು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾರಾಧ್ಯ ಮೈಸೂರಿನ ಜಯನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲೆಯಲ್ಲಿ ಕೈಗೊಂಡಿರುವ ಸುರಕ್ಷತೆ ಕುರಿತು ಪರಿಶೀಲನೆ ನಡೆಸಿದರು. ಊಟೋಪಾಚಾರ, ಶಾಲೆಯಲ್ಲಿರುವ ವ್ಯವಸ್ಥೆ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದುಕೊಂಡರು.
ನಂತರ ಮಾತನಾಡಿದ ಅವರು ಕೋರೋನಾ ಹಿನ್ನಲೆ ಶಾಲೆಯ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದೇವೆ.ನಮ್ಮ ವ್ಯಾಪ್ತಿಗೆ ಬರುವ ಪ್ರತಿಯೊಂದು ಶಾಲೆಯ ಶಿಕ್ಷಕರನ್ನ ಸಭೆ ಕರೆದು ಮಕ್ಕಳ ಸುರಕ್ಷತೆ ಕಾಪಾಡುವಂತೆ ಸೂಚಿಸಿದ್ದೇವೆ.ಸೂಚಿಸಿದಂತೆ ಎಲ್ಲಾ ಶಾಲಾ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.ಇಂದು ಜಯನಗರದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ.ಶಾಲೆಯಲ್ಲಿ ವಾತಾವರಣ,ಮಕ್ಕಳಿಗೆ ಕೊರೋನಾ ಜಾಗೃತಿ,ಕಡ್ಡಾಯ ಮಾಸ್ಕ್, ಮಾ ಸ್ಯಾನಿಟೈಸರ್ ವ್ಯವಸ್ಥೆ, ಸಾಮಾಜಿಕ ಅಂತರ,ಎಲ್ಲಾ ಸುರಕ್ಷಿತ ವ್ಯವಸ್ಥೆ
ಸೇರಿದಂತೆ
ಶಾಲೆಯಲ್ಲಿ ಎಲ್ಲಾ ರೀತಿ ಜಾಗೃತಿ ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಶಾಲೆಯ ಶಿಕ್ಷಕರು ಮಾತನಾಡಿ ಮಕ್ಕಳಿಗೆ ಶಾಲೆಯಲ್ಲಿ ಮುಕ್ಕಾಲೂ ಗಂಟೆಗೊಮ್ಮೆ ಸ್ಯಾನಿಟೈಸರ್ ಗಂಟೆ ಬಾರಿಸಲಾಗುತ್ತದೆ.ಶಾಲೆಯ ಸಿಬ್ಬಂದಿಗಳು ಪ್ರತಿಯೊಂದು ಮಗುವಿಗೂ ಸ್ಯಾನಿಟೈಸರ್ ನೀಡುತ್ತಾರೆ.ಶಾಲೆಯ ಒಳಗೂ ಹೊರಗೂ ಮಾಸ್ಕ್ ,ಸ್ಯಾನಿಟೈಸರ್ ಕಡ್ಡಾಯ ಮಾಡಿದ್ದೇವೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಕ್ಕಳಿಗೆ ಪ್ರತಿದಿನ ತಿಳಿಸುತ್ತೇವೆ ಎಂದರು.