ಶಾಲಾ ಮಕ್ಕಳಿಗೆ ಮೊಟ್ಟೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವ ಮಠಾಧೀಶರು ಮೊದಲು ತಮ್ಮ ಕಾವಿ ಕಳಚಿ ನಂತರ ರಾಜಕಾರಣ ಮಾಡಲಿ: ಕೆ.ಎಸ್.ಶಿವರಾಮು

ಮೈಸೂರು: 9 ಡಿಸೆಂಬರ್ 2021

ನಂದಿನಿ

ಶಾಲಾ ಮಕ್ಕಳಿಗೆ ಕೋಳಿ ಮೊಟ್ಟೆ ನೀಡುವುದನ್ನು ವಿರೋಧಿಸಿ ಕೆಲವು ಮಠಾಧೀಶರು ಸಮಾವೇಶ ಮಾಡಲು ಹೊರಟಿದ್ದಾರೆ. ಈ ರೀತಿ ರಾಜಕಾರಣ ಮಾಡುತ್ತಿರುವ ಮಠಾಧೀಶರು ಮೊದಲು ತಮ್ಮ ಕಾವಿ ಕಳಚಿ ನಂತರ ರಾಜಕಾರಣ ಮಾಡಲಿ ಎಂದು
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು
ಸವಾಲೆಸೆದರು.

ಮಕ್ಕಳಿಗೆ ಕೋಳಿಮೊಟ್ಟೆ ನೀಡುವುದನ್ನು ವಿರೋಧಿಸುವುದು ವಿಕೃತ ಮನಸ್ಥಿತಿ. ಈ ಮೂಲಕ ಮಕ್ಕಳ ಪೌಷ್ಟಿಕಾಂಶವನ್ನು ಕಿತ್ತುಕೊಳ್ಳಲಾಗುತ್ತಿದೆ.
ಈ ಮಠಾಧೀಶರು ತಮ್ಮ ಮಠಗಳಲ್ಲಿ ದೇವಸ್ಥಾನಗಳಲ್ಲಿ ಮೊಟ್ಟೆ ಸೇವಿಸುವವರು ಕಾಣಿಕೆ ನೀಡಬಾರದು ಎಂದು ಫಲಕ ಹಾಕಬೇಕು. ಮೊಟ್ಟೆ ಸೇವಿಸುವವರ, ಮಾರಾಟ ಮಾಡುವವರ ಕಾಣಿಕೆಗಳು ಇವರಿಗೆ ಬೇಕು. ಆದರೆ ಮೊಟ್ಟೆ ನೀಡುವುದು ಬೇಡ ಎನ್ನುವುದು ಸರಿಯಲ್ಲ ಎಂದು ಖಂಡಿಸಿದರು.
ಮೊಟ್ಟೆಯ ಜತೆಗೆ ಹಾಲು ಮತ್ತು ಹಣ್ಣನ್ನೂ ಸರ್ಕಾರ ನೀಡಬೇಕು. ಇದರಿಂದ ಮಕ್ಕಳ ಶಾಲಾ ಹಾಜರಾತಿ ಪ್ರಮಾಣ ಹೆಚ್ಚುತ್ತದೆ. ಮೊಟ್ಟೆ ವಿತರಣೆ ವಿರುದ್ಧ ಸಮಾವೇಶ ಮಾಡಲು ಹೊರಟಿರುವುದು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ.
ತನ್ನ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬಾರದು ಎಂದು ಆಗ್ರಹಿಸಿ ಡಿ. 10ರಂದು ಬೆಳಿಗ್ಗೆ 11.30 ಕ್ಕೆ ಪತ್ರ ಚಳವಳಿ ನಡೆಸಲಾಗುವುದು ಎಂದರು.

ಮುಂದುವರೆದು ಮಾತನಾಡಿದ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಥಿಸುತ್ತಿರುವ ಡಾ.ಡಿ.ತಿಮ್ಮಯ್ಯ ರವರಿಗೆ ಮತ ಹಾಕುವಂತೆ ಮನವಿ ಮಾಡಿದರು

ಸವಿತಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ನಾಗೇಶ್
ಕುಂಬಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್‌.ಪ್ರಕಾಶ,
ಮುಖಂಡರಾದ ರೋಹಿತ್, ಲೋಕೇಶ್ ಮಾದಾಪುರ, ಹರೀಶ್ ಮೊಗಣ್ಣಾ ಇದ್ದರು.

Leave a Reply

Your email address will not be published. Required fields are marked *