ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ವೃದ್ದಿಸಿಕೊಳ್ಳಿ : ಸಮಾಜ ಸೇವಕಿ ಕಿನಕಹಳ್ಳಿ ಇಂದಿರಾ ಮಹೇಶ್ ಕರೆ

ನಂದಿನಿ ಮೈಸೂರು

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ವೃದ್ದಿಸಿಕೊಳ್ಳಿ : ಸಮಾಜ ಸೇವಕಿ ಕಿನಕಹಳ್ಳಿ ಇಂದಿರಾ ಮಹೇಶ್ ಕರೆ

ಯಳಂದೂರು :2 ನವೆಂಬರ್ 2022: ಪ್ರಸ್ತುತ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿದ್ದು, ಇದು ವಿಷಾಧನೀಯ ವಿಚಾರವಾಗಿದೆ. ಮಕ್ಕಳು ವಿದ್ಯಾರ್ಥಿ ದೆಸೆಯಿಂದಲೇ ಮಾನವೀಯ ಮೌಲ್ಯಗಳನ್ನು ವೃದ್ದಿಸಿಕೊಳ್ಳುವ ಅಗತ್ಯತೆ ಇದೆ ಎಂದು ಸಮಾಜ ಸೇವಕಿ ಕಿನಕಹಳ್ಳಿ ಇಂದಿರಾ ಮಹೇಶ್ ಕರೆ ನೀಡಿದ್ದಾರೆ.

ಅವರು ತಾಲ್ಲೂಕಿನ ಕಿನಕಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ತಂದೆಯವರಾದ ಮಾಜಿ ಶಾಸಕ ದಿವಂಗತ ಕೆ ಪಿ ಶಾಂತಮೂರ್ತಿರವರ 19ನೇ ವರ್ಷದ ಪುಣ್ಯಸ್ಮರಣೆಯ ನಿಮಿತ್ತ ಶಾಲೆಯ 100ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಸೇರಿದಂತೆ ಇನ್ನಿತರ ಪಠ್ಯಪರಿಕರಗಳನ್ನು ವಿತರಿಸಿ ಮಾತನಾಡಿ ಪ್ರಸಕ್ತ ದಿನಗಳಲ್ಲಿ ಮಾನವೀಯ ಮೌಲ್ಯಗಳು ಸಮಾಜದಲ್ಲಿ ಕುಸಿಯುತ್ತಿದ್ದು, ಅದನ್ನು ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ನೆರವಾಗಬೇಕೆಂದ ಅವರು ವಿದ್ಯಾರ್ಥಿಗಳು ಸಹ ತಮ್ಮಲ್ಲಿ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಬಹುಮುಖ ಪ್ರತಿಭೆಗಳಾಗಿ ಹೊರಹೊಮ್ಮಬೇಕು. ಇದರೊಂದಿಗೆ ರಾಷ್ಟ್ರಪ್ರೇಮ ಬೆಳೆಸಿಕೊಂಡು ದೇಶದ ಸತ್ಪ್ರಜೆಗಳಾಗಿ ದೇಶದ ಒಳಿತಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ದಿವಂಗತ ಕೆ.ಪಿ. ಶಾಂತಮೂರ್ತಿರವರ ಕುಟುಂಬಸ್ಥರಾದ ರತ್ನಮ್ಮ ಶಾಂತಮೂರ್ತಿ, ಕೆ.ಬಿ. ಬಸವಣ್ಣ, ಕೆ.ಬಿ. ಜೈದೇವ್, ಅನ್ನಪೂರ್ಣ, ಶಂಕರ್‍ನಾಗ್, ಶಾಲೆಯ ಮುಖ್ಯಶಿಕ್ಷಕ ಬಸವಣ್ಣ, ಅಗರ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಗೋವಿಂದ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *