ನಂದಿನಿ ಮೈಸೂರು
ಶ್ರೀ ಕುಲಾಲಗುಂಡ ಬ್ರಹ್ಮಾರ್ಯ ಕುಂಬಾರರ ಸಂಘ (ರಿ), ಮೈಸೂರು ಸಮುದಾಯದ ಪ್ರತಿಭಾನ್ವಿತ ಪದವಿ ಹಾಗೂ ಸ್ನಾತಕೋತರ ವಿಧ್ಯಾರ್ಥಿಗಳಿಗೆ
“ವಿಶೇಷ ಮಾರ್ಗದರ್ಶನ ಶಿಬಿರ” ಏರ್ಪಡಿಸಲಾಗಿತ್ತು.
ಮೈಸೂರಿನ ಸಂಘದ ಆವರಣದಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ಕುಲಾಲಗುಂಡ ಬ್ರಹ್ಮಾರ್ಯ ಕುಂಬಾರರ ಸಂಘ ಅಧ್ಯಕ್ಷರಾದ ಹೆಚ್.ಎಸ್. ಪ್ರಕಾಶ್ರವರ ಅಧ್ಯಕ್ಷತೆಯಲ್ಲಿ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿಗಳಾದ
ಗಾಯಿತ್ರಿ ರವರು ಚಾಲನೆ ನೀಡಿದರು.
ವಿಶೇಷ ಸಂಪನ್ಮೂಲ ಮಾರ್ಗದರ್ಶಕರಾದ ಪ್ರಸನ್ನ ಕುಮಾರ್ ರವರು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕುಂಬಾರರ ಸಮುದಾಯದವರು ಮೈಸೂರು ಜಿಲ್ಲೆಯಲ್ಲಿ ಸುಮಾರು 75ಸಾವಿರ ಜನರಿದ್ದಾರೆ.ಸಮುದಾಯದ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿಶೇಷ ಮಾರ್ಗದರ್ಶನ ನೀಡಲಾಯಿತು. ಸುಮಾರು 75 ಜನ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯರಾದ
ಡಾ|| ಬಿ.ಎಸ್. ಕೃಷ್ಣ ಪ್ರಸಾದ್,ನಿವೃತ್ತ ಮುಖ್ಯ ಅಭಿಯಂತರರಾದ ಆರ್. ಪ್ರಧಾನ ಕಾರ್ಯದರ್ಶಿ ಕೆ.ಆರ್ ಸೋಮಶೇಖರ್ ,ಶ್ರೀನಿವಾಸ್, ಕಾರ್ತಿಕ್, ರಾಜೇಶ್ವರಿ, ನಾಗರಾಜು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಭಾಗಿಯಾಗಿದ್ದರು.