ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸ್ ಚಾಲನೆ

ನಂದಿನಿ ಮೈಸೂರು

ಕ್ಲಿಯರ್‌ಮೆಡಿ ರೇಡಿಯಂಟ್ ಆಸ್ಪತ್ರೆ ,ಅನ್ನ ಪೂರ್ಣ ಕಣ್ಣಿನ ಆಸ್ಪತ್ರೆ,ಸಮೃದ್ಧಿ ವಾರ್ತೆ ವಾರ ಪತ್ರಿಕೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. 

 

ಮೈಸೂರಿನ ಹೂಟಗಳ್ಳಿ ಕೆ.ಹೆಚ್.ಬಿ ಕಾಲೋನಿಯ ಸುದರ್ಶನ್ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಶಿಬಿರಕ್ಕೆ
ವಿಜಯನಗರ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸ್ ರವರು ಚಾಲನೆ ನೀಡಿದರು.

ಈ ಶಿಬಿರದಲ್ಲಿ ಉಚಿತ ಬಿ.ಪಿ. ಪರೀಕ್ಷೆ, ಮಧುಮೇಹ, ಇ.ಸಿ.ಜಿ. ಹೊಟ್ಟೆನೋವು, ಸೊಂಟನೋವು, ಬೆನ್ನುನೋವು, ಮೂತ್ರ ಸೋಂಕು, ಮೂತ್ರದಲ್ಲಿ ಉರಿ, ಮೂತ್ರದಲ್ಲಿ ರಕ್ತ, ಕಿಡ್ನಿಯಲ್ಲಿನ ಕಲ್ಲುಗಳು, ಮೂತ್ರ ವಿಸರ್ಜಿಸಲು ಕಷ್ಟವಾಗಿರುವುದು, ಮುಖ ಮತ್ತು ಕಾಲುಗಳಲ್ಲಿ ಊತ, ಗಂಟಲಿನಲ್ಲಿ ನೋವು, ಆಹಾರ ನುಂಗಲು ತೊಂದರೆ, ಮಲವಿಸರ್ಜನೆಯಲ್ಲಿ ತೊಂದರೆ, ಮಲಬದ್ಧತೆ, ಹೊಟ್ಟೆ ಉಬ್ಬಸ, ಮಲದೊಂದಿಗೆ ರಕ್ತಸ್ರಾವ ಇತ್ಯಾದಿ ತಪಾಸಣೆ ಮಾಡಲಾಯಿತು.ನುರಿತ ತಜ್ಞವೈದ್ಯರು ತಪಾಸಣೆ ಹಾಗೂ ಸಮಾಲೋಚನೆ ನಡೆಸಿದರು.

167 ಮಂದಿ ಆರೋಗ್ಯ ತಪಾಸಣೆ ಶಿಬಿರವನ್ನು ಸದುಪಯೋಗಪಡಿಸಿಕೊಂಡರು.

ಶಿಬಿರದಲ್ಲಿ ಆಸ್ಪತ್ರೆಯ ನುರಿತ ವೈಧ್ಯರಾದ ಡಾ. ನವೀನ್ ಹಾಗೂ ಸಾರ್ವಜನಿಕ ಸಂಪರ್ಕಿಧಿಕಾರಿ ಈರಪ್ಪ, ಆಸ್ಪತ್ರೆಯ ಸಿಬ್ಬಂದಿ ಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *