ಮುಖ್ಯಸ್ಥರ ಸರ್ವಾಧಿಕಾರಿ ನಡೆ ಕಾರಿಡಾರ್ ನಲ್ಲಿ ತರಗತಿ

ಮುಖ್ಯಸ್ಥರ ಸರ್ವಾಧಿಕಾರಿ ನಡ

ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ವಿಭಾಗದ ಆಡಳಿತದಲ್ಲಿ ಸರ್ವಾಧಿಕಾರಿ ನಡೆಯನ್ನು ಪ್ರದರ್ಶಿಸುತ್ತಿದ್ದಾರೆ, ವಿಭಾಗಕ್ಕೆ ಹೊಸ ಕಟ್ಟಡ ನಿರ್ಮಾಣವಾಗಿದ್ದು , ಆ ಕಟ್ಟಡಕ್ಕೆ ಈ ಹಿಂದೆಯೇ ವಿಫಲ ಪ್ರಯತ್ನ ನಡೆಸಿದ್ದರು ಆಗ ಕಟ್ಟಡದ ಗುತ್ತಿಗೆದಾರರು ಬೀಗ ಜಡಿದಿದ್ದರು ಆದರೆ ಈಗ ವಿಭಾಗದಲ್ಲಿ ಅಧ್ಯಾಪಕರ ಗಮನಕ್ಕೆ ತರದೇ ನೂತನ ಕಟ್ಟಡದಲ್ಲಿ ಕಾರ್ಯ ಚಟುವಟಿಕೆಗಳು ಪ್ರಾರಂಭವಾಗಲು ವಿಶ್ವವಿದ್ಯಾನಿಲಯದಿಂದ ಅಧಿಕೃತ ಆದೇಶಗಳನ್ನು ಹೊರಡಿಸದಿದ್ದರು ಸಹ ವಿಭಾಗ ಮುಖ್ಯಸ್ಥರು ತಾವೇ ಸ್ವತಃ ನೂತನ ಕಟ್ಟಡಕ್ಕೆ ಸಾಮಾಗ್ರಿಗಳು, ಪೀಠೋಪಕರಣಗಳನ್ನು ಸ್ಥಳಾಂತರಿಸಿ ಸರ್ವಾಧಿಕಾರಿ ನಡೆಯನ್ನು ಪ್ರದರ್ಶಿಸುತ್ತಿದ್ದಾರೆ ಇದರ ಜೊತೆ ವಿಭಾಗದ ಪ್ರಮುಖ ದಾಖಲೆಗಳು ಮತ್ತು ಅಂಕಪಟ್ಟಿಗಳು ವಿಭಾಗದ ರಹಸ್ಯ ಕಡತಗಳನ್ನು ಯಾವುದೇ ಪಂಚನಾಮೇ ಮಾಡದೇ ಬೇಕಾಬಿಟ್ಟಿ ಸಾಗಿಸಿರುತ್ತಾರೆ ಹಾಗೂ ವಿ.ವಿ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿ‌ಗಳಿಂದ್ದಲೇ ಸಾಗಿಸಿರುತ್ತಾರೆ ಈ ಬಗ್ಗೆ ವಿಶ್ವವಿದ್ಯಾನಿಲಯ ಸೂಕ್ತ ಕ್ರಮವಹಿಸಬೇಕೆಂದು ಕೇಳುತ್ತೇವೆ.

ನೂತನ ಕಟ್ಟಡದಲ್ಲಿ ತರಗತಿಗಳು ನಡೆಸಲು ಮೂಲಸೌಕರ್ಯಗಳ ಕೊರತೆಯಿದ್ದು ಹಳೆಕಟ್ಟಡದಲ್ಲಿ ಬೀಗ ಹಾಕಿರುವುದರಿಂದ ತರಗತಿಗಳನ್ನು ಕಾರಿಡಾರ ನಲ್ಲಿ ತೆಗೆದುಕೊಳ್ಳಲಾಗಿದೆ.

Leave a Reply

Your email address will not be published. Required fields are marked *