ಮೈಸೂರು ದಸರಾ ಕ್ರೀಡಾಕೂಟದಲ್ಲಿ ರಾಜರ ಕಾಲದ ಇತಿಹಾಸ ಮರುಕಳಿಸಬೇಕು: ಕ್ರೀಡಾ ಸಚಿವ ಬಿ.ನಾಗೇಂದ್ರ

ನಂದಿನಿ ಮೈಸೂರು

*ದಸರಾ ಕ್ರೀಡಾಕೂಟದಲ್ಲಿ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ವಿಶೇಷ ಆದ್ಯತೆ : ಸಚಿವ ಬಿ. ನಾಗೇಂದ್ರ*

*ಅಕ್ಟೋಬರ್ 11 ರಿಂದ 21 ರವರೆಗೆ 10 ದಿನಗಳ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ*

*ಸೆಪ್ಟೆಂಬರ್ 06: ಬೆಂಗಳೂರು*

ಮೈಸೂರು ದಸರಾ ಕ್ರೀಡಾಕೂಟದಲ್ಲಿ ರಾಜರ ಕಾಲದ ಇತಿಹಾಸ ಮರುಕಳಿಸಬೇಕ, ಇಡೀ ರಾಜ್ಯದ ಜನರು ಮೆಚ್ಚಿವಂತಹ ಮಾದರಿ ಕ್ರೀಡಾಕೂಟವನ್ನು ಆಯೋಜನೆ ಮಾಡಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರವರು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು

ಬುಧವಾರ ಬೆಂಗಳೂರು ನಗರದ ಒಲಂಪಿಕ್ ಭವನದಲ್ಲಿ ನಡೆದ 2023 – ನೇ ಸಾಲಿನ ಮೈಸೂರು ದಸರಾ ಕ್ರೀಡಾಕೂಟ ಆಯೋಜಿಸುವ ಅಂಗವಾಗಿ ನಡೆದ ಪೂರ್ವಸಿದ್ದತಾ ಸಭೆಯಲ್ಲಿ ಈ ಬಾರಿ ಬಹಳ ವಿಶೇಷವಾಗಿ ಸಿಎಂ ತವರು ಜಿಲ್ಲೆ ಮೈಸೂರು ನಲ್ಲಿ ನಡೆಯುವ ಈ ಭಾರಿಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಸುಸಜ್ಜಿತ ಊಟ ಮತ್ತು ವಾಸ್ತವ್ಯ ವ್ಯವಸ್ಥೆ ಕಲ್ಪಿಸಿ ಕಳೆದ ಸರ್ಕಾರದಲ್ಲಿ ನಡೆದ ಕ್ರೀಡಾಕೂಟಕ್ಕಿಂತ ಇನ್ನುಷ್ಟು ಮೆರಗು ನೀಡುವ ಕ್ರೀಡೆಗಳನ್ನು ಆಯೋಜಿಸಿ ಕ್ರೀಡಾಭಿಮಾನಿಗಳಿಗೆ ಇನ್ನುಷ್ಟು ಉತ್ತೇಜನ ನೀಡಬೇಕು.

ಈ ಭಾರಿಯ ದಸರಾ ಕ್ರೀಡಾಕೂಟಕ್ಕೆ ಅಗತ್ಯ ಅನುದಾನವನ್ನು ಪಡೆದು ಅಕ್ಟೋಬರ್ 11 ರಿಂದ 21 ರವರೆಗೆ ಒಟ್ಟು ಹತ್ತುದಿನಗಳು ನಡೆಯುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತಾಲ್ಲೂಕು & ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಒಲಂಪಿಕ್ ಕ್ರೀಡೆಗಳನ್ನು ಆಯೋಜಿಸಬೇಕು.

ಈ ಸಂಧರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಮತ್ತು ಕರ್ನಾಟಕ ಒಲಂಪಿಕ್ ಅಸೋಶೆಷನ್ ಅಧ್ಯಕ್ಷರಾದ ಡಾ.ಕೆ. ಗೋವಿಂದರಾಜ್ ರವರು, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆಯುಕ್ತರಾದ ಶಶಿಕುಮಾರ್, ಮೈಸೂರು ಜಿಲ್ಲಾಧಿಕಾರಿಗಳಾದ ಕೆ. ವಿ ರಾಜೇಂದ್ರ, ಉಪ ನಿರ್ದೇಶಕರಾದ ಜಿತೇಂದ್ರ ಶೆಟ್ಟಿ, ಇನ್ನಿತರರು ಅಧಿಕಾರಿಗಳು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *